ವಿಷಯಕ್ಕೆ ಹೋಗು

ವೈಡೂರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Turquoise
Turquoise pebble, one inch (25 mm) long. This pebble is greenish and therefore low grade
General
ವರ್ಗPhosphate mineral
ರಾಸಾಯನಿಕ ಸೂತ್ರCuAl6(PO4)4(OH)8·4H2O
Identification
ಬಣ್ಣBlue, blue-green, green
ಸ್ಫಟಿಕ ಗುಣಲಕ್ಷಣMassive, nodular
ಸ್ಫಟಿಕ ಪದ್ಧತಿTriclinic
ಸೀಳುGood to perfect - usually N/A
ಬಿರಿತConchoidal
ಮೋಸ್ ಮಾಪಕ ಗಡಸುತನ5-6
ಹೊಳಪುWaxy to subvitreous
ಪುಡಿಗೆರೆBluish white
ವಿಶಿಷ್ಟ ಗುರುತ್ವ2.6-2.9
ದ್ಯುತಿ ಗುಣಗಳುBiaxial (+)
ವಕ್ರೀಕರಣ ಸೂಚಿnα = 1.610 nβ = 1.615 nγ = 1.650
ದ್ವಿವಕ್ರೀಭವನ+0.040
ಬಹುವರ್ಣಕತೆWeak
ಕರಗು ಗುಣFusible in heated HCl
ಕರಗುವಿಕೆSoluble in HCl
ಉಲ್ಲೇಖಗಳು[][][]

ವೈಡೂರ್ಯ ವು ಒಂದು ಅಪಾರದರ್ಶಕವಾದ, ನೀಲಿಯಿಂದ-ಹಸಿರಿನವರೆಗಿನ ಬಣ್ಣದಲ್ಲಿರುವ ಖನಿಜವಾಗಿದೆ. ಇದು ತಾಮ್ರ ಹಾಗೂ ಅಲ್ಯುಮಿನಿಯಂನ ಒಂದು ಜಲೀಯ ಫಾಸ್ಫೇಟ್‌ ಆಗಿದ್ದು, CuAl6([2])4(OH)8•4[3] ಎಂಬ ರಾಸಾಯನಿಕ ಸೂತ್ರವನ್ನು ಹೊಂದಿದೆ. ಇದು ಅಪ್ಪಟವಾದ ದರ್ಜೆಗಳಲ್ಲಿ ಅಪರೂಪ ಹಾಗೂ ಮೌಲ್ಯಯುಕ್ತವಾಗಿದ್ದು, ತನ್ನ ಅನನ್ಯ ವರ್ಣಾಂಶದ ಕಾರಣದಿಂದಾಗಿ ಸಾವಿರಾರು ವರ್ಷಗಳಿಂದ ಒಂದು ರತ್ನ ಹಾಗೂ ಅಲಂಕಾರಿಕ ಕಲ್ಲಾಗಿ ತುಂಬ ಮಹತ್ವವನ್ನು ಪಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ವೈಡೂರ್ಯ, ಇತರ ಬಹುಪಾಲು ಅಪಾರದರ್ಶಕ ರತ್ನಗಳಂತೆ ಅಪಮೌಲ್ಯೀಕರಣಕ್ಕೆ ಒಳಗಾಗಿದೆ; ಸಂಸ್ಕರಣಾ ವಿಧಾನಗಳು, ನಕಲಿ ಉತ್ಪನ್ನಗಳು, ಮತ್ತು ಸಂಶ್ಲೇಷಿತ ಉತ್ಪನ್ನಗಳು ಮಾರುಕಟ್ಟೆಗೆ ಪರಿಚಯಿಸಲ್ಪಡುತ್ತಿರುವುದೇ ಇದಕ್ಕೆ ಕಾರಣವೆನ್ನಬಹುದು.

ಈ ವಸ್ತುವು ಅನೇಕ ಹೆಸರುಗಳಿಂದ ಪರಿಚಿತವಾಗಿದೆಯಾದರೂ, ಟರ್ಕಿಯ ಮೂಲಕ ಹಿಂದೆಲ್ಲಾ ಆಮದು ಮಾಡಿಕೊಳ್ಳಲಾಗುತ್ತಿದ್ದ ಮಧ್ಯ ಏಷ್ಯಾ[] ಈ ಸಾಮಗ್ರಿಗೆ ಫ್ರೆಂಚ್‌ ಭಾಷೆಯಲ್ಲಿ ಟರ್ಕ್ವೀ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಈ ಹೆಸರಿನಿಂದಲೇ ಟರ್ಕ್ವಾಸ್‌‌ (ವೈಡೂರ್ಯ) ಎಂಬ ಪದವು 16ನೇ ಶತಮಾನದ ಸುಮಾರಿಗೆ ಹುಟ್ಟಿಕೊಂಡಿತು.

ವೈಡೂರ್ಯದ ಗುಣಲಕ್ಷಣಗಳು

[ಬದಲಾಯಿಸಿ]

ವೈಡೂರ್ಯದ ಅತ್ಯಂತ ಅಪ್ಪಟ-ಸೂಕ್ಷ್ಮ ಸ್ವರೂಪವೂ ಸೀಳುವಿಕೆಗೆ ಒಳಗಾಗಬಲ್ಲದಾಗಿದ್ದು, ಕೇವಲ 6ಕ್ಕಿಂತ ಕಡಿಮೆಯಿರುವ, ಅಥವಾ ಕಿಟಕಿ ಗಾಜಿಗಿಂತ ಕೊಂಚವೇ ಹೆಚ್ಚಿರುವ ಒಂದು ಗರಿಷ್ಟ ಕಠೋರತೆಯನ್ನು ಅದು ತಲುಪಬಲ್ಲದು.[] ಸ್ವಭಾವಕ್ಕನುಗುಣವಾಗಿ ಒಂದು ಗುಪ್ತಸ್ಫಟಿಕೀಯ ಖನಿಜವಾಗಿರುವ ವೈಡೂರ್ಯವು, ಹೆಚ್ಚೂಕಮ್ಮಿ ಎಂದಿಗೂ ಏಕ ಹರಳುಗಳನ್ನು ರೂಪಿಸುವುದಿಲ್ಲ ಮತ್ತು ಇದರ ಎಲ್ಲಾ ಗುಣಲಕ್ಷಣಗಳು ಅತೀವವಾಗಿ ಬದಲಾಗಬಲ್ಲದಾಗಿವೆ. ಇದರ ಹರಳು ವ್ಯವಸ್ಥೆಯನ್ನು ಕ್ಷ-ಕಿರಣ ವಿವರ್ತನಾ ಪರೀಕ್ಷಿಸುವಿಕೆಯ ಮೂಲಕ ನೋಡಿದಾಗ, ಅದು ತ್ರಿಪ್ರವಣಾಕ್ಷದ ಸ್ವರೂಪದಲ್ಲಿರುವುದು ಸಾಬೀತಾಗಿದೆ. ಕಡಿಮೆ ಮಟ್ಟದ ಕಠೋರತೆಯಿದ್ದಾಗ ಕಡಿಮೆ ಮಟ್ಟದ ವಿಶಿಷ್ಟ ಗುರುತ್ವ (2.60–2.90) ಹಾಗೂ ಮಹತ್ತರವಾಗಿರುವ ರಂಧ್ರೀಯವಾಗಿರುವಿಕೆಯು ಕಂಡುಬರುತ್ತದೆ: ಈ ಗುಣಲಕ್ಷಣಗಳು ಹರಳಿನ ಗಾತ್ರವನ್ನು ಅವಲಂಬಿಸಿವೆ. ವೈಡೂರ್ಯದ ಕಾಂತಿಯು ವಿಶಿಷ್ಟವಾಗಿರುವ ಮೇಣದಂಥ ಲಕ್ಷಣದಿಂದ ಮೊದಲ್ಗೊಂಡು ಉಪಗಾಜಿನಂಥ ಲಕ್ಷಣದವರೆಗಿನ ವ್ಯಾಪ್ತಿಯನ್ನು ಹೊಂದಿದೆ. ಇದರ ಪಾರದರ್ಶಕತೆಯು ಸಾಮಾನ್ಯವಾಗಿ ಅಪಾರದರ್ಶಕವಾಗಿದ್ದರೂ ಸಹ, ತೆಳುವಾಗಿರುವ ವಿಭಾಗಗಳಲ್ಲಿ ಅದು ಅರೆಪಾರದರ್ಶಕವಾಗಿರಬಹುದು. ಖನಿಜದ ಇತರ ಗುಣಲಕ್ಷಣಗಳು ಬದಲಾದಂತೆ ಬಣ್ಣವು ಬದಲಾಗಬಲ್ಲದಾಗಿರುತ್ತದೆ; ಹೀಗಾಗಿ ಬಿಳಿ ಬಣ್ಣದಿಂದ ಒಂದು ಪುಡಿ ನೀಲಿ ಬಣ್ಣಕ್ಕೆ, ಅದರಿಂದ ಒಂದು ಆಕಾಶ ನೀಲಿ ಬಣ್ಣಕ್ಕೆ, ಮತ್ತು ಒಂದು ನೀಲಿ-ಹಸಿರು ಬಣ್ಣದಿಂದ ಒಂದು ಹಳದಿ ಬಣ್ಣ ಬೆರೆತ ಹಸಿರು ಬಣ್ಣದವರೆಗೆ ಇದರ ಬಣ್ಣಗಳ ವ್ಯಾಪ್ತಿಯಿರುತ್ತದೆ. ಇದರಲ್ಲಿನ ನೀಲಿ ಬಣ್ಣಕ್ಕೆ ವಿಶಿಷ್ಟ ಉಜ್ಜ್ವಲವರ್ಣದ ತಾಮ್ರವು ಕಾರಣವಾಗಿದ್ದರೆ, ಕಬ್ಬಿಣದ ಅಶುದ್ಧತೆಗಳು (ಅಲ್ಯುಮಿನಿಯಂನ್ನು ಪಲ್ಲಟಗೊಳಿಸಿದ್ದು) ಅಥವಾ ನಿರ್ಜಲೀಕರಣವು ಇದರ ಹಸಿರು ಬಣ್ಣಕ್ಕೆ ಕಾರಣವಾಗಿರಬಹುದು.

ವೈಡೂರ್ಯದ ವಕ್ರೀಭವನ ಸೂಚಿಯು (589.3 nm ಸೋಡಿಯಂ ಬೆಳಕಿನಿಂದ ಅಳೆಯಲ್ಪಟ್ಟಂತೆ) ಸರಿಸುಮಾರು 1.61 ಅಥವಾ 1.62ರಷ್ಟಿದೆ; ಇದು ಒಂದು ರತ್ನಶಾಸ್ತ್ರೀಯ ವಕ್ರೀಭವನ ಮಾಪಕದ ಮೇಲೆ ಒಂದು ಏಕ ಸೂಚ್ಯಂಕವಾಗಿ ನೋಡಲ್ಪಟ್ಟ ಒಂದು ಸರಾಸರಿ ಮೌಲ್ಯವಾಗಿದ್ದು, ವೈಡೂರ್ಯದ ಹೆಚ್ಚೂಕಡಿಮೆ ಮಾರ್ಪಡಿಸಲಾಗದ ಬಹುಸ್ಫಟಿಕೀಯ ಸ್ವರೂಪಕ್ಕೆ ಅದು ಕಾರಣವಾಗಿದೆ. 1.61–1.65ರಷ್ಟಿರುವ ಒಂದು ಸೂಚ್ಯಂಕವನ್ನು (ದ್ವಿವಕ್ರೀಭವನ 0.040, ಎರಡಕ್ಷದ ಧನಾತ್ಮಕ) ಅಪರೂಪ ಏಕ ಹರಳುಗಳಿಂದ ಪಡೆಯಲಾಗಿದೆ. ಕೈಯಲ್ಲಿ-ಹಿಡಿದ ಒಂದು ರೋಹಿತ ದರ್ಶಕದ ನೆರವಿನಿಂದಲೂ ಒಂದು ಹೀರಿಕೆಯ ಬಣ್ಣಗಳ ಪಟ್ಟಿಯನ್ನು ಪಡೆಯಬಹುದಾಗಿದ್ದು, ಇದು 432 ನ್ಯಾನೋಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ ಒಂದು ಗೆರೆಯನ್ನು ಮತ್ತು 460 ನ್ಯಾನೋಮೀಟರ್‌ಗಳ ವ್ಯಾಪ್ತಿಯಲ್ಲಿ ಒಂದು ದುರ್ಬಲ ಪಟ್ಟಿಯನ್ನು ಪ್ರಕಟಪಡಿಸುತ್ತದೆ (ಪ್ರಬಲವಾದ ಪ್ರತಿಫಲಿತ ಬೆಳಕಿನ ನೆರವಿನಿಂದ ಇದನ್ನು ಉತ್ತಮ ರೀತಿಯಲ್ಲಿ ಕಾಣಬಹುದು). ದೀರ್ಘತರಂಗದ ನೇರಳಾತೀತ ಬೆಳಕಿನ ಅಡಿಯಲ್ಲಿ, ವೈಡೂರ್ಯವು ಹಸಿರು, ಹಳದಿ ಅಥವಾ ಉಜ್ಜ್ವಲ ನೀಲಿ ಬಣ್ಣಗಳನ್ನು ಸಾಂದರ್ಭಿಕವಾಗಿ ಪ್ರತಿದೀಪಿಸಬಹುದು; ಹೃಸ್ವ ತರಂಗದ ನೇರಳಾತೀತ ಹಾಗೂ ಕ್ಷ-ಕಿರಣಗಳ ಅಡಿಯಲ್ಲಿ ಇದು ನಿಷ್ಕ್ರಿಯವಾಗಿರುತ್ತದೆ.

ಬಿಸಿಮಾಡಿದ ಹೈಡ್ರೋಕ್ಲೋರಿಕ್‌ ಆಮ್ಲವನ್ನು ಹೊರತುಪಡಿಸಿ ಇನ್ನಾವುದರಲ್ಲೂ ವೈಡೂರ್ಯವು ಕರಗುವುದಿಲ್ಲ. ಇದರ ಎಳೆಯು ಒಂದು ನಸುಬಣ್ಣದ ನೀಲಿಛಾಯೆಯ ಬಿಳಿಯಲ್ಲಿದ್ದರೆ, ಇದರ ಭಂಜಿತ ಮುಖವು ಶಂಕುವಿನಾಕಾರದಲ್ಲಿದ್ದು, ಒಂದು ಮೇಣದಂಥ ಕಾಂತಿಯನ್ನು ಹೊರಸೂಸುತ್ತದೆ. ಇತರ ರತ್ನಗಳಿಗೆ ಹೋಲಿಸಿದಾಗ ವೈಡೂರ್ಯವು ಕಡಿಮೆ ಕಠೋರತೆಯನ್ನು ಹೊಂದಿದ್ದರೂ, ಇದು ಒಂದು ಒಳ್ಳೆಯ ಮೆರುಗನ್ನು ಪಡೆದುಕೊಳ್ಳುತ್ತದೆ. ವೈಡೂರ್ಯದಲ್ಲಿ ಪೈರೈಟಿನ ಪಟ್ಟೆಗಳೂ ಸಹ ದಟ್ಟವಾಗಿ ತುಂಬಿಕೊಂಡಿರಬಹುದು ಅಥವಾ ಗಾಢವಾದ, ಜೇಡದಂಥ ಲೈಮನೈಟ್‌ ನಮೂನೆಯು ಅಲ್ಲಲ್ಲಿ ಎರಚಿದಂತೆ ಕಾಣಬಹುದು.

ರೂಪುಗೊಳ್ಳುವಿಕೆ

[ಬದಲಾಯಿಸಿ]

ಪೂರ್ವಭಾವಿಯಾಗಿ-ಅಸ್ತಿತ್ವದಲ್ಲಿರುವ ಖನಿಜಗಳ ಹವಾ ಪರಿಣಾಮ ಹಾಗೂ ಉತ್ಕರ್ಷಣದ ಅವಧಿಯಲ್ಲಿ ವ್ಯಾಪಿಸುವ ಆಮ್ಲೀಯ ಜಲೀಯ ದ್ರಾವಣಗಳ ಚಟುವಟಿಕೆಯಿಂದ ಒಂದು ದ್ವಿತೀಯಕ ಖನಿಜವಾಗಿ ವೈಡೂರ್ಯವು ಸ್ಪಷ್ಟವಾಗಿ ರೂಪುಗೊಳ್ಳುತ್ತದೆ. ಉದಾಹರಣೆಗೆ, ಚಾಲ್ಕೋಪೈರೈಟ್‌‌‌ನಂಥ ಪ್ರಾಥಮಿಕ ತಾಮ್ರದ ಸಲ್ಫೈಡುಗಳಿಂದ ಅಥವಾ, ಮ್ಯಾಲಕೈಟ್‌ ಇಲ್ಲವೇ ಅಜುರೈಟ್‌‌ನಂಥ ದ್ವಿತೀಯಕ ಕಾರ್ಬೊನೇಟುಗಳಿಂದ ತಾಮ್ರವು ಬರಬಹುದು; ಫೆಲ್ಡ್‌ಸ್ಪಾರ್‌‌‌‌‌ನಿಂದ ಅಲ್ಯೂಮಿನಿಯಂ, ಹಾಗೂ ಆಪಟೈಟ್‌‌‌ನಿಂದ ರಂಜಕವು ಜನ್ಯವಾಗುತ್ತವೆ. ಅನೇಕ ವೇಳೆ ಲೈಮನೈಟ್‌ ಹಾಗೂ ಇತರ ಕಬ್ಬಿಣ ಆಕ್ಸೈಡುಗಳ ಜೊತೆಗೂಡಿಕೊಂಡು, ವಿಶಿಷ್ಟವಾದ ರೀತಿಯಲ್ಲಿ ಅತೀವವಾಗಿ ಮಾರ್ಪಾಡುಗೊಂಡ ಅಗ್ನಿಪರ್ವತದ ಬಂಡೆಗಳಲ್ಲಿನ ತುಂಬುವಿಕೆ ಅಥವಾ ಹೆಕ್ಕಳಿಕೆ ಗಟ್ಟುವಿಕೆಯ ಕುಳಿಗಳು ಮತ್ತು ಭಂಜಿತ ಮುಖಗಳಾಗಿ ನಿರ್ಜಲ ವಲಯಗಳಲ್ಲಿ ವೈಡೂರ್ಯವು ವಿಶಿಷ್ಟವಾಗಿ ಕಂಡುಬರುವುದರಿಂದಾಗಿ, ಹವಾಮಾನ ಅಂಶಗಳು ಒಂದು ಪ್ರಮುಖ ಪಾತ್ರವನ್ನು ವಹಿಸುವಂತೆ ತೋರುತ್ತವೆ. ಅಮೆರಿಕಾದ ನೈಋತ್ಯ ಭಾಗದಲ್ಲಿ, ತಾಮ್ರ ಸಲ್ಫೈಡು ನಿಕ್ಷೇಪಗಳ ಹವಾ ಪರಿಣಾಮದ ಉತ್ಪನ್ನಗಳೊಂದಿಗೆ ವೈಡೂರ್ಯವು ಹೆಚ್ಚೂಕಮ್ಮಿ ಮಾರ್ಪಡಿಸಲಾಗದ ರೀತಿಯಲ್ಲಿ ಜೊತೆಗೂಡಿರುತ್ತದೆ; ಈ ತಾಮ್ರ ಸಲ್ಫೈಡು ನಿಕ್ಷೇಪಗಳು ಪೊಟಾಷಿಯಂ ಫೆಲ್ಡ್‌ಸ್ಪಾರ್‌ನ್ನು ಹೊಂದಿರುವ ಪಾರ್ಫಿರಿಯಂಥ ಅಂತಸ್ಸರಣೀಯಗಳಲ್ಲಿ ಅಥವಾ ಅದರ ಸುತ್ತಮುತ್ತ ಕಂಡುಬರುತ್ತವೆ. ಕೆಲವೊಂದು ಸಂಭವಿಸುವಿಕೆಗಳಲ್ಲಿ ಅಲ್ಯುನೈಟ್‌ ಎಂದು ಕರೆಯಲ್ಪಡುವ ಪೊಟಾಷಿಯಂ ಅಲ್ಯೂಮಿನಿಯಂ ಸಲ್ಫೇಟು, ಒಂದು ಪ್ರಧಾನ ದ್ವಿತೀಯಕ ಖನಿಜವಾಗಿರುತ್ತದೆ. ವಿಶಿಷ್ಟವೆನಿಸುವಂತೆ, ವೈಡೂರ್ಯದ ಖನಿಜೀಕರಣವು ತುಲನಾತ್ಮಕವಾಗಿ ಒಂದು ಮೇಲುಮೇಲಿನ ಆಳಕ್ಕೆ ಸೀಮಿತಗೊಳಿಸಲ್ಪಟ್ಟಿರುತ್ತದೆ; ಈ ಆಳವು ...20 metres (66 ft)ಗಿಂತ ಕಡಿಮೆಯಾಗಿರುತ್ತದೆ. ಆದರೆ, ದ್ವಿತೀಯಕ ದ್ರಾವಣಗಳು ಹೆಚ್ಚಿನ ರೀತಿಯಲ್ಲಿ ತೂರಿಕೊಂಡು ಹೋಗಬಲ್ಲ ಅಥವಾ ನೀರಿನ ಮಟ್ಟಕ್ಕಿರುವ ಆಳವು ಹೆಚ್ಚಿನದಾಗಿರುವ ಆಳವಾದ ಭಂಜಿತ ಮುಖದ ವಲಯಗಳ ಉದ್ದಕ್ಕೂ ಇದು ಕಂಡುಬರುವುದಿಲ್ಲ.

ವೈಡೂರ್ಯದ ಸಂಭವಿಸುವಿಕೆಗಳ ಲಕ್ಷಣಗಳು ಒಂದು ದ್ವಿತೀಯಕ ಅಥವಾ ಸೂಪರ್‌‌ಜೀನ್‌ ಮೂಲದೊಂದಿಗೆ ಹೊಂದಿಕೆಯನ್ನು ಹೊಂದಿವೆಯಾದರೂ, ಕೆಲವೊಂದು ಮೂಲಗಳು ಒಂದು ಹೈಪೋಜೀನ್‌ ಮೂಲವನ್ನು ಉಲ್ಲೇಖಿಸುತ್ತವೆ. ಹೈಪೋಜೀನ್‌ ಊಹಾ ಸಿದ್ಧಾಂತವು ಪ್ರತಿಪಾದಿಸುವ ಪ್ರಕಾರ, ಜಲೀಯ ದ್ರಾವಣಗಳು ಗಮನಾರ್ಹ ಆಳದಲ್ಲಿ ಜಲೋಷ್ಣೀಯ ಪ್ರಕ್ರಿಯೆಗಳಿಂದ ಹುಟ್ಟಿಕೊಳ್ಳುತ್ತವೆ. ಆರಂಭದಲ್ಲಿ ಅತಿ ಹೆಚ್ಚಿನ ತಾಪಮಾನದಲ್ಲಿ, ಈ ದ್ರಾವಣಗಳು ಮೇಲ್ಮೈ ಪದರಗಳೆಡೆಗೆ ಮೇಲಕ್ಕೇರುತ್ತವೆ; ಈ ಪ್ರಕ್ರಿಯೆಯಲ್ಲಿ ಅವು ಪೂರ್ವಭಾವಿಯಾಗಿ ಅಸ್ತಿತ್ವದಲ್ಲಿರುವ ಖನಿಜಗಳಿಗೆ ಸೇರಿದ ಅವಶ್ಯಕ ಧಾತುಗಳೊಂದಿಗೆ ಪಾರಸ್ಪರಿಕೆ ಕ್ರಿಯೆಯಲ್ಲಿ ತೊಡಗಿ ಅವುಗಳನ್ನು ಪ್ರತ್ಯೇಕಿಸುತ್ತವೆ. ದ್ರಾವಣಗಳು ತಣ್ಣಗಾದಂತೆ ವೈಡೂರ್ಯವು ಒತ್ತರಿಸುತ್ತದೆ ಮತ್ತು ತನ್ಮೂಲಕ, ಸುತ್ತುವರೆದಿರುವ ಬಂಡೆಯೊಳಗಿನ ಕುಳಿಗಳು ಹಾಗೂ ಭಂಜಿತ ಮುಖಗಳ ಮೇಲೆ ಪದರವನ್ನು ರೂಪಿಸುತ್ತದೆ. ಈ ಹೈಪೋಜೀನ್‌ ಪ್ರಕ್ರಿಯೆಯು ತಾಮ್ರದ ಸಲ್ಫೈಡಿನ ಮೂಲ ನಿಕ್ಷೇಪಕ್ಕೆ ಅನ್ವಯಿಸುತ್ತದೆ; ಆದಾಗ್ಯೂ, ಒಂದು ಹೈಪೋಜೀನ್‌ ಪ್ರಕ್ರಿಯೆಯಿಂದ ವೈಡೂರ್ಯದ ಸಂಭವಿಸುವಿಕೆಗಳ ಅನೇಕ ಲಕ್ಷಣಗಳ ವಿವರಣೆ ನೀಡುವುದು ಕಷ್ಟಕರ. ಅದರನ್ವಯ, ವೈಡೂರ್ಯ ಹರಳುಗಳೊಳಗೆ ಎರಡು ಹಂತದ ದ್ರವದ ಒಳಗೂಡಿಸುವಿಕೆಗಳ ವರದಿಗಳಿದ್ದು, ವಿವರಣೆಯ ಅಗತ್ಯವಿರುವ 90ರಿಂದ 190 °Cವರೆಗಿನ ಏಕರೂಪಗೊಳಿಸುವಿಕೆಯ ತಾಪಮಾನಗಳನ್ನು ಅವು ನೀಡುತ್ತವೆ.

ವೈಡೂರ್ಯವು ಹೆಚ್ಚೂಕಮ್ಮಿ ಯಾವಾಗಲೂ ಗುಪ್ತಸ್ಫಟಿಕೀಯ ಮತ್ತು ಸ್ಫಟಿಕಾಕಾರವಲ್ಲದ ಸ್ವಭಾವವನ್ನು ಹೊಂದಿದ್ದು, ಯಾವುದೇ ನಿರ್ದಿಷ್ಟವಾದ ಬಾಹ್ಯ ಆಕಾರವನ್ನು ಅದು ತಾಳುವುದಿಲ್ಲ. ಅತ್ಯಲ್ಪ ಪ್ರಮಾಣದಲ್ಲೂ ಸಹ ಹರಳುಗಳು ತುಂಬಾ ಅಪರೂಪವೆನ್ನಬಹುದು. ವಿಶಿಷ್ಟವೆನಿಸುವಂತೆ ಇದರ ಸ್ವರೂಪವು ನಾಳದಂಥ ರೀತಿಯಲ್ಲಿ ಅಥವಾ ಭಂಜಿತ ಮುಖದ ತುಂಬುವಿಕೆಯ, ಗಂಟುಗಂಟಾದ, ಅಥವಾ ಗೊಂಚಲಿನಂಥ ರೀತಿಯಲ್ಲಿರುತ್ತದೆ. ಸುಣ್ಣಕಲ್ಲು ತೊಂಗಲಿನ ಸ್ವರೂಪಗಳೂ ಸಹ ಕಂಡುಬಂದಿವೆ. ಫೆಲ್ಡ್‌ಸ್ಪಾರ್‌‌, ಆಪಟೈಟ್‌, ಇತರ ಖನಿಜಗಳು, ಅಥವಾ ಕೆಲವೊಮ್ಮೆ ಪಳೆಯುಳಿಕೆಗಳನ್ನೂ ಸಹ ವೈಡೂರ್ಯವು ಹುಸಿರೂಪದ ರೀತಿಯಲ್ಲಿ ಪಲ್ಲಟಗೊಳಿಸಬಹುದು. ಓಡೊಂಟೊಲೈಟ್‌ ಎಂಬುದು ಪಳೆಯುಳಿಕೆ ಮೂಳೆ ಅಥವಾ ದಂತವಾಗಿದ್ದು, ವೈಡೂರ್ಯದಿಂದ ಅಥವಾ ವಿವಿಯಾನೈಟ್‌ ಎಂದು ಕರೆಯಲ್ಪಡುವ ಕಬ್ಬಿಣದ ಫಾಸ್ಫೇಟ್‌ನಂಥ ಇದೇ ಬಗೆಯ ಫಾಸ್ಫೇಟ್‌ ಖನಿಜಗಳಿಂದ ಇದು ಮಾರ್ಪಾಡುಗೊಳಿಸಲ್ಪಟ್ಟಿವೆ ಎಂದು ಸಾಂಪ್ರದಾಯಿಕವಾಗಿ ಪರಿಗಣಿಸಲ್ಪಟ್ಟಿದೆ. ಕ್ರೈಸೋಕೊಲ್ಲಾದಂಥ ಇತರ ದ್ವಿತೀಯಕ ತಾಮ್ರ ಖನಿಜಗಳೊಂದಿಗಿನ ಅಂತರ ಬೆಳವಣಿಗೆಯೂ ಸಹ ಸಾಮಾನ್ಯವಾಗಿದೆ.

ದೊರಕುವಿಕೆ

[ಬದಲಾಯಿಸಿ]
ಅರಿಜೋನಾದ ಮಿನರಲ್‌ ಪಾರ್ಕ್‌ನಿಂದ ಪಡೆಯಲಾದ, ಬೆಣಚುಕಲ್ಲಿನೊಂದಿಗಿನ ಶಿಲಾಖಂಡದಲ್ಲಿರುವ ಸ್ಫಟಿಕಾಕಾರದ್ದಲ್ಲದ ವೈಡೂರ್ಯ.

ಗಣಿಯಿಂದ ತೆಗೆಯಲ್ಪಟ್ಟ ಅನೇಕ ರತ್ನಗಳ ಪೈಕಿ ವೈಡೂರ್ಯವು ಮೊದಲನೆಯದಾಗಿತ್ತು, ಮತ್ತು ಅನೇಕ ಐತಿಹಾಸಿಕ ತಾಣಗಳು ಬರಿದುಮಾಡಲ್ಪಟ್ಟಿದ್ದರೆ, ಕೆಲವು ಇಂದಿಗೂ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಸಣ್ಣ-ಪ್ರಮಾಣದ, ಅನೇಕವೇಳೆ ಕಾಲೋಚಿತವಾದ ಕಾರ್ಯಾಚರಣೆಗಳಾಗಿದ್ದು, ನಿಕ್ಷೇಪಗಳ ಸೀಮಿತ ವ್ಯಾಪ್ತಿ ಹಾಗೂ ದೂರವಾಗಿರುವಿಕೆಗೆ ಇದಕ್ಕೆ ಕಾರಣವಾಗಿದೆ. ಇವುಗಳ ಪೈಕಿಯ ಬಹುಪಾಲು ಗಣಿಕಾರ್ಯಗಳನ್ನು ಅಲ್ಪಪ್ರಮಾಣದ ಯಂತ್ರೀಕರಣ ಅಥವಾ ಯಾವುದೇ ಯಂತ್ರೀಕರಣ ವ್ಯವಸ್ಥೆಯಿಲ್ಲದೆಯೇ ಕೇವಲ ಮಾನವ ಶ್ರಮದಿಂದಲೇ ಮಾಡಲಾಗುತ್ತದೆ. ಆದಾಗ್ಯೂ, ಬೃಹತ್‌‌-ಪ್ರಮಾಣದ ತಾಮ್ರ ಗಣಿಗಾರಿಕಾ ಕಾರ್ಯಾಚರಣೆಗಳ ಒಂದು ಉಪ-ಉತ್ಪನ್ನವಾಗಿ ವೈಡೂರ್ಯವನ್ನು ಅನೇಕ ವೇಳೆ ಪಡೆಯಲಾಗುತ್ತದೆ; ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ.

ಇರಾನ್‌ನ ಮೆಶೆಡ್‌ನಲ್ಲಿನ ವೈಡೂರ್ಯದ ಕತ್ತರಿಸುವಿಕೆ ಮತ್ತು ಸಾಣೆಹಿಡಿಯುವಿಕೆ.1973.

ಇರಾನ್‌

[ಬದಲಾಯಿಸಿ]

ಹಿಂದೊಮ್ಮೆ ಪರ್ಷಿಯಾ ಎಂದೇ ಹೆಸರಾಗಿದ್ದ ಈ ವಲಯವು, ಕಡೇಪಕ್ಷ 2,000 ವರ್ಷಗಳಿಂದಲೂ, ವೈಡೂರ್ಯದ ಒಂದು ಪ್ರಮುಖ ಮೂಲವಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಸ್ವಾಭಾವಿಕವಾಗಿ ನೀಲಿ ಬಣ್ಣದಲ್ಲಿದ್ದು ನಿರ್ಜಲೀಕರಣದ ಕಾರಣದಿಂದಾಗಿ ಬಿಸಿಗೊಂಡಾಗ ಹಸಿರು ಬಣ್ಣಕ್ಕೆ ತಿರುಗುವ ಈ ನಿಕ್ಷೇಪವು, ಆಲಿ-ಮೆರ್ಸಾಯಿಯ ...2,012-metre (6,601 ft) ಪರ್ವತ ಶಿಖರವಾದ ನೆಯ್‌ಶಾಬರ್‌‌‌ನಲ್ಲಿನ ಒಂದು ಗಣಿ-ತುಂಬಿದ ವಲಯಕ್ಕೆ ಸೀಮಿತಗೊಳಿಸಲ್ಪಟ್ಟಿದೆ; ಆಲಿ-ಮೆರ್ಸಾಯಿ ಪರ್ವತಶ್ರೇಣಿಯು ಇರಾನ್‌‌ಖೊರಾಸಾನ್‌ ಪ್ರಾಂತದ ರಾಜಧಾನಿಯಾದ ಮ್ಯಾಶ್‌ಹ್ಯಾಡ್‌‌‌ನಿಂದ ಹತ್ತಾರು ಕಿಲೋಮೀಟರುಗಳಷ್ಟು ದೂರವಿದೆ. ಗಾಳಿ-ಬಿಸಿಲುಗಳಿಗೆ ಒಡ್ಡಲ್ಪಟ್ಟ ಹಾಗೂ ಒಡೆಯಲ್ಪಟ್ಟ ಒಂದು ಜ್ವಾಲಾಮುಖಿ ಶಿಲೆಯು ವೈಡೂರ್ಯಕ್ಕೆ ಆಶ್ರಯದಾತನಾಗಿದ್ದು, ಅದು ಲೈಮನೈಟ್‌ ಹಾಗೂ ಮರಳುಗಲ್ಲಿನ ಪದರಗಳ ನಡುವಿನ ಅದರ ಮೂಲ ಸ್ಥಾನದಲ್ಲಿ ಹಾಗೂ ಪರ್ವತದ ತಳಭಾಗದಲ್ಲಿನ ಸಣ್ಣ ಜಲ್ಲಿಯ ನಡುವಿನಲ್ಲಿ ಹೀಗೆ ಎರಡೂ ಕಡೆಯೂ ಕಂಡುಬರುತ್ತದೆ. ಈ ಗಣಿಗಳು, ಸಿನಾಯಿ ಪೆನಿನ್ಸುಲಾದ ಇತರ ಗಣಿಗಳೊಂದಿಗೆ ಸೇರಿಕೊಂಡು ಅತ್ಯಂತ ಹಳೆಯ ಗಣಿಗಳು ಎನಿಸಿಕೊಂಡಿವೆ.[ಸೂಕ್ತ ಉಲ್ಲೇಖನ ಬೇಕು]

ಸಿನಾಯಿ

[ಬದಲಾಯಿಸಿ]

ಕಡೇಪಕ್ಷ ಮೊದಲ ರಾಜವಂಶದ (3000 BCE) ಕಾಲದಿಂದಲೂ, ಮತ್ತು ಪ್ರಾಯಶಃ ಅದಕ್ಕಿಂತಲೂ ಮುಂಚಿತವಾದ ಕಾಲದಿಂದಲೂ, ವೈಡೂರ್ಯವು ಈಜಿಪ್ಟಿಯನ್ನರಿಂದ ಬಳಸಲ್ಪಡುತ್ತಿತ್ತು ಮತ್ತು ಸ್ಥಳೀಯ ಮೊನಿಟು ಜನಾಂಗದವರಿಂದ "ವೈಡೂರ್ಯದ ದೇಶ" ಎಂದೇ ಕರೆಯಲ್ಪಡುವ ಸಿನಾಯಿ ಪೆನಿನ್ಸುಲಾದಲ್ಲಿ ವೈಡೂರ್ಯವನ್ನು ಅವರು ಗಣಿಯಿಂದ ತೆಗೆಯುತ್ತಿದ್ದರು. ಸದರಿ ವಲಯದಲ್ಲಿ ಆರು ಗಣಿಗಳಿದ್ದು, ಅವೆಲ್ಲವೂ ಪೆನಿನ್ಸುಲಾದ ನೈಋತ್ಯ ಕಡಲತೀರದ ಮೇಲೆ ಸ್ಥಿತವಾಗಿವೆ ಮತ್ತು ಅವುಗಳ ವಿಸ್ತೀರ್ಣವು ಸುಮಾರು ...650 square kilometres (250 sq mi)ನಷ್ಟಿದೆ. ಈ ಗಣಿಗಳ ಪೈಕಿ, ಸೆರಾಬಿಟ್‌ ಎಲ್‌-ಖಾದಿಮ್‌ ಹಾಗೂ ವಾಡಿ ಮಘಾರೆಹ್‌ ಗಣಿಗಳು ಒಂದು ಐತಿಹಾಸಿಕ ದೃಷ್ಟಿಕೋನದಿಂದ ಅತ್ಯಂತ ಪ್ರಮುಖವಾಗಿರುವ ಎರಡು ಗಣಿಗಳಾಗಿದ್ದು, ಇವು ಚಿರಪರಿಚಿತವಾಗಿರುವ ಗಣಿಗಳ ಪೈಕಿ ಅತ್ಯಂತ ಹಳೆಯವಾಗಿವೆ ಎಂದು ಭಾವಿಸಲಾಗಿದೆ. ಹಥೋರ್‌‌ಗೆ ಸಮರ್ಪಿಸಲಾಗಿರುವ ಒಂದು ಪ್ರಾಚೀನ ದೇವಾಲಯದಿಂದ ಸುಮಾರು 4 ಕಿಲೋಮೀಟರುಗಳಷ್ಟು ದೂರದಲ್ಲಿ ಮೊದಲ ಗಣಿಯು ನೆಲೆಗೊಂಡಿದೆ.

ಲಾವಾ ಪ್ರವಾಹದ ಅಗ್ನಿಶಿಲೆಯಿಂದ ಪದರವಾಗಿ ಹರಡಿಕೊಂಡಿರುವ ಅಥವಾ ಮೂಲತಃ ಹರಡಿಕೊಂಡಿದ್ದ ಮರಳುಗಲ್ಲಿನಲ್ಲಿ ವೈಡೂರ್ಯವು ಕಂಡುಬರುತ್ತದೆ. ತಾಮ್ರ ಹಾಗೂ ಕಬ್ಬಿಣದ ಗಣಿಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ. ಬೃಹತ್‌‌-ಪ್ರಮಾಣದ ವೈಡೂರ್ಯ ಗಣಿಗಾರಿಕೆಯು ಇಂದು ಲಾಭದಾಯಕವಲ್ಲದಿದ್ದರೂ ಸಹ, ಗೃಹನಿರ್ಮಿತ ಕೋವಿಮದ್ದನ್ನು ಬಳಸಿಕೊಂಡ ಬೆಡೌಯಿನ್‌ ಜನರಿಂದ ಇಲ್ಲಿನ ನಿಕ್ಷೇಪಗಳು ವಿರಳವಾಗಿ ಕಲ್ಲು ಗಣಿಗಾರಿಕೆ ಮಾಡಲ್ಪಟ್ಟಿವೆ. ಮಳೆಯ-ಚಳಿಗಾಲದ ತಿಂಗಳುಗಳಲ್ಲಿ ಇಲ್ಲಿನ ಗಣಿಗಾರರು ಹಠಾತ್‌ ಪ್ರವಾಹದಿಂದ ಅಪಾಯವನ್ನು ಎದುರಿಸುತ್ತಾರೆ; ಅವ್ಯವಸ್ಥಿತವಾಗಿ ಬಳಸಿಕೊಂಡ ಮರಳುಗಲ್ಲು ಗಣಿಯ ಗೋಡೆಗಳ ಕುಸಿತದಿಂದಾಗಿ ಶುಷ್ಕ ಋತುವಿನಲ್ಲೂ ಸಹ ಕಂಡುಬರುವ ಸಾವು ಹೊರಗೆಲ್ಲೂ ಗೊತ್ತಾಗುವುದೇ ಇಲ್ಲ. ಸಿನಾಯಿ ಮೂಲದ್ರವ್ಯದ ಬಣ್ಣವು ವಿಶಿಷ್ಟವೆನಿಸುವಂತೆ ಇರಾನಿನ ಮೂಲದ್ರವ್ಯಕ್ಕಿಂತ ಹೆಚ್ಚು ಹಸಿರು ಬಣ್ಣದಿಂದ ಕೂಡಿದ್ದರೂ ಸಹ, ಅದು ಸ್ಥಿರವಾದ ಮತ್ತು ತಕ್ಕಮಟ್ಟಿಗೆ ಬಾಳಿಕೆ ಬರುವ ಲಕ್ಷಣವನ್ನು ಹೊಂದಿದೆ ಎಂದು ಭಾವಿಸಲಾಗಿದೆ. ಈಜಿಪ್ಟಿನ ವೈಡೂರ್ಯ ಎಂದು ಅನೇಕವೇಳೆ ಉಲ್ಲೇಖಿಸಲ್ಪಡುವ ಸಿನಾಯಿ ಮೂಲದ್ರವ್ಯವು ವಿಶಿಷ್ಟವೆನಿಸುವಂತೆ ಅತ್ಯಂತ ಅರೆಪಾರದರ್ಶಕವಾಗಿರುತ್ತದೆ. ವರ್ಧನೆ ಮಾಡಿ ನೋಡಿದಾಗ, ಇದರ ಮೇಲ್ಮೈ ರಚನೆಯಲ್ಲಿ ಗಾಢವಾದ ನೀಲಿ ತಟ್ಟೆಗಳು ದಟ್ಟವಾಗಿ ತುಂಬಿಕೊಂಡಿರುವಂತೆ ಕಾಣಿಸುತ್ತದೆ; ಈ ಲಕ್ಷಣವು ಇತರ ತಾಣಗಳಿಂದ ಪಡೆಯಲಾದ ಮೂಲದ್ರವ್ಯದಲ್ಲಿ ಕಂಡುಬರುವುದಿಲ್ಲ.

ಸನಿಹದ ಇಸ್ರೇಲ್‌‌‌‌ಐಲಟ್‌‌‌ಗೆ ಸಾಮೀಪ್ಯದಲ್ಲಿ, ವೈಡೂರ್ಯ, ಮ್ಯಾಲಕೈಟ್‌, ಹಾಗೂ ಕ್ರೈಸೋಕೊಲ್ಲಾಗಳ ಒಂದು ಆಕರ್ಷಕ ಅಂತರ ಬೆಳವಣಿಗೆಯು ಕಂಡುಬಂದಿದೆ. ಈ ಬಂಡೆಯನ್ನು ಐಲಟ್‌ ಕಲ್ಲು ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಅನೇಕವೇಳೆ ಇಸ್ರೇಲಿನ ರಾಷ್ಟ್ರೀಯ ಕಲ್ಲು ಎಂದು ಉಲ್ಲೇಖಿಸಲಾಗುತ್ತದೆ: ಪ್ರವಾಸಿಗರಿಗೆ ಮಾರಾಟ ಮಾಡುವುದಕ್ಕಾಗಿ ಇಲ್ಲಿನ ಸ್ಥಳೀಯ ಕುಶಲಕರ್ಮಿಗಳು ಇದರಲ್ಲಿ ಕೆತ್ತನೆಯ ಕೆಲಸವನ್ನು ಮಾಡುತ್ತಾರೆ.

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]
ಸರಿಸುಮಾರು 1020-1140 CEಗೆ ಸೇರಿದ ಚಾಕೋ ಕೇನಿಯಾನ್‌ನಿಂದ ಪಡೆಯಲಾದ, ಪೂರ್ವಿಕ ಪ್ಯೂಬ್ಲೊ ಜನರ (ಅನಸಾಜಿ) ವೈಡೂರ್ಯ ಮತ್ತು ಕಿತ್ತಳೆ ಆರ್ಜಿಲೈಟ್‌ ಹುದುಗಿಸಿದ ಕಲಾಕೃತಿಗಳ ಒಂದು ಆಯ್ದಶ್ರೇಣಿಯು,ಅಮೆರಿಕಾದ ವೈಡೂರ್ಯದ ವಿಶಿಷ್ಟ ವರ್ಣಶ್ರೇಣಿ ಹಾಗೂ ಬಣ್ಣಬಣ್ಣದ ಮಚ್ಚೆಗಳ ಚಿತ್ರಿಸುವಿಕೆಯನ್ನು ತೋರಿಸುತ್ತದೆ.
ಬಿಸ್‌ಬೀ ವೈಡೂರ್ಯವು ಸಾಮಾನ್ಯವಾಗಿ ಒಂದು ಗಾಢ ಚಾಕೊಲೇಟ್‌ ಕಂದು ಬಣ್ಣದ ಶಿಲಾಖಂಡವನ್ನು ಹೊಂದಿರುತ್ತದೆ.

ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೈಋತ್ಯ ಭಾಗವು ವೈಡೂರ್ಯದ ಒಂದು ಗಮನಾರ್ಹ ಮೂಲವಾಗಿದೆ. ಅರಿಜೋನಾ, ಕ್ಯಾಲಿಫೋರ್ನಿಯಾ (ಸ್ಯಾನ್‌ ಬರ್ನಾರ್ಡಿನೋ, ಇಂಪೀರಿಯಲ್‌, ಮತ್ತು ಇನ್ಯೋ ಜಿಲ್ಲೆಗಳು), ಕೊಲೊರೆಡೋ (ಕೊನೆಜಾಸ್‌, ಎಲ್‌ ಪಾಸೋ, ಲೇಕ್‌, ಮತ್ತು ಸಗುವಾಚೆ ಜಿಲ್ಲೆಗಳು), ನ್ಯೂ ಮೆಕ್ಸಿಕೋ (ಎಡ್ಡಿ, ಗ್ರಾಂಟ್‌, ಒಟೆರೋ, ಮತ್ತು ಸಾಂಟಾ ಫೆ ಜಿಲ್ಲೆಗಳು) ಹಾಗೂ ನೆವಡಾ (ಕ್ಲಾರ್ಕ್‌, ಎಲ್ಕೋ, ಎಸ್ಮೆರೆಲ್ಡಾ ಕೌಂಟಿ, ಯುರೇಕಾ, ಲ್ಯಾಂಡರ್‌, ಮಿನರಲ್‌ ಕೌಂಟಿ ಮತ್ತು ನೈಯೆ ಜಿಲ್ಲೆಗಳು) ಇವೇ ಮೊದಲಾದ ಪ್ರದೇಶಗಳು ವಿಶೇಷವಾಗಿ ವೈಡೂರ್ಯದ ಮೂಲದಿಂದ ಸಮೃದ್ಧವಾಗಿವೆ (ಅಥವಾ ಆಗಿದ್ದವು). ಕ್ಯಾಲಿಫೋರ್ನಿಯಾ ಹಾಗೂ ನ್ಯೂ ಮೆಕ್ಸಿಕೋದ ನಿಕ್ಷೇಪಗಳಲ್ಲಿ ಕೊಲಂಬಿಯನ್ನರ-ಪೂರ್ವದ ಸ್ಥಳೀಯ ಅಮೆರಿಕನ್ನರು ಕಲ್ಲು ಸಾಧನಗಳನ್ನು ಬಳಸಿಕೊಂಡು ಗಣಿಗಾರಿಕೆ ನಡೆಸಿದ್ದರು; ಇವರ ಪೈಕಿ ಕೆಲವರು ಸ್ಥಳೀಯರಾಗಿದ್ದರೆ, ಮತ್ತೆ ಕೆಲವರು ಪ್ರಧಾನ ಮೆಕ್ಸಿಕೊದಷ್ಟು ದೂರದಿಂದ ಬಂದವರಾಗಿದ್ದರು. ನ್ಯೂ ಮೆಕ್ಸಿಕೋದ ಸೆರಿಲ್ಲೋಸ್ ಪ್ರದೇಶವು ಅತ್ಯಂತ ಹಳೆಯ ಗಣಿಗಳ ತಾಣವಾಗಿದ್ದಿರಬಹುದು ಎಂದು ಭಾವಿಸಲಾಗಿದೆ; 1920ರ ದಶಕಕ್ಕೂ ಮುಂಚಿತವಾಗಿ, ಈ ಸಂಸ್ಥಾನವು ದೇಶದ ಬೃಹತ್ತಾದ ತಯಾರಕನಾಗಿತ್ತು; ಇಂದು ಇದು ಹೆಚ್ಚೂಕಮ್ಮಿ ಬರಿದುಮಾಡಲ್ಪಟ್ಟಿದೆ. ಅಪಾಚೆ ಕೆನಿಯನ್‌ ಎಂಬಲ್ಲಿ ನೆಲೆಗೊಂಡಿರುವ ಕ್ಯಾಲಿಫೋರ್ನಿಯಾದಲ್ಲಿನ ಏಕೈಕ ಗಣಿಯು, ಇಂದಿನ ಒಂದು ವಾಣಿಜ್ಯ ಸಾಮರ್ಥ್ಯದ ಅನುಸಾರ ಕಾರ್ಯನಿರ್ವಹಿಸುತ್ತಿದೆ.

ನಾಳದಂಥ ಸ್ವರೂಪದಲ್ಲಿ ಅಥವಾ ಸ್ತರ ತುಂಬುವಿಕೆಗಳ ರೀತಿಯಲ್ಲಿ, ಮತ್ತು ದಟ್ಟವಾದ ಒರಟುಗಟ್ಟಿಗಳ ಸ್ವರೂಪದಲ್ಲಿ ವೈಡೂರ್ಯವು ದೊರಕುತ್ತದೆ; ಇವು ಹೆಚ್ಚಿನಂಶ ಸಣ್ಣಗಾತ್ರದಲ್ಲಿರುತ್ತವೆ. ಬಣ್ಣ ಹಾಗೂ ಬಾಳಿಕೆ ಎರಡರಲ್ಲೂ ಇರಾನಿನ ಮೂಲದ್ರವ್ಯಕ್ಕೆ ಪ್ರತಿಸ್ಪರ್ಧೆಯ ಒಡ್ಡುವ ಅತ್ಯಂತ ಸೂಕ್ಷ್ಮ-ಅಪ್ಪಟವಾದ ಮೂಲದ್ರವ್ಯವು ಕೆಲವೊಮ್ಮೆ ಕಂಡುಬಂದರೂ ಸಹ, ಅಮೆರಿಕಾದ ಬಹುಪಾಲು ವೈಡೂರ್ಯವು ಒಂದು ಕಡಿಮೆ ದರ್ಜೆಯ (ಇದಕ್ಕೆ "ಸುಣ್ಣದ ವೈಡೂರ್ಯ" ಎಂದು ಕರೆಯಲಾಗುತ್ತದೆ) ವೈಡೂರ್ಯವಾಗಿದೆ; ವೈಡೂರ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣದ ಅಂಶವಿದ್ದರೆ, ಹಸಿರು ಬಣ್ಣ ಮತ್ತು ಹಳದಿ ಬಣ್ಣಗಳ ಮೇಲುಗೈ ಕಂಡುಬರುತ್ತದೆ ಎಂದೇ ಅರ್ಥ. ವಿಶಿಷ್ಟವೆನಿಸುವಂತಿರುವ ಸುಲಭವಾಗಿ ಪುಡಿಪುಡಿಯಾಗುವ ಘನತ್ವವು ಸಂಸ್ಕರಿಸದ ಸ್ಥಿತಿಯಲ್ಲಿನ ವೈಡೂರ್ಯದ ಬಳಕೆಯನ್ನು ರತ್ನಾಭರಣಗಳಲ್ಲಿ ಅಸಾಧ್ಯಗೊಳಿಸುತ್ತದೆ. ಮೌಲ್ಯದ ಆಧಾರದ ಮೇಲೆ ಹೇಳುವುದಾದರೆ, ಪ್ರಸಕ್ತವಾಗಿ ಅರಿಜೋನಾ ಪ್ರದೇಶವು ವೈಡೂರ್ಯದ ಅತ್ಯಂತ ಪ್ರಮುಖ ತಯಾರಕನಾಗಿದೆ.[ಸೂಕ್ತ ಉಲ್ಲೇಖನ ಬೇಕು] ಈ ಸಂಸ್ಥಾನದಲ್ಲಿ ಎರಡು ಗಣಿಗಳು ಅಸ್ತಿತ್ವದಲ್ಲಿದ್ದು, ಒಂದು ಸ್ಲೀಪಿಂಗ್‌ ಬ್ಯೂಟಿ ಮೈನ್‌ ಎಂಬ ಹೆಸರಿನ ಗಣಿಯಾಗಿದ್ದರೆ, ಮತ್ತೊಂದು ಕಿಂಗ್‌ಮನ್‌ ಮೈನ್‌ ಎಂಬ ಹೆಸರಿನ ಗಣಿಯಾಗಿದ್ದು, ಇದು ನಗರದ ಹೊರಭಾಗದಲ್ಲಿನ ತಾಮ್ರ ಗಣಿಯೊಂದರ ಪಕ್ಕಪಕ್ಕದಲ್ಲಿಯೇ ಕಾರ್ಯನಿರ್ವಹಿಸುತ್ತದೆ.

ನೆವಡಾ ಪ್ರದೇಶವು ದೇಶದ ಮತ್ತೊಂದು ಪ್ರಮುಖ ತಯಾರಕನಾಗಿದ್ದು, ಇದು ಹೊಂದಿರುವ 120ಕ್ಕೂ ಹೆಚ್ಚಿನ ಗಣಿಗಳು ಗಮನಾರ್ಹ ಪರಿಮಾಣಗಳಲ್ಲಿ ವೈಡೂರ್ಯವನ್ನು ನೀಡಿವೆ. USನಲ್ಲಿನ ಉಳಿದೆಲ್ಲ ಭಾಗಗಳಿಗಿಂತ ಭಿನ್ನವಾಗಿರುವ ನೆವಡಾದ ಬಹುಪಾಲು ಗಣಿಗಳು, ತಮ್ಮ ವೈಡೂರ್ಯ ರತ್ನಕ್ಕಾಗಿ ಗಣಿಕಾರ್ಯವನ್ನು ಪ್ರಧಾನವಾಗಿ ನಿರ್ವಹಿಸಿವೆ ಮತ್ತು ಇತರ ಗಣಿಗಾರಿಕಾ ಕಾರ್ಯಾಚರಣೆಗಳ ಒಂದು ಉಪ-ಉತ್ಪನ್ನವನ್ನು ಅತ್ಯಲ್ಪ ಪ್ರಮಾಣದಲ್ಲಿ ಪಡೆದುಕೊಳ್ಳಲಾಗಿದೆ. ನೆವಡಾದ ವೈಡೂರ್ಯವು ಒರಟುಗಟ್ಟಿಗಳಾಗಿ, ಭಂಜಿತ ಮುಖದ ತುಂಬುವಿಕೆಗಳಾಗಿ ಕಂಡುಬರುತ್ತದೆ ಮತ್ತು ಮುರುಕುಗಳ ನಡುವಿನ ಸಿಮೆಂಟು ತುಂಬುವಿಕೆಯ ಸಂದುಗಳಾಗಿ ಚೂಪುಗಲ್ಲು ಬಂಡೆಗಳಲ್ಲಿ ಅದು ಕಂಡುಬರುತ್ತದೆ. ನೆವಡಾ ನಿಕ್ಷೇಪಗಳ ಭೂವೈಜ್ಞಾನಿಕ ಲಕ್ಷಣಗಳ ಕಾರಣದಿಂದಾಗಿ, ಉತ್ಪಾದಿಸಲ್ಪಟ್ಟ ಮೂಲದ್ರವ್ಯದ ಒಂದು ಬಹುಪಾಲು ಭಾಗವು ಕಠೋರ ಮತ್ತು ದಟ್ಟವಾಗಿದ್ದು, ಯಾವುದೇ ಸಂಸ್ಕರಣೆಯಾಗಲೀ ಅಥವಾ ವರ್ಧನೆಯಾಗಲೀ ಅಗತ್ಯವಿಲ್ಲದಷ್ಟು ಮಟ್ಟದಲ್ಲಿ ಅದು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಈ ಸಂಸ್ಥಾನದಲ್ಲಿನ ಹೆಚ್ಚೂಕಮ್ಮಿ ಪ್ರತಿಯೊಂದು ಜಿಲ್ಲೆಯೂ ಒಂದಷ್ಟು ಪ್ರಮಾಣದ ವೈಡೂರ್ಯವನ್ನು ನೀಡಿವೆಯಾದರೂ, ಮುಖ್ಯ ತಯಾರಕ ಗಣಿಗಳು ಲ್ಯಾಂಡರ್‌ ಹಾಗೂ ಎಸ್ಮೆರೆಲ್ಡಾ ಜಿಲ್ಲೆಗಳಲ್ಲಿ ನೆಲೆಗೊಂಡಿವೆ. ನೆವಡಾದಲ್ಲಿನ ಬಹುಪಾಲು ವೈಡೂರ್ಯ ನಿಕ್ಷೇಪಗಳು ರಾಚನಿಕ ವ್ಯತ್ಯಾಸಗಳ ಚಟುವಟಿಕೆಯ ಒಂದು ವ್ಯಾಪಕವಾದ ಪಟ್ಟಿಯ ಉದ್ದಕ್ಕೂ ನೆಲೆಗೊಂಡಿವೆ; ಈ ಪಟ್ಟಿಯು ಸಂಸ್ಥಾನದ ನೂಕುಭಂಗದ ವಲಯದೊಂದಿಗೆ ಸಹವ್ಯಾಪಿಸಿದೆ. ಸುಮಾರು N15E ವಲಯದಲ್ಲಿ ಇದು ಸಂಧಿಸುತ್ತದೆ ಮತ್ತು ಎಲ್ಕೋ ಜಿಲ್ಲೆಯ ಉತ್ತರದ ಭಾಗದಿಂದ ದಕ್ಷಿಣದೆಡೆಗೆ ಸಾಗುತ್ತಾ, ಟೊನೊಪಾಹ್‌ನ ನೈಋತ್ಯ ಭಾಗದಲ್ಲಿರುವ ಕ್ಯಾಲಿಫೋರ್ನಿಯಾ ಗಡಿಯವರೆಗೂ ಸಾಗುತ್ತದೆ. ನೆವಡಾ ಸಂಸ್ಥಾನವು ವಿಭಿನ್ನ ಶಿಲಾಖಂಡ ಮಾದರಿಗಳ ಬಣ್ಣಗಳು ಮತ್ತು ಮಿಶ್ರಣಗಳ ಒಂದು ವ್ಯಾಪಕ ವೈವಿಧ್ಯತೆಯನ್ನು ಉತ್ಪಾದಿಸಿದ್ದು, ನೆವಡಾದಿಂದ ಬರುವ ವೈಡೂರ್ಯವು ನೀಲಿ, ನೀಲಿ-ಹಸಿರು, ಹಾಗೂ ಹಸಿರು ಬಣ್ಣಗಳ ಹಲವಾರು ಛಾಯೆಗಳಲ್ಲಿ ಸಿಗುತ್ತವೆ. ಉಜ್ಜ್ವಲ ಪುದೀನಾ ಬಣ್ಣದಿಂದ ಮೊದಲ್ಗೊಂಡು ಸೇಬಿನ ಬಣ್ಣದವರೆಗೆ, ಮತ್ತು ಅಲ್ಲಿಂದ ನಿಯಾನ್‌ ಹಳದಿ ಹಸಿರಿನವರೆಗಿನ ಕೆಲವೊಂದು ಅನನ್ಯ ಛಾಯೆಗಳನ್ನು ನೆವಡಾ ಉತ್ಪಾದಿಸುತ್ತದೆ. ಅಸಾಮಾನ್ಯವಾದ ಬಣ್ಣದಿಂದೊಡಗೂಡಿದ ಈ ವೈಡೂರ್ಯದ ಕೆಲಭಾಗವು ಗಮನಾರ್ಹ ಪ್ರಮಾಣದಲ್ಲಿ ಸತು ಮತ್ತು ಕಬ್ಬಿಣವನ್ನು ಹೊಂದಿರಲು ಸಾಧ್ಯವಿದ್ದು, ಇದು ಸುಂದರವಾದ ಉಜ್ಜ್ವಲ ಹಸಿರು ಬಣ್ಣದಿಂದ ಹಳದಿ-ಹಸಿರಿನವರೆಗಿನ ಛಾಯೆಗಳಿಗೆ ಕಾರಣವಾಗಿದೆ. ಹಸಿರಿನಿಂದ ಹಸಿರು ಹಳದಿಯವರೆಗಿನ ಕೆಲವೊಂದು ಛಾಯೆಗಳು ವಾಸ್ತವವಾಗಿ ವಾರಿಸೈಟ್‌ ಅಥವಾ ಫೌಸ್ಟೈಟ್‌ ಆಗಿರಬಹುದಾಗಿದ್ದು, ಇವು ನೋಟದಲ್ಲಿ ವೈಡೂರ್ಯವನ್ನು ಹೋಲುವಂತಿರುವ ದ್ವಿತೀಯಕ ಫಾಸ್ಫೇಟ್‌ ಖನಿಜಗಳಾಗಿರುತ್ತವೆ. ನೆವಡಾದ ಮೂಲದ್ರವ್ಯದ ಒಂದು ಗಮನಾರ್ಹ ಭಾಗವು ಅನೇಕವೇಳೆ ಆಕರ್ಷಕ ಕಂದು ಅಥವಾ ಕಪ್ಪು ಬಣ್ಣದಲ್ಲಿರುವ ತನ್ನ ಲೈಮನೈಟ್‌ ನಮೂನೆಯಿಂದಾಗಿಯೂ ಗಮನಾರ್ಹವೆನಿಸಿದ್ದು, ಅದು "ಜೇಡರಬಲೆ ಶಿಲಾಖಂಡ" ಎಂದು ಕರೆಯಲ್ಪಡುವ ಒಂದು ವಿಶಿಷ್ಟ ನಮೂನೆಯನ್ನು ಉತ್ಪಾದಿಸುತ್ತದೆ. ನೆವಡಾದ ಅನೇಕ ನಿಕ್ಷೇಪಗಳಲ್ಲಿ ಸ್ಥಳೀಯ ಅಮೆರಿಕನ್ನರು ಮೊದಲು ಗಣಿಗಾರಿಕೆ ನಡೆಸಿದ್ದು, 1870ರ ದಶಕದಿಂದಲೂ ಹೊರಬಂದಿರುವ ನೆವಡಾದ ಒಟ್ಟು ವೈಡೂರ್ಯ ಉತ್ಪಾದನೆಯು 600 ಟನ್ನುಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅಂದಾಜಿಸಲಾಗಿದೆ; ಈ ಪ್ರಮಾಣದಲ್ಲಿ ಕ್ಯಾರಿಕೋ ಲೇಕ್‌ ಗಣಿಯಿಂದ ಬಂದಿರುವ ಉತ್ಪಾದನೆಯ ಪ್ರಮಾಣವೇ ಸುಮಾರು 400 ಟನ್ನುಗಳಷ್ಟಿದೆ. ವೆಚ್ಚಗಳು ಗಣನೀಯ ಪ್ರಮಾಣದಲ್ಲಿ ಏರಿದ್ದರೂ ಸಹ, ಸಣ್ಣ ಪ್ರಮಾಣದ ಗಣಿಗಾರಿಕಾ ಕಾರ್ಯಾಚರಣೆಗಳು ನೆವಡಾದಲ್ಲಿನ ವೈಡೂರ್ಯದ ಅನೇಕ ಗಣಿತಾಣಗಳಲ್ಲಿ ಮುಂದುವರಿಯತ್ತಿವೆ. ಲ್ಯಾಂಡರ್‌ ಜಿಲ್ಲೆಯಲ್ಲಿನ ಗಾಡ್ಬರ್‌‌, ಓರ್ವಿಲ್‌ ಜ್ಯಾಕ್‌ ಮತ್ತು ಕ್ಯಾರಿಕೋ ಲೇಕ್‌ ಗಣಿಗಳು, ಮಿನರಲ್‌ ಜಿಲ್ಲೆಯಲ್ಲಿನ ಪೈಲಟ್‌ ಮೌಂಟೇನ್‌ ಗಣಿ, ಮತ್ತು ಎಸ್ಮೆರೆಲ್ಡಾ ಜಿಲ್ಲೆಯ ರಾಯ್ಸ್‌ಟನ್‌ ಹಾಗೂ ಕ್ಯಾಂಡೆಲೇರಿಯಾದಲ್ಲಿನ ಹಲವಾರು ಗಣಿತಾಣಗಳು ಇದರಲ್ಲಿ ಸೇರಿವೆ.[]

USAಯ ನೆವಡಾದಿಂದ ಪಡೆಯಲಾದ ಸಂಸ್ಕರಿಸದ ವೈಡೂರ್ಯ, ಆಸ್ಟಿನ್‌ನ ಮೆಕ್‌ಗಿನ್ನೆಸ್‌ ಮೈನ್‌ನಿಂದ ಪಡೆಯಲಾದ ಬಿರುಸಾದ ಒರಟುಗಟ್ಟಿಗಳು; ರಾಯ್ಸ್‌ಟನ್‌ನ ಬಂಕರ್‌ ಹಿಲ್‌ ಮೈನ್‌ನಲ್ಲಿನ ನೀಲಿ ಮತ್ತು ಹಸಿರು ಹೊಳಪು ಕೊಟ್ಟ ರತ್ನಪಡಿಗಳು ಜೇಡರಬಲೆಯನ್ನು ತೋರಿಸುತ್ತಿರುವುದು.

1912ರಲ್ಲಿ, ವರ್ಜೀನಿಯಾಕ್ಯಾಂಪ್‌ಬೆಲ್‌ ಜಿಲ್ಲೆಲಿಂಚ್‌ ಸ್ಟೇಷನ್‌ ಎಂಬಲ್ಲಿ ವಿಶಿಷ್ಟವಾದ, ಏಕ-ಹರಳಿನ ವೈಡೂರ್ಯದ ಮೊದಲ ನಿಕ್ಷೇಪವು ಪತ್ತೆಯಾಯಿತು. ಮಾತೃಕಾಬಂಡೆಯ ಮೇಲ್ಭಾಗದಲ್ಲಿ ಒಂದು ಹರಳುಹೆಪ್ಪನ್ನು ರೂಪಿಸಿರುವ ಹರಳುಗಳು ಅತ್ಯಂತ ಸಣ್ಣ ಗಾತ್ರದಲ್ಲಿವೆ; 1 ಮಿ.ಮೀ. (0.04 ಇಂಚು) ಗಾತ್ರವನ್ನು ದೊಡ್ಡದು ಎಂದು ಪರಿಗಣಿಸಲಾಗುತ್ತದೆ. 1980ರ ದಶಕದವರೆಗೂ ವರ್ಜೀನಿಯಾವು ಈ ಸ್ಪಷ್ಟ-ವಿಶಿಷ್ಟವಾದ ಹರಳುಗಳ ಏಕೈಕ ಮೂಲವೆಂದು ವ್ಯಾಪಕವಾಗಿ ಭಾವಿಸಲಾಗಿತ್ತು; ಆದರೆ ಕಡೇಪಕ್ಷ 27 ಇತರ ತಾಣಗಳೂ ಸಹ ಅಸ್ತಿತ್ವದಲ್ಲಿವೆ.[]

ಲಾಭಗಳನ್ನು ಮತ್ತೆಗಳಿಸಿಕೊಳ್ಳುವ ಹಾಗೂ ಬೇಡಿಕೆಯನ್ನು ಈಡೇರಿಸುವ ಒಂದು ಪ್ರಯತ್ನದಲ್ಲಿ, ಅಮೆರಿಕಾದ ಕೆಲವೊಂದು ವೈಡೂರ್ಯವನ್ನು ಸಂಸ್ಕರಿಸಲಾಗುತ್ತಿದೆ ಅಐವಾ ಒಂದು ನಿರ್ದಿಷ್ಟ ಮಟ್ಟದವರೆಗೂ ವರ್ಧಿಸಲಾಗುತ್ತಿದೆ . ಈ ಸಂಸ್ಕರಣಾ ವಿಧಾನಗಳಲ್ಲಿ ನೀರಸವಾದ ಮೇಣ ಲೇಪಿಸುವಿಕೆಯ ವಿಧಾನ ಹಾಗೂ ಬಣ್ಣಕೊಡುವಿಕೆ ಮತ್ತು ತುಂಬುವಿಕೆಯಂಥ ಹೆಚ್ಚು ವಿವಾದಾತ್ಮಕವಾದ ಕಾರ್ಯವಿಧಾನಗಳು ಸೇರಿಕೊಂಡಿವೆ (ನೋಡಿ: ಸಂಸ್ಕರಣಾ ವಿಧಾನಗಳು). ಆದಾಗ್ಯೂ, ಯಾವುದೇ ಸಂಸ್ಕರಣೆಯಾಗಲೀ ಅಥವಾ ಮಾರ್ಪಾಡುಗಳಾಗಲೀ ಅಗತ್ಯವಿರದ, ಸಾಕಷ್ಟು ಉನ್ನತವಾದ ಗುಣಮಟ್ಟವನ್ನು ಹೊಂದಿರುವ ಮೂಲದ್ರವ್ಯಗಳನ್ನು ಅಮೆರಿಕಾದಲ್ಲಿನ ಕೆಲವೊಂದು ಗಣಿಗಳು ಉತ್ಪಾದಿಸುತ್ತವೆ. ಕೈಗೊಳ್ಳಲಾದ ಇಂಥ ಯಾವುದೇ ಸಂಸ್ಕರಣೆಗಳ ಕುರಿತು ಸದರಿ ಮೂಲದ್ರವ್ಯ ಅಥವಾ ಸಾಮಗ್ರಿಯ ಮಾರಾಟದ ಸಂದರ್ಭದಲ್ಲಿ ಖರೀದಿದಾರನಿಗೆ ಬಹಿರಂಗಪಡಿಸುವುದು ಅತ್ಯಗತ್ಯವಾಗಿರುತ್ತದೆ.

ಇತರ ಮೂಲಗಳು

[ಬದಲಾಯಿಸಿ]

3,000 ವರ್ಷಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ವರ್ಷಗಳಿಂದಲೂ ಚೀನಾ ದೇಶವು ವೈಡೂರ್ಯದ ಒಂದು ಕಿರು ಮೂಲವಾಗಿ ಕೊಡುಗೆಯನ್ನು ನೀಡುತ್ತಾ ಬಂದಿದೆ. ದಟ್ಟವಾದ ಗಂಟುಗಳ ರೂಪದಲ್ಲಿರುವ ರತ್ನದ-ಗುಣಮಟ್ಟದ ಮೂಲದ್ರವ್ಯವು, ಹುಬೇಯ್‌ ಪ್ರಾಂತದ ಯಂಕ್ಸಿಯಾನ್‌ ಮತ್ತು ಝೂಶಾನ್‌ ಪ್ರದೇಶದಲ್ಲಿನ ಭಂಜಿತ ಮುಖವನ್ನೊಳಗೊಂಡ, ಸಿಲಿಕಯುಕ್ತವಾಗಿಸಿದ ಸುಣ್ಣದ ಕಲ್ಲು ನಿಕ್ಷೇಪದಲ್ಲಿ ಕಂಡುಬರುತ್ತದೆ. ಇದರ ಜೊತೆಗೆ, ಮಾರ್ಕೋ ಪೋಲೋ ವರದಿ ಮಾಡಿರುವ ಪ್ರಕಾರ, ಇಂದು ಸಿಚುವಾನ್‌ ಎಂಬ ಹೆಸರಿನಿಂದ ಕರೆಯಲ್ಪಡುವ ಪ್ರದೇಶದಲ್ಲಿ ವೈಡೂರ್ಯವು ಕಂಡುಬಂದಿದೆ. ಚೀನಾದೇಶದ ಬಹುಪಾಲು ಮೂಲದ್ರವ್ಯವು ರಫ್ತಾಗುತ್ತದೆಯಾದರೂ, ಜೇಡ್‌ ಸಾಮಗ್ರಿಯನ್ನು ಹೋಲುವ ಒಂದು ವಿಧಾನದಲ್ಲಿ ಕೆಲಸಮಾಡಲಾಗಿರುವ ಒಂದಷ್ಟು ಅಲಂಕಾರಿಕ ಕೆತ್ತನೆಗಳೂ ಕಂಡುಬರುತ್ತವೆ. ಟಿಬೆಟ್‌‌‌ನಲ್ಲಿ, ರತ್ನ-ಗುಣಮಟ್ಟ ನಿಕ್ಷೇಪಗಳು ಉದ್ದೇಶವುಳ್ಳದ್ದಾಗಿದೆಯೆಂದು ತೋರಿಸಿಕೊಳ್ಳುವಂತೆ ವಲಯದ ಪೂರ್ವ ಮತ್ತು ಪಶ್ಚಿಮದಲ್ಲಿ ಕ್ರಮವಾಗಿ ಇರುವ ದರ್ಗೆ ಮತ್ತು ನಗರಿ-ಖೊರ್ಸಮ್‌ ಪರ್ವತಗಳಲ್ಲಿ ಕಂಡುಬರುತ್ತವೆ.[]

ಇತರ ಗಮನಾರ್ಹ ತಾಣಗಳಲ್ಲಿ ಇವು ಸೇರಿವೆ: ಆಫ್ಘಾನಿಸ್ತಾನ; ಆಸ್ಟ್ರೇಲಿಯಾ (ವಿಕ್ಟೋರಿಯಾ ಹಾಗೂ ಕ್ವೀನ್ಸ್‌ಲೆಂಡ್‌); ಉತ್ತರದ ಚಿಲಿ (ಚುಕ್ವಿಕೆಮೇಟಾ); ಕಾರ್ನ್‌ವಾಲ್‌; ಸ್ಯಾಕ್ಸನಿ; ಸಿಲೆಷಿಯಾ; ಮತ್ತು ತುರ್ಕಿಸ್ತಾನ್‌.

ಇದರ ಬಳಕೆಯ ಇತಿಹಾಸ

[ಬದಲಾಯಿಸಿ]
ಮೊಷೆ ವೈಡೂರ್ಯದಿಂದ ಮಾಡಲಾದ ಮೂಗಿನ ಆಭರಣ.ಲಾರ್ಕೊ ಮ್ಯೂಸಿಯಂನ ಸಂಗ್ರಹಣೆ.ಲಿಮಾ-ಪೆರು
ಸುಮಾರು 1000–1040 CEನಷ್ಟು ಹಳೆಯ ಕಾಲಕ್ಕೆ ಸೇರಿದ ಈ ಮುಕ್ತಸ್ವರೂಪದ ತೂಗುಪದಕದಂಥ, ವೈಡೂರ್ಯದ ಕರಕುಶಲ ವಸ್ತುಗಳಲ್ಲಿನ ವ್ಯಾಪಾರವು, ಚಾಕೋ ಕೇನಿಯಾನ್‌ನ ಪೂರ್ವಿಕ ಪ್ಯೂಬ್ಲೋ ಜನರಿಗೆ ಅತೀವವಾದ ಐಶ್ವರ್ಯವನ್ನು ಹೊತ್ತು ತಂದಿತು ಎಂದು ನಂಬಲಾಗುತ್ತದೆ.

ವೈಡೂರ್ಯದ ನೀಲಿಬಣ್ಣದ ಛಾಯೆಗಳು ಪ್ರಾಚೀನತೆಯ ಅನೇಕ ಮಹಾನ್‌ ಸಂಸ್ಕೃತಿಗಳಿಗೆ ಅದನ್ನು ಪ್ರೀತಿಪಾತ್ರವಾಗಿಸಿದೆ: ಪ್ರಾಚೀನ ಈಜಿಪ್ಟ್‌, ಅಜ್ಟೆಕ್‌‌‌‌ಗಳು (ಮತ್ತು ಪ್ರಾಯಶಃ ಇತರ ಕೊಲಂಬಿಯನ್ನರ-ಪೂರ್ವದ ಮೀಸೋಅಮೆರಿಕನ್‌ ಜನರು), ಪರ್ಷಿಯಾ, ಮೆಸೊಪಟ್ಯಾಮಿಯಾ, ಇಂಡಸ್‌ ಕಣಿವೆಯ ಆಡಳಿತಗಾರರನ್ನು ಇದು ಅಲಂಕರಿಸಿದೆ, ಮತ್ತು ಒಂದು ಹಂತಕ್ಕೆ ಪ್ರಾಚೀನ ಚೀನಾದಲ್ಲಿ ಕಡೇಪಕ್ಷ ಷಾಂಗ್‌ ರಾಜವಂಶದ ಆಡಳಿತಗಾರರನ್ನು ಇದು ಅಲಂಕರಿಸಿದೆ.[] ಅತ್ಯಂತ ಹಳೆಯ ರತ್ನಗಳಲ್ಲಿ ಒಂದು ಎನಿಸಿಕೊಂಡಿದ್ದರ ಹೊರತಾಗಿಯೂ ಮತ್ತು ಸಿಲ್ಕ್‌ ರೋಡ್‌‌ನ ಇತರ ಅಲಂಕಾರಿಕ ವಸ್ತುಗಳೊಂದಿಗೆ ಯುರೋಪ್‌‌ಗೆ (ಟರ್ಕಿಯ ಮೂಲಕ) ಪ್ರಾಯಶಃ ಮೊದಲಬಾರಿಗೆ ಪರಿಚಯಿಸಲ್ಪಟ್ಟಿದ್ದರೂ ಸಹ, 14ನೇ ಶತಮಾನದವರೆಗೆ ಒಂದು ಅಲಂಕಾರಿಕ ಕಲ್ಲು ಎನಿಸುವಂಥ ಪ್ರಮುಖ ಸ್ಥಾನವನ್ನು ಪಾಶ್ಚಾತ್ಯ ದೇಶಗಳಲ್ಲಿ ವೈಡೂರ್ಯವು ಗಳಿಸಲಿಲ್ಲ; 14ನೇ ಶತಮಾನದಲ್ಲಿ ರೋಮನ್‌ ಕ್ಯಾಥಲಿಕ್‌ ಚರ್ಚಿನ ಪ್ರಭಾವದಲ್ಲಿ ಒಂದು ಕುಸಿತ ಕಂಡುಬಂದ ನಂತರ, ಲೌಕಿಕ ರತ್ನಾಭರಣಗಳಲ್ಲಿ ವೈಡೂರ್ಯದ ಬಳಕೆಗೆ ಅವಕಾಶ ಸಿಕ್ಕಂತಾಯಿತು. ಮುಘಲ್‌ ಆಳ್ವಿಕೆಯ ಅವಧಿಯು ಕಂಡುಬರುವವರೆಗೂ ಇದು ಭಾರತದಲ್ಲಿ ಸ್ಪಷ್ಟವಾಗಿ ಅಪರಿಚಿತವಾಗಿತ್ತು, ಮತ್ತು 18ನೇ ಶತಮಾನದವರೆಗೂ ಇದು ಜಪಾನ್‌‌ನಲ್ಲಿ ಅಪರಿಚಿತವಾಗಿತ್ತು. ಇಂಥ ಅನೇಕ ನಾಗರಿಕತೆಗಳು ಹಂಚಿಕೊಂಡ ಒಂದು ಸಾಮಾನ್ಯ ನಂಬಿಕೆಯು ಪ್ರತಿಪಾದಿಸಿದ ಪ್ರಕಾರ, ನಿರ್ದಿಷ್ಟ ರೋಗನಿರೋಧಕ ಗುಣಗಳನ್ನು ವೈಡೂರ್ಯವು ಹೊಂದಿತ್ತು; ಧರಿಸುವವನ ಆರೋಗ್ಯದ ಅನುಸಾರ ಇದು ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ ಮತ್ತು ಅವನನ್ನು ಅಥವಾ ಅವಳನ್ನು ದುಷ್ಪರಿಣಾಮದ ಶಕ್ತಿಗಳಿಂದ ಸಂರಕ್ಷಿಸುತ್ತದೆ ಎಂಬ ನಂಬಿಕೆಯು ಚಾಲ್ತಿಯಲ್ಲಿತ್ತು.

ಅಜ್ಟೆಕ್ ಜನರು ಬಂಗಾರ, ಬೆಣಚುಕಲ್ಲು, ಮ್ಯಾಲಕೈಟ್‌, ಜೆಟ್‌, ಜೇಡ್‌, ಹವಳ, ಮತ್ತು ಚಿಪ್ಪುಗಳು ಇವೇ ಮೊದಲಾದವುಗಳೊಂದಿಗೆ ವೈಡೂರ್ಯವನ್ನು ಹುದುಗಿಸಿ, ಮುಖವಾಡಗಳು (ಕೆಲವೊಂದರಲ್ಲಿ ಆಧಾರವಾಗಿ ಮಾನವ ತಲೆಬುರುಡೆಯೊಂದನ್ನು ಬಳಸಲಾಗುತ್ತಿತ್ತು), ಚಾಕುಗಳು, ಮತ್ತು ಕವಚಗಳಂಥ ಪ್ರಚೋದಕ (ಹಾಗೂ ಸಂಭಾವ್ಯವಾಗಿ ವಿಧ್ಯುಕ್ತವಾದ) ಬೆರಕೆಗಲ್ಲಿನ ಚಿತ್ತಾರದ ವಸ್ತುಗಳನ್ನು ರೂಪಿಸುತ್ತಿದ್ದರು. ವಸ್ತುಗಳ ಆಧಾರ ಸಾಮಗ್ರಿಗೆ ವೈಡೂರ್ಯವನ್ನು ಅಂಟಿಸಲು ನೈಸರ್ಗಿಕ ರಾಳಗಳು, ಬಿಟ್ಯುಮನ್‌‌ ಮತ್ತು ಮೇಣ ಮೊದಲಾದವುಗಳನ್ನು ಬಳಸಲಾಗುತ್ತಿತ್ತು; ಆಧಾರ ಸಾಮಗ್ರಿಯು ಸಾಮಾನ್ಯವಾಗಿ ಮರವಾಗಿರುತ್ತಿತ್ತಾದರೂ, ಮೂಳೆ ಹಾಗೂ ಚಿಪ್ಪುಗಳನ್ನು ಕೂಡಾ ಬಳಸಲಾಗುತ್ತಿತ್ತು. ಅಜ್ಟೆಕ್ ಜನಾಂಗದವರ ರೀತಿಯಲ್ಲಿಯೇ ಪ್ಯೂಬ್ಲೊ, ನವಾಜೊ ಮತ್ತು ಅಪಾಚೆ ಬುಡಕಟ್ಟುಗಳ ಜನರೂ ಸಹ ವೈಡೂರ್ಯಕ್ಕೆ ಅದರ ತಾಯಿತದಂಥ ಬಳಕೆಗೆ ಸಂಬಂಧಿಸಿದಂತೆ ಮಾನ್ಯತೆ ಕೊಡುತ್ತಿದ್ದರು; ವೈಡೂರ್ಯವು ಬಿಲ್ಲುಗಾರರಿಗೆ ಅತೀವವಾದ ಗುರಿಯ ಸಾಮರ್ಥ್ಯವನ್ನು ನೀಡುತ್ತದೆ ಎಂದು ಅಪಾಚೆ ಬುಡಕಟ್ಟಿನ ಜನರು ನಂಬಿದ್ದರು. ಈ ಜನರ ಪೈಕಿ, ಬೆರಕೆಗಲ್ಲಿನ ಚಿತ್ತಾರದ ಹುದುಗಿಸುವಿಕೆಯಲ್ಲಿ, ಶಿಲ್ಪದ ಕೆಲಸಗಳಲ್ಲಿ ವೈಡೂರ್ಯವು ಬಳಸಲ್ಪಡುತ್ತಿತ್ತು, ಮತ್ತು ಉಬ್ಬುರುಳೆಯಂಥ ಮಣಿಗಳು ಹಾಗೂ ಮುಕ್ತ ಸ್ವರೂಪದ ತೂಗುಪದಕಗಳಾಗಿ ಅವನ್ನು ವಿನ್ಯಾಸಗೊಳಿಸಲಾಗುತ್ತಿತ್ತು. ಚಾಕೋ ಕೇನಿಯಾನ್‌ ಮತ್ತು ಸುತ್ತುಮುತ್ತಲ ವಲಯದ ಪೂರ್ವಿಕ ಪ್ಯೂಬ್ಲೋ ಜನರು (ಅನಸಾಜಿ) ಅವುಗಳ ಉತ್ಪಾದನೆಯಿಂದ ಮತ್ತು ವೈಡೂರ್ಯದ ವಸ್ತುಗಳ ವ್ಯಾಪಾರದಿಂದ ಮಹತ್ತರವಾಗಿ ಏಳಿಗೆ ಹೊಂದಿದರು ಎಂಬ ನಂಬಿಕೆಯೂ ಸಹ ಚಾಲ್ತಿಯಲ್ಲಿದೆ.

ನವಾಜೊ ಮತ್ತು ನೈಋತ್ಯ ಭಾಗದ ಇತರ ಸ್ಥಳೀಯ ಅಮೆರಿಕಾದ ಬುಡಕಟ್ಟುಗಳಿಂದ ತಯಾರಿಸಲ್ಪಟ್ಟ ಭಿನ್ನತಾ ಸೂಚಕವಾದ ಬೆಳ್ಳಿಯ ರತ್ನಾಭರಣಗಳು ಇಂದು ಒಂದು ಸಾಕಷ್ಟು ಆಧುನಿಕ ಬೆಳವಣಿಗೆ ಎನಿಸಿಕೊಂಡಿದ್ದು, ಯುರೋಪಿನ ಪ್ರಭಾವಗಳ ಒಂದು ಪರಿಣಾಮವಾಗಿ ಸುಮಾರು 1880ರಷ್ಟು ಹಿಂದಿನಿಂದ ಅವು ಬಂದಿವೆ ಎಂದು ನಂಬಲಾಗಿದೆ.

ಪರ್ಷಿಯಾದಲ್ಲಿ, ವೈಡೂರ್ಯವು ಸಹಸ್ರಮಾನಗಳಿಂದಲೂ ವಾಸ್ತವವಾದ ರಾಷ್ಟ್ರೀಯ ಕಲ್ಲು ಎನಿಸಿಕೊಂಡಿದ್ದು, ವಸ್ತುಗಳು (ಪೇಟಗಳಿಂದ ಮೊದಲ್ಗೊಂಡು to ಕುದುರೆಯ ಮುಖವಾಡಗಳವರೆಗೆ), ಮಸೀದಿಗಳು, ಮತ್ತು ಇಸ್‌ಫಹಾನ್‌‌‌‌ನ ಮೆಡ್ರೆಸ್ಸೆ-ಐ ಷಾ ಹುಸೇನ್‌ ಮಸೀದಿಯಂಥ ಇತರ ಪ್ರಮುಖ ಕಟ್ಟಡಗಳ ಹೊರಭಾಗ ಮತ್ತು ಒಳಭಾಗಗಳೆರಡನ್ನೂ ಅಲಂಕರಿಸಲು ವ್ಯಾಪಕವಾಗಿ ಇದನ್ನು ಬಳಸಲಾಗುತ್ತಿತ್ತು. ಭಾರತದಲ್ಲಿ ಮುಘಲ್‌ ಸಾಮ್ರಾಜ್ಯದ ಸ್ಥಾಪನೆಯಾದುದನ್ನು ಅನುಸರಿಸಿ, ಪರ್ಷಿಯಾದ ಶೈಲಿ ಹಾಗೂ ವೈಡೂರ್ಯದ ಬಳಕೆಯನ್ನು ನಂತರದಲ್ಲಿ ಭಾರತಕ್ಕೆ ತರಲಾಯಿತು; ಇದರ ಪ್ರಭಾವವನ್ನು ಉನ್ನತ ಪರಿಶುದ್ಧತೆಯ ಬಂಗಾರದ ರತ್ನಾಭರಣಗಳು (ಮಾಣಿಕ್ಯ ಹಾಗೂ ವಜ್ರದ ಜೊತೆಯಲ್ಲಿ) ಹಾಗೂ ತಾಜ್‌ ಮಹಲ್‌‌ನಂಥ ಕಟ್ಟಡಗಳಲ್ಲಿ ಕಾಣಬಹುದು. ಪರ್ಷಿಯಾದ ವೈಡೂರ್ಯವು ಅರೇಬಿಕ್‌ ಲಿಪಿಯಲ್ಲಿರುವ ಪ್ರಾರ್ಥನೆಯ ಪದಗಳೊಂದಿಗೆ ಅನೇಕವೇಳೆ ಚಿತ್ತಾರಿಸಲ್ಪಟ್ಟು, ನಂತರ ಬಂಗಾರದಲ್ಲಿ ಹುದುಗಿಸಲ್ಪಡುತ್ತಿತ್ತು.

ವೈಡೂರ್ಯ, ನೀಲರತ್ನ ಪಡಿ, ಕಾರ್ನೀಲಿಯನ್‌ ಶಿಲೆ ಹಾಗೂ ಬಣ್ಣದ ಗಾಜು ಇವೇ ಮೊದಲಾದವನ್ನು ಹುದುಗಿಸಲಾದ, ಟುಟಾನ್‌ಖಾಮನ್‌ನ ಬಂಗಾರದ ಸಾಂಪ್ರದಾಯಿಕ ಹೂಳುವಿಕೆಯ ಮುಖವಾಡ.

ಹವಳದ ಜೊತೆಗೆ, ಆಮದು ಮಾಡಿಕೊಳ್ಳಲ್ಪಟ್ಟ ವೈಡೂರ್ಯದ ಹೊಳಪು ಕೊಟ್ಟ ರತ್ನಪಡಿಗಳು, ಟಿಬೆಟ್‌ ಹಾಗೂ ಮಂಗೋಲಿಯಾದ ಬೆಳ್ಳಿ ಮತ್ತು ಬಂಗಾರದ ರತ್ನಾಭರಣಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದು (ಮತ್ತು ಈಗಲೂ ಈ ಪರಿಪಾಠವು ಚಾಲ್ತಿಯಲ್ಲಿದೆ), ಇಲ್ಲಿ ಒಂದು ತುಂಬ ಹಸಿರಾದ ವರ್ಣಾಂಶಕ್ಕೆ ಆದ್ಯತೆ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಬೆಳ್ಳಿಯಲ್ಲಿ ಹಾಗೇ ಸುಮ್ಮನೆ ಅಳವಡಿಸಲಾದ, ಕ್ರಮಬದ್ಧವಲ್ಲದ ಹೊಳಪು ಕೊಟ್ಟ ರತ್ನಪಡಿಗಳಾಗಿ ಸಾಮಾನ್ಯವಾಗಿ ಸ್ಥೂಲವಾಗಿ ಮೆರುಗುಕೊಡಲ್ಪಟ್ಟ ವೈಡೂರ್ಯದೊಂದಿಗೆ ಇಂದು ರೂಪಿಸಲ್ಪಡುತ್ತಿರುವ ಬಹುಪಾಲು ಕಲಾಕೃತಿಗಳು, ಪಾಶ್ಚಾತ್ಯ ಮಾರುಕಟ್ಟೆಗಳಿಗೆ ಮಾಡುವ ಅಗ್ಗದ ರಫ್ತಿಗಾಗಿ ಮೀಸಲಾಗಿವೆ ಮತ್ತು ಅವು ಪ್ರಾಯಶಃ ಮೂಲ ಶೈಲಿಯ ಕರಾರುವಾಕ್ಕಾಗಿರದ ನಿರೂಪಣೆಗಳಾಗಿವೆ.

ಈಜಿಪ್ಟಿನ ಜನರು ಮೊದಲ ರಾಜವಂಶದ ಅಥವಾ ಪ್ರಾಯಶಃ ಅದಕ್ಕೂ ಹಿಂದಿನ ಕಾಲದಿಂದಲೂ ವೈಡೂರ್ಯವನ್ನು ಬಳಸಿಕೊಂಡು ಬಂದಿದ್ದಾರೆ; ಆದಾಗ್ಯೂ, ಟುಟಾನ್‌ಖಾಮನ್‌‌‌ನ ಸಮಾಧಿಯಿಂದ ಪಡೆದುಕೊಳ್ಳಲಾದ ಕಲಾಕೃತಿಗಳು ರತ್ನವನ್ನು ಅಳವಡಿಸಿಕೊಂಡಿರುವ ಪ್ರಾಯಶಃ ಅತ್ಯಂತ ಚಿರಪರಿಚಿತವಾದ ಕಲಾಕೃತಿಗಳು ಎನಿಸಿಕೊಂಡಿವೆ; ಅದರಲ್ಲೂ ಗಮನಾರ್ಹವಾಗಿ ಫಾರಾವೋನ ಸಾಂಪ್ರದಾಯಿಕ ಹೂಳುವಿಕೆಯ ಮುಖವಾಡದಲ್ಲಿ ಹೇರಳವಾಗಿ ವೈಡೂರ್ಯದ ಕಲ್ಲುಗಳನ್ನು ಹುದುಗಿಸಿಡಲಾಗಿತ್ತು ಎಂದು ತಿಳಿದುಬಂದಿದೆ. ಉಂಗುರಗಳು ಹಾಗೂ ಅಲಂಕಾರಿಕ ಎದೆಪಟ್ಟಿಕೆಗಳು ಎಂದು ಕರೆಯಲ್ಪಡುವ ಅತೀವವಾದ ಬೀಸುವಿಕೆಯ ಕಂಠಹಾರಗಳನ್ನೂ ಸಹ ಇದು ಅಲಂಕರಿಸಿತು. ಬಂಗಾರದಲ್ಲಿ ಹುದುಗಿಸಲಾದ ಈ ರತ್ನವು ಮಣಿಗಳಾಗಿ ವಿನ್ಯಾಸಗೊಳಿಸಲ್ಪಟ್ಟಿತು, ಹುದುಗಿಸುವಿಕೆಯಾಗಿ ಬಳಸಲ್ಪಟ್ಟಿತು, ಮತ್ತು ಒಂದು ಜೀರುಂಡೆರತ್ನದ ಅಲಂಕಾರದಲ್ಲಿ ಅನೇಕವೇಳೆ ಕೆತ್ತಲ್ಪಟ್ಟಿತು; ಕಾರ್ನೀಲಿಯನ್‌ ಶಿಲೆ, ನೀಲರತ್ನ ಪಡಿ, ಹಾಗೂ ನಂತರದ ಕಲಾಕೃತಿಗಳಲ್ಲಿ ಬಣ್ಣದ ಗಾಜುಗಳು ಇದಕ್ಕೆ ಸಾಥ್‌ ನೀಡಿದವು. ಹಥೋರ್‌ ದೇವತೆಯೊಂದಿಗೆ ಸಂಬಂಧ ಕಲ್ಪಿಸಲ್ಪಟ್ಟ ವೈಡೂರ್ಯವನ್ನು ಪ್ರಾಚೀನ ಈಜಿಪ್ಟಿಯನ್ನರು ಬಹಳ ಮೆಚ್ಚಿಕೊಂಡಿದ್ದರು; ಇದರಿಂದಾಗಿ ಇದು ಅನುಕರಣೆಗೆ ಒಳಗಾದ ಮೊಟ್ಟಮೊದಲ ರತ್ನದಕಲ್ಲು ಎಂದು (ವಾದಯೋಗ್ಯವಾಗಿ) ಕರೆಸಿಕೊಂಡಿತು. ನಕಾಸೆ ಪಿಂಗಾಣಿ ಎಂದು ಕರೆಯಲ್ಪಡುವ, ಕೃತಕವಾಗಿ ಹೊಳಪುನೀಡಿದ ಒಂದು ಪಿಂಗಾಣಿಯ ಉತ್ಪನ್ನದಿಂದ ಸೃಷ್ಟಿಸಲ್ಪಟ್ಟ ಸೊಗಸಾದ ರಚನೆಯಾಗಿ ಇದು ಪರಿಗಣಿಸಲ್ಪಟ್ಟಿತು. (ಇದೇ ಬಗೆಯ ಒಂದು ನೀಲಿ ಪಿಂಗಾಣಿಯನ್ನು ಬ್ರಿಟಿಷ್‌ ಕಿರುದ್ವೀಪಗಳಲ್ಲಿನ ಕಂಚಿನ ಯುಗದ ಹೂಳುವಿಕೆಯ ತಾಣಗಳಿಂದ ಪಡೆದುಕೊಳ್ಳಲಾಗಿದೆ.)

19ನೇ ಶತಮಾನದ ಮಧ್ಯಭಾಗದಿಂದ 20ನೇ ಶತಮಾನದ ಆರಂಭದವರೆಗೆ ಈಜಿಪ್ಟ್‌ನ ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಉತ್ಖನನಗಳನ್ನು ಫ್ರೆಂಚರು ಕೈಗೊಂಡರು. ಟುಟಾನ್‌ಖಾಮನ್‌ನ್ ಸಮಾಧಿಯ ಉತ್ಖನನವನ್ನೂ ಒಳಗೊಂಡಿದ್ದ ಈ ಉತ್ಖನನಗಳು ಪಾಶ್ಚಾತ್ಯ ಪ್ರಪಂಚದಲ್ಲಿ ಮಹತ್ತರವಾದ ಸಾರ್ವಜನಿಕ ಆಸಕ್ತಿಯನ್ನೇ ಹುಟ್ಟುಹಾಕಿ, ನಂತರದಲ್ಲಿ ಆ ಕಾಲದ ರತ್ನಾಭರಣಗಳು, ವಾಸ್ತುಶಿಲ್ಪ, ಹಾಗೂ ಕಲೆಯ ಮೇಲೆ ಪ್ರಭಾವ ಬೀರಿದವು. ತಾನು ಹೊಂದಿರುವ ನೀಲಿಬಣ್ಣದ ಛಾಯೆಗಳಿಂದಾಗಿ ಸುಮಾರು 1810ರ ಕಾಲದಿಂದಲೂ ಮೆಚ್ಚುಗೆಯನ್ನು ಸಂಪಾದಿಸಿದ್ದ ವೈಡೂರ್ಯವು, ಈಜಿಪ್ಟಿನ ಪುನರುದಯದ ಕಲಾಕೃತಿಗಳ ಒಂದು ಪ್ರಧಾನ ವಿಷಯವಾಗಿತ್ತು. ಸಮಕಾಲೀನ ಪಾಶ್ಚಾತ್ಯ ಬಳಕೆಯಲ್ಲಿ ವೈಡೂರ್ಯವು ಅನೇಕವೇಳೆ ಕತ್ತರಿಸಿ ಹೊಳಪು ಕೊಟ್ಟ ಆದರೆ ಪಟ್ಟೆ ಹೊಡೆದಿಲ್ಲದ ರತ್ನಪಡಿ ಯನ್ನು ಕಂಡಿದೆ; ಹೆಚ್ಚಿನಂಶ ಸ್ಥಳೀಯ ಅಮೆರಿಕಾದ ಶೈಲಿಯಲ್ಲಿರುವ ಬೆಳ್ಳಿ ಉಂಗುರಗಳು, ಕಡಗಗಳಲ್ಲಿ ಇದು ಕಂಡುಬಂದಿದೆ, ಅಥವಾ ದಪ್ಪನಾದ ಕಂಠಹಾರಗಳಲ್ಲಿರುವ ಉರುಳು ಪೀಪಾಯಿಯಲ್ಲಿ ಸುತ್ತಿಸಿ ಸ್ವಚ್ಛಗೊಳಿಸಿದ ಅಥವಾ ಸ್ಥೂಲವಾಗಿ ಕತ್ತರಿಸಿದ ಮಣಿಗಳಾಗಿ ಇದು ಕಂಡುಬಂದಿದೆ. ಜುನಿ ಬುಡಕಟ್ಟಿನವರಿಂದ ಕುಶಲ-ಕೆತ್ತನೆ ಮಾಡಲ್ಪಟ್ಟಂಥ ವಸ್ತುಗಳನ್ನು ಹೋಲುವ ಮಾಂತ್ರಿಕವಸ್ತುಗಳಾಗಿ ಕೆತ್ತಿ ರೂಪಿಸಲು ಶ್ರೇಷ್ಠವಲ್ಲದ ಮೂಲದ್ರವ್ಯವನ್ನು ಬಳಸಬಹುದಾಗಿದೆ. ಗಾಢವಾದ ಆಕಾಶ ನೀಲಿ ಬಣ್ಣಗಳ ಮೂಲದ್ರವ್ಯವು ಮೌಲ್ಯದಲ್ಲಿ ಅತ್ಯುತ್ಕೃಷ್ಟತೆಯನ್ನು ಉಳಿಸಿಕೊಂಡಿದ್ದರೆ, ಶಬಲಿತ ಹಸಿರು ಹಾಗೂ ಹಳದಿ ಬಣ್ಣ ಬೆರೆತ ಮೂಲದ್ರವ್ಯವು ಕುಶಲಕರ್ಮಿಗಳ ವಲಯದಲ್ಲಿ ಜನಪ್ರಿಯವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ, ಡಿಸೆಂಬರ್‌‌ ತಿಂಗಳಿನಲ್ಲಿ ಜನಿಸಿದವರ ಸಾಂಪ್ರದಾಯಿಕ ಜನ್ಮರತ್ನವಾಗಿಯೂ ವೈಡೂರ್ಯವನ್ನು ಪರಿಗಣಿಸಲಾಗುತ್ತದೆ. ಎಕ್ಸಡಸ್‌ 28 (ಬೈಬಲಿನಲ್ಲಿನ ಹಳೆಯ ಒಡಂಬಡಿಕೆಯ ಭಾಗ) ಭಾಗದಲ್ಲಿ ವಿವರಿಸಲ್ಪಟ್ಟಿರುವಂತೆ, ವೈಡೂರ್ಯವು ಯೆಹೂದಿ ಪ್ರಧಾನ ಗುರುವಿನ ಎದೆಗವಚದಲ್ಲಿರುವ ಒಂದು ರತ್ನದ ಕಲ್ಲಾಗಿದೆ.

ಸಂಸ್ಕೃತಿ

[ಬದಲಾಯಿಸಿ]

ಹಳೆಯ ಮತ್ತು ಹೊಸ ಪ್ರಪಂಚಗಳ ಅನೇಕ ಸಂಸ್ಕೃತಿಗಳಲ್ಲಿ, ಸಾವಿರಾರು ವರ್ಷಗಳಿಂದಲೂ ಈ ರತ್ನದ ಕಲ್ಲನ್ನು ಒಂದು ಪವಿತ್ರ ಕಲ್ಲು ಎಂಬಂತೆ ಗೌರವಿಸಲಾಗಿದ್ದು, ಒಳ್ಳೆಯ ಅದೃಷ್ಟವನ್ನು ಹೊತ್ತು ತರುವ ವಸ್ತು ಅಥವಾ ಅದ್ಭುತ ಸಾಧಕ ವಸ್ತು (ಅಥವಾ ತಾಯಿತ) ಎಂದು ಇದನ್ನು ಪರಿಗಣಿಸಲಾಗಿದೆ.

'ಜನರ ಒಂದು ರತ್ನದ ಕಲ್ಲು' ಎಂದು ಕರೆಸಿಕೊಳ್ಳುವ ಹಕ್ಕನ್ನು ಇದು ನಿಜವಾಗಿಯೂ ಹೊಂದಿದೆ. ಈ ಸಮರ್ಥನೆಗೆ ಸಂಬಂಧಿಸಿದ ಅತ್ಯಂತ ಹಳೆಯ ಪುರಾವೆಯು ಪ್ರಾಚೀನ ಈಜಿಪ್ಟ್‌‌‌ನಲ್ಲಿ ಕಂಡುಬಂದಿತು; ಇಲ್ಲಿ ಪತ್ತೆಯಾದ ವೈಡೂರ್ಯದ ಹುದುಗಿಸುವಿಕೆಯೊಂದಿಗಿನ ಸಮಾಧಿ ಪೀಠೋಪಕರಣಗಳು, ಸರಿಸುಮಾರು 3000 BCಯಷ್ಟು ಹಿಂದಿನ ಕಾಲಕ್ಕೆ ಸೇರಿದವಾಗಿದ್ದವು ಎಂದು ತಿಳಿದುಬಂತು. ಪ್ರಾಚೀನ ಪರ್ಷಿಯಾದ ಸಾಮ್ರಾಜ್ಯದಲ್ಲಿ, ಅಸ್ವಾಭಾವಿಕ ಸಾವಿನಿಂದ ಸಂರಕ್ಷಿಸಿಕೊಳ್ಳಲು ಆಕಾಶ-ನೀಲಿಬಣ್ಣದ ರತ್ನದ ಕಲ್ಲುಗಳನ್ನು ಕುತ್ತಿಗೆಯ ಅಥವಾ ಮಣಿಕಟ್ಟಿನ ಸುತ್ತ ಧರಿಸಲಾಗುತ್ತಿತ್ತು. ಒಂದು ವೇಳೆ ಅವು ಬಣ್ಣವನ್ನು ಬದಲಾಯಿಸಿದರೆ, ಅವನ್ನು ಧರಿಸಿದಾತನು ಸಾವು ಸಮೀಪಿಸುತ್ತಿದೆ ಎಂಬ ಭಯವನ್ನು ಹೊಂದಲು ಕಾರಣ ಸಿಕ್ಕಂತಾಗುತ್ತಿತ್ತು. ಈ ಮಧ್ಯೆ, ವೈಡೂರ್ಯವು ಬಣ್ಣವನ್ನು ಬದಲಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ನಿಸ್ಸಂಶಯವಾಗಿ ಹೊಂದಿದೆಯಾದರೂ, ಅವಶ್ಯವಾಗಿ ಇದು ಸನ್ನಿಹಿತ ಅಪಾಯದ ಒಂದು ಸೂಚನೆಯಲ್ಲ ಎಂಬುದನ್ನು ಕಂಡುಕೊಳ್ಳಲಾಯಿತು. ಬಣ್ಣದಲ್ಲಿನ ಈ ಬದಲಾವಣೆಗೆ ಬೆಳಕು ಕಾರಣವಾಗಿರಬಹುದು, ಅಥವಾ ಶೃಂಗಾರ ಸಾಧನಗಳು, ಧೂಳಿನ ಕಾರಣದಿಂದ ಉಂಟಾದ ಒಂದು ರಾಸಾಯನಿಕ ಕ್ರಿಯೆ ಅಥವಾ ಚರ್ಮದ ಆಮ್ಲೀಯತೆ ಕಾರಣವಾಗಿರಬಹುದು.

ನಕಲಿಗಳು

[ಬದಲಾಯಿಸಿ]

ಹೊಳಪು ಕೊಟ್ಟ ಸುಟ್ಟ ಜೇಡಿ ಮಣ್ಣಿನ ಉತ್ಪನ್ನವಾದ ನಕಾಸೆ ಪಿಂಗಾಣಿಯಲ್ಲಿ ವೈಡೂರ್ಯದ ಒಂದು ಕೃತಕ ನಕಲಿಯನ್ನು ತಯಾರಿಸುವಲ್ಲಿ ಈಜಿಪ್ಟಿಯನ್ನರು ಮೊದಲಿಗರಾಗಿದ್ದರು. ನಂತರ ಗಾಜು ಹಾಗೂ ಗಾಜುಲೇಪಗಳೂ ಸಹ ಬಳಸಲ್ಪಟ್ಟವು, ಮತ್ತು ಆಧುನಿಕ ಕಾಲದಲ್ಲಿ ಹೆಚ್ಚು ಅತ್ಯಾಧುನಿಕ ಮತ್ತು ಸಂಕೀರ್ಣವಾದ ಕುಂಬಾರಿಕೆಯ ವಸ್ತುಗಳು, ಪಿಂಗಾಣಿ ಸಾಮಾನುಗಳು, ಪ್ಲ್ಯಾಸ್ಟಿಕ್‌‌‌‌‌ಗಳು, ಹಾಗೂ ಹಲವಾರು ಜೋಡಣೆಗೊಂಡ, ಒತ್ತಿಕ್ಕಿದ, ಬಂಧಿಸಲ್ಪಟ್ಟ, ಮತ್ತು ಹೆಪ್ಪುಗಟ್ಟಿಸಿ ರೂಪಿಸಲಾದ ಉತ್ಪನ್ನಗಳು (ತಾಮ್ರ ಮತ್ತು ಅಲ್ಯೂಮಿನಿಯಂನ ಹಲವಾರು ಸಂಯುಕ್ತಗಳಿಂದ ಇವು ಸಂಯೋಜಿಸಲ್ಪಟ್ಟಿದ್ದವು) ಅಭಿವೃದ್ಧಿಪಡಿಸಲ್ಪಟ್ಟವು: ಅಲ್ಯೂಮಿನಿಯಂ ಫಾಸ್ಫೇಟ್‌‌‌ನಿಂದ ಒತ್ತರಿಸಲ್ಪಟ್ಟು, ತಾಮ್ರದ ಓಲಿಯೇಟ್‌‌ನಿಂದ ಬಣ್ಣವನ್ನು ಪಡೆದು ರೂಪುಗೊಂಡ "ವಿಯೆನ್ನದ ವೈಡೂರ್ಯ"; ಮತ್ತು ಬೇರೈಟ್‌ ಹಾಗೂ ತಾಮ್ರದ ಫಾಸ್ಫೇಟ್‌‌‌ನ ಒಂದು ಮಿಶ್ರಣವಾದ "ನಿಯೋಲಿತ್‌‌" ಮೊದಲಾದವು ಗಾಜುಲೇಪದ ಉದಾಹರಣೆಗಳಾಗಿವೆ. ಇವುಗಳಲ್ಲಿನ ಬಹುಪಾಲು ಉತ್ಪನ್ನಗಳು ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳೆರಡರಲ್ಲೂ ನೈಸರ್ಗಿಕ ವೈಡೂರ್ಯದಿಂದ ಸುಸ್ಪಷ್ಟವಾಗಿ ಭಿನ್ನವಾಗಿರುತ್ತವೆಯಾದರೂ, ಪಿಯರೆ ಗಿಲ್ಸನ್‌ ಎಂಬಾತ 1972ರಲ್ಲಿ ಒಂದು ನಿಜವಾದ ಸಂಶ್ಲೇಷಿತ ವೈಡೂರ್ಯಕ್ಕೆ ತಕ್ಕಮಟ್ಟಿಗೆ ನಿಕಟವಾಗಿರುವ ಮಾದರಿಯೊಂದನ್ನು ಪರಿಚಯಿಸಿದ (ಬಳಸಲ್ಪಟ್ಟಿರುವ ಒಂದು ಬಂಧಕದ ಕಾರಣದಿಂದಾಗಿ ಇದು ರಾಸಾಯನಿಕ ಸಂಯೋಜನೆಯಲ್ಲಿ ಭಿನ್ನತೆಯನ್ನು ತೋರುತ್ತದೆ; ಇದರರ್ಥ, ಇದನ್ನು ಒಂದು ಸಂಶ್ಲೇಷಿತ ಎಂಬದಕ್ಕಿಂತ ಹೆಚ್ಚಾಗಿ ಒಂದು ಅನುಕರಣಕಾರಕ ಎಂಬ ರೀತಿಯಲ್ಲಿ ಅತ್ಯುತ್ತಮವಾಗಿ ವಿವರಿಸಬಹುದು). ಗಿಲ್ಸನ್‌ನ ವೈಡೂರ್ಯವು, ಒಂದು ಏಕರೂಪದ ಬಣ್ಣದಲ್ಲಿ ಹಾಗೂ ಕಪ್ಪು "ಜೇಡರಬಲೆ ಶಿಲಾಖಂಡ"ದ ನಮೂನೆಯೊಂದಿಗೆ, ಹೀಗೆ ಎರಡರಲ್ಲೂ ಮಾಡಲ್ಪಟ್ಟಿದೆ. ಸದರಿ ನಮೂನೆಯು ನೆವಡಾದ ನೈಸರ್ಗಿಕ ಮೂಲದ್ರವ್ಯಕ್ಕಿಂತ ಭಿನ್ನವಾಗಿಲ್ಲ.

ಡ್ರೂಸಿ ಬೆಣಚುಕಲ್ಲಿನೊಂದಿಗಿನ ಈ ಗೊಂಚಲಿನಂತಿರುವ, ಕ್ರೈಸೋಕೊಲ್ಲಾದಂಥ ನೈಸರ್ಗಿಕ ನೀಲಿಯಿಂದ ನೀಲಿ-ಹಸಿರು ಬಣ್ಣದವರೆಗಿರುವ ಮೂಲದ್ರವ್ಯಗಳು, ವೈಡೂರ್ಯದೊಂದಿಗೆ ಸಾಂದರ್ಭಿಕವಾಗಿ ಗೊಂದಲಕ್ಕೀಡುಮಾಡುತ್ತವೆ, ಅಥವಾ ವೈಡೂರ್ಯವನ್ನು ಅನುಕರಿಸಲು ಬಳಸಲ್ಪಡುತ್ತವೆ.

ಇಂದು ದೊರೆಯುವ ವೈಡೂರ್ಯದ ಅತ್ಯಂತ ಸಾಮಾನ್ಯವಾದ ನಕಲಿಯು, ಬಣ್ಣ ಹಾಕಿದ ಹೋವ್ಲೈಟ್‌ ಮತ್ತು ಮ್ಯಾಗ್ನಸೈಟ್‌ ಆಗಿದ್ದು, ಎರಡೂ ಸಹ ತಮ್ಮ ನೈಸರ್ಗಿಕ ಸ್ಥಿತಿಗಳಲ್ಲಿ ಬಿಳಿಬಣ್ಣವನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಹೋವ್ಲೈಟ್‌ ಮಾದರಿಯು ವೈಡೂರ್ಯವನ್ನು ಹೋಲುವ ನೈಸರ್ಗಿಕ (ಮತ್ತು ಮನವೊಪ್ಪುವ) ಕಪ್ಪು ನಮೂನೆಯನ್ನೂ ಸಹ ಹೊಂದಿದೆ. ಬಣ್ಣ ಹಾಕಿದ ಕ್ಯಾಲ್ಸೆಡನಿ ಬೆಣಚುಕಲ್ಲು ಆಗಿರುವ ಜ್ಯಾಸ್ಪರ್‌‌, ಮತ್ತು ಅಮೃತಶಿಲೆ ಇವು ಕಡಿಮೆ ಸಾಮಾನ್ಯ, ಹಾಗೂ ಸಾಕಷ್ಟು ಕಡಿಮೆ ಮನವೊಪ್ಪುವ ಲಕ್ಷಣವನ್ನು ಹೊಂದಿರುತ್ತವೆ. ವೈಡೂರ್ಯದೊಂದಿಗೆ ಸಾಂದರ್ಭಿಕವಾಗಿ ಗೊಂದಲ ಹುಟ್ಟಿಸುವ ಅಥವಾ ವೈಡೂರ್ಯದ ಬದಲಾಗಿ ಬಳಸಲ್ಪಡುವ ಇತರ ನೈಸರ್ಗಿಕ ಮೂಲದ್ರವ್ಯಗಳಲ್ಲಿ ಇವು ಸೇರಿವೆ: ವಾರಿಸೈಟ್‌ ಮತ್ತು ಫೌಸ್ಟೈಟ್‌;[] ಕ್ರೈಸೋಕೊಲ್ಲಾ (ವಿಶೇಷವಾಗಿ ಬೆಣಚುಕಲ್ಲನ್ನು ತುಂಬಿಸುವಾಗ); ಲಾಜುಲೈಟ್‌; ಸ್ಮಿತ್‌ಸೊನೈಟ್‌; ಹೆಮಿಮಾರ್ಫೈಟ್‌; ವಾರ್ಡೈಟ್‌; ಮತ್ತು ಓಡೊಂಟೊಲೈಟ್‌ ಅಥವಾ "ಮೂಳೆ ವೈಡೂರ್ಯ" ಎಂದು ಕರೆಯಲ್ಪಡುವ, ವಿವಿಯಾನೈಟ್‌ ಖನಿಜದಿಂದಾಗಿ ಸ್ವಾಭಾವಿಕವಾಗಿ ನೀಲಿ ಬಣ್ಣವನ್ನು ಹೊಂದಿರುವ ಒಂದು ಪಳೆಯುಳಿಕೆ ಮೂಳೆ ಅಥವಾ ಹಲ್ಲು. ಇಂದು ಓಡೊಂಟೊಲೈಟ್‌ ಅಪರೂಪವಾಗಿ ದೊರೆಯುತ್ತದೆಯಾದರೂ, ಇದನ್ನು ಹಿಂದೊಮ್ಮೆ ದಕ್ಷಿಣದ ಫ್ರಾನ್ಸ್‌‌‌ನಲ್ಲಿ ಬೃಹತ್‌‌ ಪರಿಮಾಣಗಳಲ್ಲಿ ಗಣಿಯಿಂದ ತೆಗೆಯಲಾಗಿತ್ತು; ವೈಡೂರ್ಯದ ಒಂದು ಬದಲಿ ಬಳಕೆಯಾಗಿ ಇದು ಹೊಂದಿರುವ ಉಪಯುಕ್ತತೆಯು ಈ ಗಣಿಗಾರಿಕೆಯ ಹಿಂದಿನ ನಿರ್ದಿಷ್ಟ ಕಾರಣವಾಗಿತ್ತು.

ಮೇಲ್ಮೈ ರಚನೆಯನ್ನು ಮಸೂರದ ನೆರವಿನಿಂದ ವರ್ಧನೆ ಮಾಡಿ ನೋಡುವ, ಹಾನಿಕರವಲ್ಲದ ನಿಕಟವಾದ ಅವಲೋಕನದ ಮೇಲೆ ಪ್ರಧಾನವಾಗಿ ವಿಶ್ವಾಸವಿಡುವ ಹಲವಾರು ಪರೀಕ್ಷೆಗಳನ್ನು ಬಳಸಿಕೊಂಡು, ಈ ಖೋಟಾಗಳನ್ನು ರತ್ನಶಾಸ್ತ್ರಜ್ಞರು ಪತ್ತೆಹಚ್ಚುತ್ತಾರೆ; ಹೀಗೆ ಅವಲೋಕಿಸಿದಾಗ, ಒಂದು ವಿಶಿಷ್ಟ ಲಕ್ಷಣಗಳಿಲ್ಲದ, ನಸುಬಿಳಿಯ ಮೂಲದ್ರವ್ಯದ ಮಚ್ಚೆಗಳು ಅಥವಾ ಚುಕ್ಕೆಗಳಿಂದ ದಟ್ಟವಾಗಿ ತುಂಬಿಕೊಂಡಿರುವ ನಸುಬಣ್ಣದ ನೀಲಿ ಹಿನ್ನೆಲೆಯು ಕಾಣಿಸಿಕೊಂಡರೆ ಅದು ನೈಸರ್ಗಿಕ ವೈಡೂರ್ಯದ ವಿಶಿಷ್ಟ ಮೇಲ್ಮೈ ನೋಟ ಎನಿಸಿಕೊಳ್ಳುತ್ತದೆ. ಇದೇ ವೇಳೆಗೆ, ತಯಾರಿಸಲ್ಪಟ್ಟ ನಕಲಿಗಳು ಬಣ್ಣ (ಸಾಮಾನ್ಯವಾಗಿ ಒಂದು ಏಕರೂಪದ ಗಾಢವಾದ ನೀಲಿಬಣ್ಣ) ಹಾಗೂ ಮೇಲ್ಮೈ ವಿನ್ಯಾಸ (ಸಾಮಾನ್ಯವಾಗಿ ತರಿತರಿಯಾದ ರಚನೆ ಅಥವಾ ಸಕ್ಕರೆಯಂಥ ರಚನೆ) ಎರಡರಲ್ಲೂ ಸಹ ಆಮೂಲಾಗ್ರವಾಗಿ ವಿಭಿನ್ನವಾಗಿ ಕಾಣಿಸುತ್ತವೆ. ಗಾಜು ಮತ್ತು ಪ್ಲ್ಯಾಸ್ಟಿಕ್‌‌ಗಳು ಒಂದು ಹೆಚ್ಚಿನ ಮಟ್ಟದ ಅರೆಪಾರದರ್ಶಕತೆಯನ್ನು ಹೊಂದಿದ್ದು, ಮೇಲ್ಮೈನ ಸ್ವಲ್ಪವೇ ಕೆಳಭಾಗದಲ್ಲಿ ಗುಳ್ಳೆಗಳು ಅಥವಾ ಹರಿವಿನ ಗೆರೆಗಳು ಅನೇಕವೇಳೆ ಗೋಚರಿಸುತ್ತವೆ. ಬಣ್ಣ ಹಾಕಿದ ನಕಲಿಗಳಲ್ಲಿ ಹರಳು ಎಲ್ಲೆಗಳ ನಡುವೆ ಬಣ್ಣಹಾಕಲ್ಪಟ್ಟಿರುವುದು ಗೋಚರಿಸಬಹುದು.

ಆದಾಗ್ಯೂ, ಕೆಲವೊಂದು ರಚನಾತ್ಮಕವಲ್ಲದ ಪರೀಕ್ಷೆಗಳು ಅವಶ್ಯಕವಾಗಿ ಕಂಡುಬರಬಹುದು; ಉದಾಹರಣೆಗೆ, ದುರ್ಬಲಗೊಳಿಸಿದ ಹೈಡ್ರೋಕ್ಲೋರಿಕ್‌ ಆಮ್ಲದ ಲೇಪಿಸುವಿಕೆಯಿಂದಾಗಿ ಓಡೊಂಟೊಲೈಟ್‌ ಮತ್ತು ಮ್ಯಾಗ್ನಸೈಟ್‌ನಂಥ ಕಾರ್ಬೊನೇಟುಗಳು ಗುಳ್ಳೆ ಏಳುವುದಕ್ಕೆ ಮತ್ತು ಹೋವ್ಲೈಟ್‌ ಹಸಿರು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವಾಗಬಹುದು; ಅದೇ ವೇಳೆಗೆ, ಒಂದು ಬಿಸಿಮಾಡಲಾದ ಶೋಧಕ ಅಥವಾ ಲೋಹದ ಕಡ್ಡಿಯು ಘಾಟುವಾಸನೆಯನ್ನು ಉಂಟುಮಾಡಬಹುದಾಗಿದ್ದು, ಇದು ಪ್ಲ್ಯಾಸ್ಟಿಕ್‌ನ ಇರುವಿಕೆಯ ಸೂಚಕವಾಗಿರುತ್ತದೆ. ವಿಶಿಷ್ಟ ಗುರುತ್ವ, ವಕ್ರೀಕರಣ ಸೂಚಿ, ಬೆಳಕು ಹೀರಿಕೆ (ಮೂಲದ್ರವ್ಯವೊಂದರ ಹೀರಿಕೆಯ ಬಣ್ಣಗಳ ಪಟ್ಟಿಯಲ್ಲಿ ಸ್ಪಷ್ಟವಾಗಿರುವಂತೆ), ಮತ್ತು ಇತರ ಭೌತಿಕ ಹಾಗೂ ದೃಗ್ವೈಜ್ಞಾನಿಕ ಗುಣಲಕ್ಷಣಗಳಲ್ಲಿನ ವ್ಯತ್ಯಾಸಗಳನ್ನೂ ಸಹ ಪ್ರತ್ಯೇಕಿಸುವಿಕೆಯ ವಿಧಾನಗಳಾಗಿ ಪರಿಗಣಿಸಲಾಗುತ್ತದೆ. ನಕಲಿ ವೈಡೂರ್ಯವು ಎಷ್ಟೊಂದು ವ್ಯಾಪಕವಾಗಿ ದೊರೆಯುತ್ತದೆಯೆಂದರೆ, ಇದು ನಿಜವಾದ ವೈಡೂರ್ಯವನ್ನು ಒಂದು ವ್ಯಾಪಕ ಅಂತರದೊಂದಿಗೆ ಸಂಖ್ಯೆಯಲ್ಲಿ ಮೀರಿಸುವ ಸಾಧ್ಯತೆಗಳಿರುತ್ತವೆ. ವಿಶ್ವಾಸಾರ್ಹ ವಾದುದು ಎನ್ನಲಾದ ಸ್ಥಳೀಯ ಅಮೆರಿಕಾದ ಮತ್ತು ಟಿಬೆಟ್ಟಿನ ರತ್ನಾಭರಣಗಳಲ್ಲಿ ಬಳಸಲಾದ ಮೂಲದ್ರವ್ಯವೂ ಸಹ ಅನೇಕವೇಳೆ ಖೋಟಾ ಆಗಿರುತ್ತದೆ ಅಥವಾ, ಸಾಧ್ಯವಾದಷ್ಟು, ಅತೀವವಾಗಿ ಸಂಸ್ಕರಿಸಲ್ಪಟ್ಟಿರುತ್ತದೆ [ಸೂಕ್ತ ಉಲ್ಲೇಖನ ಬೇಕು].

ಸಂಸ್ಕರಣೆಗಳು

[ಬದಲಾಯಿಸಿ]
ಖೊರಾಸಾನ್‌ನ ಮದಾನ್‌ ಹಳ್ಳಿಯಲ್ಲಿನ ಒಂದು ಬಹಳ ಮುಂಚಿನ ವೈಡೂರ್ಯದ ಗಣಿ.

ವೈಡೂರ್ಯದ ಬಣ್ಣ ಹಾಗೂ ಬಾಳಿಕೆಗಳೆರಡನ್ನೂ ವರ್ಧಿಸುವ ಸಲುವಾಗಿ ಅದನ್ನು ಸಂಸ್ಕರಿಸಲಾಗುತ್ತದೆ (ಅಂದರೆ, ಹೆಚ್ಚಿಸಲಾದ ಕಠೋರತೆ ಮತ್ತು ತಗ್ಗಿಸಲಾದ ರಂಧ್ರೀಯವಾಗಿರುವಿಕೆ). ಯಾವುದೇ ಪ್ರಶಸ್ತ ಕಲ್ಲುಗಳಿಗೆ ಸಂಬಂಧಿಸಿದಂತೆ ಅನೇಕ ವೇಳೆ ಕಂಡುಬರುವಂತೆಯೇ, ಸಂಸ್ಕರಣೆಯ ಕುರಿತಾದ ಸಂಪೂರ್ಣ ಬಹಿರಂಗಪಡಿಸುವಿಕೆಯನ್ನು ಆಗಿಂದಾಗ್ಗೆ ನೀಡಲಾಗುವುದಿಲ್ಲ. ಆದ್ದರಿಂದ, ಒಂದು ವೈವಿಧ್ಯಮಯ ಪರೀಕ್ಷಿಸುವಿಕೆ ವಿಧಾನಗಳನ್ನು, ಅವುಗಳಲ್ಲಿ ಕೆಲವೊಂದು ಅವಶ್ಯವಾಗಿ ರಚನಾತ್ಮಕವಲ್ಲದವಾಗಿದ್ದರೂ ಸಹ ಅವನ್ನು ಬಳಸಿಕೊಂಡು, ಸಂದೇಹಾಸ್ಪದ ಕಲ್ಲುಗಳಲ್ಲಿನ ಈ ಸಂಸ್ಕರಣೆಗಳನ್ನು ಪತ್ತೆಹಚ್ಚುವುದು ರತ್ನಶಾಸ್ತ್ರಜ್ಞರಿಗೆ ಬಿಟ್ಟ ವಿಷಯವಾಗಿದೆ. ಉದಾಹರಣೆಗೆ, ಒಂದು ಬಿಸಿಮಾಡಿದ ಶೋಧಕ ಅಥವಾ ಲೋಹದ ಕಡ್ಡಿಯನ್ನು ಬಳಸಿಕೊಂಡು ಒಂದು ಅಸ್ಪಷ್ಟ ಚುಕ್ಕೆಗೆ ತಗುಲಿಸಿದಾಗ, ಅದು ನಿಶ್ಚಿತವಾಗಿ ಎಣ್ಣೆ, ಮೇಣ, ಅಥವಾ ಪ್ಲ್ಯಾಸ್ಟಿಕ್‌‌ ಸಂಸ್ಕರಣೆಯನ್ನು ಹೊರಗೆಡವುತ್ತದೆ.

ಮೇಣ ಲೇಪಿಸುವಿಕೆ ಮತ್ತು ತೈಲ ಲೇಪಿಸುವಿಕೆ

[ಬದಲಾಯಿಸಿ]

ಐತಿಹಾಸಿಕವಾಗಿ ಹೇಳುವುದಾದರೆ, ಲಘುವಾಗಿ ಮೇಣ ಲೇಪಿಸುವ ಮತ್ತು ತೈಲ ಲೇಪಿಸುವ ಪ್ರಕ್ರಿಯೆಗಳು ಪ್ರಾಚೀನ ಕಾಲದಲ್ಲಿ ಬಳಸಲಾಗುತ್ತಿದ್ದ ಮೊದಲ ಸಂಸ್ಕರಣೆಗಳಾಗಿದ್ದವು; ಇವು ಒಂದು ತೆರನಾದ ತೇವವಾಗಿಸುವ ಪರಿಣಾಮವನ್ನು ನೀಡುತ್ತಿದ್ದವಾದ್ದರಿಂದ ಬಣ್ಣ ಹಾಗೂ ಕಾಂತಿಯು ವರ್ಧಿಸುವಲ್ಲಿ ಅದು ಕಾರಣವಾಗುತ್ತಿತ್ತು. ಈ ಸಂಸ್ಕರಣೆಯನ್ನು ಸಂಪ್ರದಾಯವು ಹೆಚ್ಚೂ-ಕಡಿಮೆ ಸ್ವೀಕರಿಸುತ್ತದೆ; ಇದಕ್ಕಿರುವ ವಿಶೇಷ ಕಾರಣವೆಂದರೆ, ಸಂಸ್ಕರಿಸಲ್ಪಟ್ಟ ವೈಡೂರ್ಯವು ಸಾಮಾನ್ಯವಾಗಿ ಪ್ರಥಮತಃ ಒಂದು ಉನ್ನತ ದರ್ಜೆಯನ್ನು ಹೊಂದಿರುತ್ತದೆ. ಕೇವಲ ನವಿರಾಗಿ ಬಿಸಿಮಾಡಿದ ಸಂದರ್ಭದಲ್ಲೂ ಅಥವಾ ಒಂದು ವೇಳೆ ಬಿಸಿಲಿಗೆ ಅತೀವವಾಗಿ ಒಡ್ಡಿದರೆ ತೈಲಲೇಪಿತ ಹಾಗೂ ಮೇಣಲೇಪಿತ ಕಲ್ಲುಗಳು "ಬೆವರುವಿಕೆ"ಗೆ ಈಡಾಗುತ್ತವೆ, ಮತ್ತು ಕಾಲಾನಂತರದಲ್ಲಿ ಅವು ಮಸುಕಾಗಬಹುದು ಅಥವಾ ಒಂದು ಬಿಳಿ ಮೇಲ್ಮೈ ಪದರವನ್ನು ಬೆಳೆಸಿಕೊಳ್ಳಬಹುದು. (ಕೆಲವೊಂದು ಪರಿಣತಿಯ ನೆರವಿನಿಂದ, ಎಣ್ಣೆ ಮತ್ತು ಮೇಣದ ಸಂಸ್ಕರಣೆಗಳನ್ನು ಪೂರ್ವಸ್ಥಿತಿಗೆ ತರಲು ಸಾಧ್ಯವಿದೆ.)

ಸ್ಥಿರೀಕರಣ

[ಬದಲಾಯಿಸಿ]

ಪ್ಲ್ಯಾಸ್ಟಿಕ್‌‌ ಅಥವಾ ನೀರುಗಾಜಿನಿಂದ ಸಂಸ್ಕರಿಸಲ್ಪಟ್ಟ ಮೂಲದ್ರವ್ಯವನ್ನು "ಬಂಧಿಸಲ್ಪಟ್ಟ" ಅಥವಾ "ಸ್ಥಿರೀಕರಿಸಲ್ಪಟ್ಟ" ವೈಡೂರ್ಯ ಎಂದು ಕರೆಯಲಾಗುತ್ತದೆ. ಒಂದು ತೇವವಾಗಿಸುವ ಪರಿಣಾಮವನ್ನು ಉಂಟುಮಾಡಲು ಹಾಗೂ ಬಾಳಿಕೆಯನ್ನು ಸುಧಾರಿಸಲು, ಎಪಾಕ್ಸಿ ಮತ್ತು ಪ್ಲ್ಯಾಸ್ಟಿಕ್‌‌‌‌ಗಳು (ಪಾಲಿಸ್ಟೈರೀನ್‌‌‌‌‌ನಂಥದು) ಹಾಗೂ ನೀರುಗಾಜು (ಸೋಡಿಯಂ ಸಿಲಿಕೇಟ್‌) ಇವುಗಳಿಂದ ಮಾಡಲ್ಪಟ್ಟ, ಅನ್ಯಥಾ ಮಾರಲಾಗದ ಅಮೆರಿಕಾದ ಅಸ್ಪಷ್ಟ ಮೂಲದ್ರವ್ಯದ ಒತ್ತಡ ತುಂಬುವಿಕೆಯನ್ನು ಈ ಪ್ರಕ್ರಿಯೆಯು ಒಳಗೊಳ್ಳುತ್ತದೆ. ಮೇಣ ಲೇಪಿಸುವಿಕೆ ಮತ್ತು ತೈಲಲೇಪಿಸುವಿಕೆಗೆ ಹೋಲಿಸಿದಾಗ, ಪ್ಲ್ಯಾಸ್ಟಿಕ್‌‌ ಹಾಗೂ ನೀರುಗಾಜು ಸಂಸ್ಕರಣೆಗಳು ಸಾಕಷ್ಟು ಹೆಚ್ಚು ಕಾಯಂ ಮತ್ತು ಸ್ಥಿರವಾಗಿರುತ್ತವೆ. ಅಷ್ಟೇ ಅಲ್ಲ, ಸಾಕಷ್ಟು ಸುಧಾರಣೆಯನ್ನು ಒದಗಿಸುವುದಕ್ಕಾಗಿ ಎಣ್ಣೆ ಅಥವಾ ಮೇಣದ ಬಳಕೆಗೆ ಸಂಬಂಧಿಸಿದಂತೆ, ರಾಸಾಯನಿಕವಾಗಿ ಅಥವಾ ಭೌತಿಕವಾಗಿ ತೀರಾ ಅಸ್ಥಿರವಾಗಿರುವ ಮೂಲದ್ರವ್ಯಕ್ಕೆ ಪ್ಲ್ಯಾಸ್ಟಿಕ್‌‌ ಹಾಗೂ ನೀರುಗಾಜು ಸಂಸ್ಕರಣೆಗಳನ್ನು ಅನ್ವಯಿಸಬಹುದಾಗಿರುತ್ತದೆ. ಇದಕ್ಕೆ ವ್ಯತಿರೇಕವಾಗಿ, ಒಂದು ಮಾರ್ಪಾಡಿಗೆ ಸಂಬಂಧಿಸಿದಂತೆ ಸ್ಥಿರೀಕರಣ ಮತ್ತು ಬಂಧಕತೆಯು ತೀರಾ ಆಮೂಲಾಗ್ರವಾಗಿದೆ ಎಂದು ಪರಿಗಣಿಸುವ ಕೆಲವರು ಅದನ್ನು ತಿರಸ್ಕರಿಸುತ್ತಾರೆ.[೧೦]

ಎಪಾಕ್ಸಿ ಬಂಧಕ ಕೌಶಲವನ್ನು 1950ರ ದಶಕದಲ್ಲಿ ಮೊದಲಬಾರಿಗೆ ಅಭಿವೃದ್ಧಿಪಡಿಸಲಾಯಿತು ಮತ್ತು ಇಂದಿಗೂ ಕಾರ್ಯನಿರ್ವಹಿಸುತ್ತಿರುವ, ಅರಿಜೋನಾದ ಕೋಲ್‌ಬಾಗ್‌ ಪ್ರೊಸೆಸಿಂಗ್‌‌ ಕಂಪನಿಗೆ ಇದರ ಕೀರ್ತಿಯನ್ನು ನೀಡಲಾಗಿದೆ. ಈ ವಿಧಾನವು ಒಂದು ದುಬಾರಿ ಪ್ರಕ್ರಿಯೆಯಾಗಿರುವುದರ ಜೊತೆಗೆ ಸಂಪೂರ್ಣಗೊಳ್ಳಲು ಅನೇಕ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆಯಾದರೂ, ಅಮೆರಿಕಾದ ಬಹುಪಾಲು ಮೂಲದ್ರವ್ಯವು ಈಗ ಈ ವಿಧಾನದಲ್ಲೇ ಸಂಸ್ಕರಿಸಲ್ಪಡುತ್ತದೆ. ಇಂಥದೊಂದು ತುಂಬುವಿಕೆಯ ವಿಧಾನವಿಲ್ಲದೇ ಹೋದರೆ, ಅಮೆರಿಕಾದ ಬಹುಪಾಲು ಗಣಿಗಾರಿಕಾ ಕಾರ್ಯಾಚರಣೆಗಳು ಲಾಭದಾಯಕವಾಗಿ ನಡೆಯುವುದು ಸಾಧ್ಯವಿಲ್ಲ.

ಬಣ್ಣಕೊಡುವಿಕೆ

[ಬದಲಾಯಿಸಿ]

ಬಣ್ಣವನ್ನು ವರ್ಧಿಸಲು -ಅಂದರೆ ಬಣ್ಣವನ್ನು ಏಕರೂಪವಾಗಿಸಲು ಅಥವಾ ಸಂಪೂರ್ಣವಾಗಿ ಬದಲಿಸಲು- ಮಾಡಲಾಗುವ ಪ್ರಷ್ಯನ್‌‌ ನೀಲಿ ಮತ್ತು ಇತರ ವರ್ಣದ್ರವ್ಯಗಳ ಬಳಕೆಯು (ಅನೇಕಬಾರಿ ಬಂಧಕ ಸಂಸ್ಕರಣೆಗಳ ಜೊತೆಯಲ್ಲಿ), ಕೆಲವೊಂದು ಪರಿಶುದ್ಧತಾವಾದಿಗಳಿಂದ[೧೦] ವಂಚನೆಯ ಕ್ರಮ ಎಂದು ಪರಿಗಣಿಸಲ್ಪಟ್ಟಿದೆ; ಇದಕ್ಕಿರುವ ವಿಶೇಷ ಕಾರಣವೇನೆಂದರೆ, ಕೆಲವೊಂದು ವರ್ಣದ್ರವ್ಯಗಳು ಮಸುಕಾಗಬಹುದು ಅಥವಾ ಧರಿಸುವವನಿಂದ ಉಜ್ಜಿ ತೆಗೆದುಹಾಕಲ್ಪಡಬಹುದು. ವೈಡೂರ್ಯದ ನಾಳದಂಥ ರಚನೆಗಳನ್ನು ಗಾಢಗೊಳಿಸಲೂ ಸಹ ವರ್ಣದ್ರವ್ಯಗಳು ಬಳಸಲ್ಪಟ್ಟಿವೆ.

ಪುನಾರಚನೆ

[ಬದಲಾಯಿಸಿ]

ಲಭ್ಯವಿರುವ ಸಂಸ್ಕರಣೆಗಳ ಪೈಕಿ "ಪುನಾರಚನೆ"ಯ ವಿಧಾನವು ಪ್ರಾಯಶಃ ಅತ್ಯಂತ ಆಮೂಲಾಗ್ರವಾದ ವಿಧಾನವಾಗಿದೆ; ಪ್ರತ್ಯೇಕವಾಗಿ ಬಳಸಲ್ಪಡುವುದಕ್ಕೆ ತೀರಾ ಚಿಕ್ಕದಾಗಿರುವ ಅಪ್ಪಟ-ಸೂಕ್ಷ್ಮ ವೈಡೂರ್ಯದ ಮೂಲದ್ರವ್ಯದ ಮುರುಕುಗಳನ್ನು ಈ ವಿಧಾನದಲ್ಲಿ ಪುಡಿಮಾಡಿ, ನಂತರದಲ್ಲಿ ಸೇರಿಸಿಟ್ಟು ಒಂದು ಘನ ರಾಶಿಯನ್ನಾಗಿ ರೂಪಿಸಲಾಗುತ್ತದೆ. ಒಂದು ಪಕ್ಷ ಎಲ್ಲವೂ ಅಲ್ಲದಿದ್ದರೂ, ಈ "ಮರುರೂಪಿಸಲ್ಪಟ್ಟ" ಮೂಲದ್ರವ್ಯದ ಬಹುಭಾಗವು ಯಾವುದೇ ನೈಸರ್ಗಿಕ ಅಂಗಭಾಗಗಳಿಲ್ಲದೆಯೇ ಕೃತಕವಾಗಿರುವುದರ ರೀತಿಯಲ್ಲಿರುತ್ತದೆ, ಅಥವಾ ಅದಕ್ಕೆ ಸೇರಿಸಲಾದ ಹೊರಗಿನ ಭರ್ತಿಸಾಮಗ್ರಿಯ ಮೂಲದ್ರವ್ಯವನ್ನು ಹೊಂದಿರಬಹುದಾಗಿರುತ್ತದೆ.

ವಿಕಿರಣಗಳಿಗೆ ಈಡುಮಾಡುವುದು

[ಬದಲಾಯಿಸಿ]

ಅಷ್ಟೊಂದು ಪರಿಚಿತವಲ್ಲದಿದ್ದರೂ, ಕಡಿಮೆ "ಅಸ್ಪಷ್ಟ"ವನ್ನಾಗಿಸುವುದಕ್ಕಾಗಿ ಕೆಲವೊಂದು ವೈಡೂರ್ಯವನ್ನು ವಿಕಿರಣಕ್ಕೆ ಈಡುಮಾಡಲಾಗುತ್ತದೆ. ಈ ಸಂಸ್ಕರಣೆಯನ್ನು ಬಹಿರಂಗಪಡಿಸುವುದು ತೀರಾ ಅಪರೂಪ. ವಿಕಿರಣಿಸಲ್ಪಟ್ಟ ಎಲ್ಲಾ ರತ್ನದ ಕಲ್ಲುಗಳಂತೆ, USAಯಲ್ಲಿ ಮಾರುವುದಕ್ಕೆ ಮುಂಚಿತವಾಗಿ ಇದನ್ನೂ ಸಹ ನ್ಯೂಕ್ಲಿಯರ್‌ ರೆಗ್ಯುಲೇಟರಿ ಕಮಿಷನ್‌‌ನಿಂದ ಪರವಾನಗಿ ಪಡೆದ ಪ್ರಯೋಗಾಲಯವೊಂದರಿಂದ ಪರೀಕ್ಷೆಗೊಳಪಡಿಸುವುದು ಅಗತ್ಯವಾಗಿರುತ್ತದೆ.

ಬೆಂಬಲ

[ಬದಲಾಯಿಸಿ]

ಅಪ್ಪಟವಾದ ವೈಡೂರ್ಯವು ಅನೇಕವೇಳೆ ತೆಳುವಾದ ಸ್ತರಗಳಂತೆ ಕಂಡುಬರುವುದರಿಂದ, ಬಲವರ್ಧನೆಯ ಒಂದು ವಿಧಾನವಾಗಿ ಬಲವಾದ ಬಾಹ್ಯ ಮೂಲದ್ರವ್ಯದ ಒಂದು ತಳಹದಿಗೆ ಇದು ಅಂಟಿಕೊಂಡಿರಬಹುದು. ಈ ಕಲ್ಲುಗಳನ್ನು "ಆಧರಿಸಲ್ಪಟ್ಟ" ಕಲ್ಲುಗಳು ಎಂದು ಕರೆಯಲಾಗುತ್ತದೆ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೈಋತ್ಯದ ಭಾಗದಲ್ಲಿರುವ ತೆಳುವಾಗಿ ಕತ್ತರಿಸಿದ ಎಲ್ಲಾ ವೈಡೂರ್ಯವೂ ಆಧರಿಸಲ್ಪಟ್ಟವಾಗಿರುತ್ತದೆ ಎಂಬುದು ಪ್ರಮಾಣಕ ಪರಿಪಾಠವಾಗಿರುತ್ತದೆ. ಈ ವಲಯದ ಹುಟ್ಟಿನಿಂದ ಬಂದ ಸ್ಥಳೀಕ ಜನರು ತಾವು ಮಾಡುವ ವೈಡೂರ್ಯದ ಪರಿಗಣನಾರ್ಹ ಬಳಕೆ ಹಾಗೂ ಧರಿಸುವಿಕೆಯ ಕಾರಣದಿಂದಾಗಿ, ಆಧಾರವಾಗಿರುವಿಕೆಯು ವೈಡೂರ್ಯದ ತೆಳುವಾಗಿ ಕತ್ತರಿಸಲಾದ ಚಪ್ಪಡಿಗಳು ಹಾಗೂ ಅಂಕಣಗಳ ಬಾಳಿಕೆಯನ್ನು ಹೆಚ್ಚಿಸಿದವು ಎಂದು ಕಂಡುಕೊಂಡರು. ಒಂದು ವೇಳೆಗೆ ಕಲ್ಲಿಗೆ ಆಧಾರವನ್ನು ನೀಡದೇ ಹೋದಲ್ಲಿ, ಅದರ ಬಹುತೇಕ ಭಾಗವು ಸೀಳುವಿಕೆಯಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಅವರು ಕಂಡುಕೊಂಡರು. ಹಳೆಯ ಮಾದರಿಯ T ಬ್ಯಾಟರಿಗಳ ಕೋಶಗಳು ಆರಂಭದ ಆಧಾರದ ಮೂಲದ್ರವ್ಯಗಳಾಗಿದ್ದವು; ಇದು ಹಳೆಯ ಧ್ವನಿಲೇಖ ದಾಖಲೆಗಳಿಗೆ ಮುಂದುವರಿದು, ತೀರಾ ಇತ್ತೀಚೆಗಿನ ಎಪಾಕ್ಸಿ ಉಕ್ಕಿನ ರಾಳಗಳ ಬಳಕೆಯವರೆಗೆ ಮುಂದುವರಿದುಕೊಂಡು ಬಂದಿದೆ. ಸ್ಥಳೀಯ ಅಮೆರಿಕಾದ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೈಋತ್ಯ ಭಾಗದ ರತ್ನಾಭರಣಗಳ ವ್ಯಾಪಾರ ವಲಯದಿಂದಾಚೆಗೆ ವೈಡೂರ್ಯದ ಆಧಾರವಾಗಿರುವಿಕೆಯ ಕುರಿತು ತಿಳಿದಿಲ್ಲ. ಅತ್ಯುನ್ನತ ಗುಣಮಟ್ಟದ ವೈಡೂರ್ಯದ ಮೌಲ್ಯವು ಅದು ಆಧರಿಸಲ್ಪಟ್ಟದ್ದು ಎಂಬ ಕಾರಣಕ್ಕಾಗಿ ರಿಯಾಯಿತಿಗೆ ಒಳಗಾಗಿಲ್ಲ ಮತ್ತು ಅತ್ಯಂತ ತೆಳುವಾಗಿ ಕತ್ತರಿಸಲ್ಪಟ್ಟ ಅಮೆರಿಕಾದ ವಾಣಿಜ್ಯ ರತ್ನದ ಕಲ್ಲುಗಳಿಗೆ ಸಂಬಂಧಿಸಿದಂತೆ ಸದರಿ ಪ್ರಕ್ರಿಯೆಯು ಅವಶ್ಯವಾಗಿ ನಿರೀಕ್ಷಿಸಲ್ಪಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಮೌಲ್ಯನಿರ್ಣಯ ಮತ್ತು ಕಾಳಜಿ

[ಬದಲಾಯಿಸಿ]
ಅಮೆರಿಕನ್‌ ರಾಬಿನ್‌‌ ಗೂಡು ಮತ್ತು ಮೊಟ್ಟೆಗಳು
ವಿಭಿನ್ನ ಬಣ್ಣಗಾರಿಕೆಯ ಒಂದು ಬೃಹತ್‌‌ ವೈವಿಧ್ಯಯನ್ನು ತೋರಿಸುತ್ತಿರುವ, ಶಿಲಾಖಂಡದಲ್ಲಿನ ವೈಡೂರ್ಯದ ಹಲಗೆ

ವೈಡೂರ್ಯದ ಮೌಲ್ಯವನ್ನು ನಿರ್ಣಯಿಸುವಲ್ಲಿ ಬಣ್ಣದ ಗಡಸುತನ ಹಾಗೂ ಸಮೃದ್ಧತೆ ಎರಡು ಪ್ರಮುಖ ಅಂಶಗಳಾಗಿ ಪಾತ್ರವಹಿಸುತ್ತವೆ; ಸಾಮಾನ್ಯವಾಗಿ ಹೇಳುವುದಾದರೆ, ಬಣ್ಣ ಎಂಬುದು ವೈಯಕ್ತಿಕ ಅಭಿರುಚಿಯ ಅಥವಾ ಪ್ರತ್ಯೇಕ ಅಭಿರುಚಿಯ ಒಂದು ವಿಷಯವಾಗಿದ್ದು, ಒಂದು ಗಾಢವಾದ ಆಕಾಶನೀಲಿಯಿಂದ "ರಾಬಿನ್‌ನ ಮೊಟ್ಟೆಯ‌" ನೀಲಿಯವರೆಗಿನ (ಅಮೆರಿಕನ್‌ ರಾಬಿನ್‌‌ ಪಕ್ಷಿಯ ಮೊಟ್ಟೆಗಳಿಗೆ ಸಂಬಂಧಿಸಿದಂತೆ) ಶ್ರೇಣಿಯು ಅತ್ಯಂತ ಅಪೇಕ್ಷಣೀಯ ಬಣ್ಣವಾಗಿರುತ್ತದೆ.[] ಬಣ್ಣ ಯಾವುದೇ ಇರಲಿ, ವೈಡೂರ್ಯವು ಅಳತೆಮೀರಿ ಮೃದು ಅಥವಾ ಅಸ್ಪಷ್ಟವಾಗಿರಬಾರದು; ಒಂದು ಸಂಸ್ಕರಿಸಲ್ಪಟ್ಟರೂ ಸಹ, ಇಂಥ ಶ್ರೇಷ್ಠವಲ್ಲದ ಮೂಲದ್ರವ್ಯವು (ಈ ವರ್ಗಕ್ಕೆ ಬಹುಪಾಲು ವೈಡೂರ್ಯವು ಸೇರುತ್ತದೆ) ಕಾಲಾನಂತರದಲ್ಲಿ ಬಣ್ಣ ಕಳೆದುಕೊಳ್ಳುತ್ತದೆ ಅಥವಾ ಮಸುಕಾಗುವಿಕೆಗೆ ಈಡಾಗುತ್ತದೆ ಮತ್ತು ಅವು ರತ್ನಾಭರಣಗಳಲ್ಲಿನ ಎಂದಿನ ಸಾಮಾನ್ಯ ಬಳಕೆಯವರೆಗೆ ಸಮರ್ಥವಾಗಿರುವುದಿಲ್ಲ.

ವೈಡೂರ್ಯವು ಕಂಡುಬರುವ ಮೂಲ ಬಂಡೆ ಅಥವಾ ಶಿಲಾಖಂಡ ವನ್ನು ಮಸಿಯ ಕರೆಗಳ ರೀತಿಯಲ್ಲಿ ಅಥವಾ ಒಂದು ಜಾಲಬಂಧದಂಥ ಮಾದರಿಯಲ್ಲಿ ಕಲ್ಲಿನ ಮೂಲಕ ಸಾಗುವ ಕಂದು ಅಥವಾ ಕಪ್ಪು ನಾಳದಂಥ ರಚನೆಗಳ ಒಂದು ಜಾಲದ ರೀತಿಯಲ್ಲಿ ಅನೇಕವೇಳೆ ಕಾಣಬಹುದು; ಒಂದು ವೇಳೆ ಫಲಿತಾಂಶವು ಪೂರಕವಾಗಿದ್ದಲ್ಲಿ ಈ ನಮೂನೆಯು ಕಲ್ಲಿಗೆ ಮೌಲ್ಯವನ್ನು ಸೇರ್ಪಡೆ ಮಾಡಬಹುದು, ಆದರೆ ಇಂಥದೊಂದು ಫಲಿತಾಂಶವು ಅಸಾಮಾನ್ಯವಾಗಿರುತ್ತದೆ. ಇಂಥ ಮೂಲದ್ರವ್ಯವನ್ನು ಕೆಲವೊಮ್ಮೆ "ಜೇಡರಬಲೆಯ ಶಿಲಾಖಂಡ" ಎಂದು ವಿವರಿಸಲಾಗುತ್ತದೆ; ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೈಋತ್ಯ ಭಾಗದಲ್ಲಿ ಹಾಗೂ ದೂರದ ಪ್ರಾಚ್ಯ ದೇಶಗಳಲ್ಲಿ ಇದಕ್ಕೆ ಹೆಚ್ಚಿನ ಮೌಲ್ಯವನ್ನು ಕಟ್ಟಲಾಗುತ್ತದೆಯಾದರೂ, ಸಮೀಪ ಪ್ರಾಚ್ಯ ದೇಶಗಳಲ್ಲಿ ಇದಕ್ಕೆ ಹೆಚ್ಚಿನ ಬೆಲೆಕಟ್ಟಲಾಗುವುದಿಲ್ಲ; ಈ ವಲಯದಲ್ಲಿ ಅಂದಗೆಡದ ಹಾಗೂ ನಾಳದಂಥ ರಚನೆಯಿಂದ-ಮುಕ್ತವಾದ ಮೂಲದ್ರವ್ಯವು ಪರಿಪೂರ್ಣ ಮಾದರಿ ಎನಿಸಿಕೊಂಡಿದೆ (ನಮೂನೆಯು ಎಷ್ಟು ಪೂರಕವಾಗಿರಬಹುದು ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಇದು ಪರಿಗಣಿಸಲ್ಪಟ್ಟಿದೆ). ಬಣ್ಣದ ಏಕರೂಪತೆಯು ಅಪೇಕ್ಷಣೀಯವಾಗಿರುತ್ತದೆ, ಮತ್ತು ಸಿದ್ಧಪಡಿಸಿದ ಕಲಾಕೃತಿಗಳಲ್ಲಿ ಕಾರ್ಯಕೌಶಲದ ಗುಣಮಟ್ಟವೂ ಸಹ ಒಂದು ಅಂಶವಾಗಿರುತ್ತದೆ; ಮೆರುಗಿನ ಗುಣಮಟ್ಟ ಹಾಗೂ ಕಲ್ಲಿನ ಸಮರೂಪತೆಯನ್ನು ಇದು ಒಳಗೊಂಡಿರುತ್ತದೆ. ಮಾಪನಾಂಕ ನಿರ್ಣಯಿಸಲ್ಪಟ್ಟ ಕಲ್ಲುಗಳನ್ನು—ಅಂದರೆ, ಪ್ರಮಾಣಕ ರತ್ನಾಭರಣಗಳ ನಿಗದಿಪಡಿಸುವಿಕೆಯ ಅಳತೆಗಳಿಗೆ ಅನುಸಾರವಾಗಿರುವ ಕಲ್ಲುಗಳನ್ನು— ಕೂಡಾ ಬಹುಜನರು ಬಯಸಬಹುದು. ಹವಳ ಮತ್ತು ಇತರ ಅಪಾರದರ್ಶಕ ರತ್ನಗಳ ರೀತಿಯಲ್ಲಿ, ತೂಕಕ್ಕಿಂತ ಹೆಚ್ಚಾಗಿ ಮಿಲಿಮೀಟರುಗಳಲ್ಲಿನ ತನ್ನ ಭೌತಿಕ ಗಾತ್ರಕ್ಕೆ ಅನುಸಾರವಾಗಿರುವ ಒಂದು ಬೆಲೆಯಲ್ಲಿ ವೈಡೂರ್ಯವು ಸಾಮಾನ್ಯವಾಗಿ ಮಾರಾಟವಾಗುತ್ತದೆ.

ಅನೇಕ ವಿಭಿನ್ನ ವಿಧಾನಗಳಲ್ಲಿ ವೈಡೂರ್ಯವು ಸಂಸ್ಕರಿಸಲ್ಪಡುತ್ತದೆ; ಕೆಲವೊಂದು ವಿಧಾನಗಳು ಹೆಚ್ಚು ಕಾಯಂ ಆಗಿದ್ದು, ಇತರ ವಿಧಾನಗಳಿಗಿಂತ ಆಮೂಲಾಗ್ರವಾಗಿರುತ್ತವೆ. ಇವುಗಳ ಪೈಕಿಯ ಕೆಲವೊಂದು ಸಂಸ್ಕರಣೆಗಳನ್ನು ಸ್ವೀಕಾರಾರ್ಹವಾಗಿಸಬೇಕೇ ಇಲ್ಲವೇ ಎಂಬುದರ ಕುರಿತಾದ ವಿವಾದವು ಚಾಲ್ತಿಯಲ್ಲಿದೆಯಾದರೂ, ಒಂದು ವಿಧಾನವನ್ನು ಹೆಚ್ಚೂಕಮ್ಮಿ ಸಾರ್ವತ್ರಿಕವಾಗಿ ಬಿಟ್ಟುಬಿಡಬೇಕಾಗುತ್ತದೆ: ಬಹುಪಾಲು ರತ್ನ ವೈಡೂರ್ಯದ ಬಣ್ಣ ಹಾಗೂ ಕಾಂತಿಯನ್ನು ಸುಧಾರಿಸಲು ಅದಕ್ಕೆ ಬಳಸಲಾಗುವ ಲಘುವಾದ ಮೇಣ ಲೇಪಿಸುವಿಕೆ ಅಥವಾ ತೈಲ ಲೇಪಿಸುವಿಕೆಯ ವಿಧಾನವು ಈ ಗುಂಪಿಗೆ ಸೇರುತ್ತದೆ; ಒಂದು ವೇಳೆ ಮೂಲದ್ರವ್ಯವು ಮೊದಲನೆಯದಾಗಿ ಉನ್ನತ ಗುಣಮಟ್ಟದ್ದಾಗಿದ್ದರೆ, ತೀರಾ ಅತ್ಯಲ್ಪ ಪ್ರಮಾಣದಲ್ಲಿ ಮೇಣ ಅಥವಾ ಎಣ್ಣೆಯು ಹೀರಲ್ಪಡುತ್ತದೆ ಮತ್ತು ಈ ಕಾರಣದಿಂದ ವೈಡೂರ್ಯವು ತನ್ನ ಸೌಂದರ್ಯಕ್ಕೆ ಸಂಬಂಧಿಸಿದಂತೆ ಈ ಅಶಾಶ್ವತ ಸಂಸ್ಕರಣೆಯನ್ನು "ನೆಚ್ಚಿಕೊಳ್ಳುವುದಿಲ್ಲ". ಇತರೆಲ್ಲಾ ಅಂಶಗಳು ಸಮಾನವಾಗಿರುವುದರಿಂದ, ಸಂಸ್ಕರಿಸದ ವೈಡೂರ್ಯವು ಯಾವಾಗಲೂ ಒಂದು ಉನ್ನತವಾದ ಬೆಲೆಯನ್ನೇ ಬಯಸುತ್ತದೆ. ಸೇರಿಸಲ್ಪಟ್ಟ ಮತ್ತು "ಮರುರೂಪಿಸಲ್ಪಟ್ಟ" ಮೂಲದ್ರವ್ಯವು ಪರಿಗಣನೀಯವಾಗಿ ಕಡಿಮೆ ಮೌಲ್ಯದ್ದಾಗಿದೆ.

ಒಂದು ಫಾಸ್ಫೇಟ್‌ ಖನಿಜವಾಗಿರುವ ವೈಡೂರ್ಯವು ಅಂತರ್ಗತವಾಗಿ ನಾಜೂಕಾಗಿದ್ದು, ದ್ರಾವಕಗಳಿಗೆ ಸೂಕ್ಷ್ಮ ಸಂವೇದಿಯಾಗಿರುತ್ತದೆ; ಸುಗಂಧದ್ರವ್ಯ ಮತ್ತು ಇತರ ಶೃಂಗಾರ ಸಾಧನಗಳು ಇದರ ಮುಕ್ತಾಯದ ನಯಗೆಲಸದ ಮೇಲೆ ದಾಳಿಮಾಡುತ್ತವೆ ಮತ್ತು ಇವು ವೈಡೂರ್ಯ ರತ್ನಗಳ ಬಣ್ಣವನ್ನು ಮಾರ್ಪಡಿಸಬಹುದು; ಚರ್ಮ ತೈಲಗಳು, ರತ್ನಾಭರಣಗಳ ಶುದ್ಧೀಕರಣಕ್ಕೆ ಬಳಸಲಾಗುವ ಬಹುಪಾಲು ವಾಣಿಜ್ಯ ದ್ರವ ಪದಾರ್ಥಗಳಿಗೂ ಇದೇ ಮಾತು ಅನ್ವಯವಾಗುತ್ತದೆ. ವೈಡೂರ್ಯವನ್ನು ಸೂರ್ಯನ ನೇರಬೆಳಕಿಗೆ ಸುದೀರ್ಘವಾದ ಅವಧಿಗೆ ಒಡ್ಡುವುದರಿಂದಲೂ ಸಹ, ಅದು ಬಣ್ಣ ಕಳೆದುಕೊಳ್ಳಬಹುದು ಅಥವಾ ನಿರ್ಜಲೀಕರಿಸಲ್ಪಡಬಹುದು. ಆದ್ದರಿಂದ ಇಂಥ ಆಭರಣಗಳನ್ನು ಧರಿಸಿರುವಾಗ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ: ವೈಡೂರ್ಯದ ರತ್ನಾಭರಣಗಳನ್ನು ಧರಿಸುವುದಕ್ಕೆ ಮುಂಚಿತವಾಗಿಯೇ ಸನ್‌ಸ್ಕ್ರೀನ್‌ ಹಾಗೂ ಹೇರ್‌ ಸ್ಪ್ರೇಯನ್ನು ಒಳಗೊಂಡಂತೆ ಶೃಂಗಾರ ಸಾಧನಗಳನ್ನು ಲೇಪಿಸಿಕೊಳ್ಳಬೇಕು, ಮತ್ತು ಬೀಚ್‌ ಅಥವಾ ಸೂರ್ಯಸ್ನಾನ ಮಾಡಲ್ಪಡುವ ಇನ್ನಾವುದೇ ಪರಿಸರದಲ್ಲಿ ಅವನ್ನು ಧರಿಸಬಾರದು. ಬಳಕೆಯ ನಂತರ, ವೈಡೂರ್ಯದಲ್ಲಿ ಶಿಲ್ಕು ಕಟ್ಟಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ, ಅದನ್ನು ಒಂದು ಮೃದುವಾದ ಬಟ್ಟೆಯಿಂದ ನವಿರಾಗಿ ಚೊಕ್ಕಮಾಡಬೇಕು ಹಾಗೂ ಗಡುಸಾಗಿರುವ ರತ್ನಗಳಿಂದ ವೈಡೂರ್ಯವು ಗೀರುವಿಕೆಗೆ ಒಳಗಾಗುವುದನ್ನು ತಪ್ಪಿಸಲು ಅದನ್ನು ಅದರದೇ ಡಬ್ಬಿಯೊಳಗೆ ಶೇಖರಿಸಿಡಬೇಕು. ಒಂದು ವೇಳೆ ವೈಡೂರ್ಯವನ್ನು ಗಾಳಿಯಾಡದ ಡಬ್ಬಿಯೊಂದರಲ್ಲಿ ಶೇಖರಿಸಿಟ್ಟರೆ, ಅದರಿಂದ ವೈಡೂರ್ಯದ ಮೇಲೆ ಪ್ರತಿಕೂಲ ಪರಿಣಾಮಗಳಾಗಬಹುದು.

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal

ಟಿಪ್ಪಣಿಗಳು

[ಬದಲಾಯಿಸಿ]
  1. Hurlbut, Cornelius S.; Klein, Cornelis, 1985, Manual of Mineralogy, 20th ed., John Wiley and Sons, New York ISBN 0-471-80580-7
  2. ೨.೦ ೨.೧ "Turquoise:turquoise mineral information and data". mindat.org. Retrieved 2006-10-04.
  3. http://rruff.geo.arizona.edu/doclib/hom/turquoise.pdf Handbook of Mineralogy
  4. https://books.google.com/books?id=-46X8VXHA_UC&pg=PA419&dq=turquoise+stone+central+asia&ei=I9mzS5alH5HwzAS7n5iNDA&hl=tr&cd=1#v=onepage&q=turquoise%20stone%20central%20asia&f=false
  5. ಮಿನರಲ್ಸ್‌ ಆಫ್‌ ನೆವಡಾ - ನೆವಡಾ ಗಣಿ ಇಲಾಖೆ ವಿಶೇಷ ಪ್ರಕಟಣೆ 31 ಪುಟಗಳು 78-81; 443-445
  6. "Turquoise Crystal Localities". Element 51. Retrieved 2006-09-23.
  7. ೭.೦ ೭.೧ ""Turquoise – The Gemstone of Tibet ", Article by Gemmologist Martin Watson". Archived from the original on 2007-03-19. Retrieved 2007-06-01.
  8. "China Exhibition". Washington D.C.: National Gallery of Art. 1999. Archived from the original on 2006-09-30. Retrieved 2006-09-23.
  9. "U.S. Geological Survey article on Turquoise". Retrieved 2007-06-01.
  10. ೧೦.೦ ೧೦.೧ ""Turquoise", Article by Journalist Joseph A. Harriss". Archived from the original on 2005-04-22. Retrieved 2007-06-01. ಉಲ್ಲೇಖ ದೋಷ: Invalid <ref> tag; name "Purists" defined multiple times with different content

ಆಕರಗಳು

[ಬದಲಾಯಿಸಿ]
  • ಬ್ರಿಟಿಷ್‌ ಮ್ಯೂಸಿಯಂ (2000). ಅಜ್ಟೆಕ್‌ ಟರ್ಕ್ವಾಸ್‌ ಮೊಸಾಯಿಕ್ಸ್‌ . www.thebritishmuseum.ac .uk ನಿಂದ 2004ರ ನವೆಂಬರ್‌ 15ರಂದು ಮರುಸಂಪಾದಿಸಲಾಯಿತು.
  • ಡಯೆಟ್ರಿಕ್‌, R. V. (2004). ಟರ್ಕ್ವಾಸ್‌ . www.cst.cmich.edu/users/dietr1rv/Turquoise.htm ನಿಂದ 2004ರ ನವೆಂಬರ್‌ 20ರಂದು ಮರುಸಂಪಾದಿಸಲಾಯಿತು
  • ಪರ್ಷಿಯಾದ ವೈಡೂರ್ಯದ ಗಣಿ [೧] Archived 2019-06-26 ವೇಬ್ಯಾಕ್ ಮೆಷಿನ್ ನಲ್ಲಿ.
  • ಹರ್ಲ್‌ಬಟ್‌, ಕಾರ್ನೇಲಿಯಸ್‌ S.; ಕ್ಲೇನ್‌, ಕಾರ್ನೆಲಿಸ್‌, 1985, ಮ್ಯಾನ್ಯುಯೆಲ್‌ ಆಫ್‌ ಮಿನರಾಲಜಿ , 20ನೇ ಆವೃತ್ತಿ, ಜಾನ್‌ ವೈಲಿ ಅಂಡ್‌ ಸನ್ಸ್‌, ನ್ಯೂಯಾರ್ಕ್‌ ISBN 0-471-80580-7
  • ಕಿಂಗ್‌‌, R. J. (2002) ಟರ್ಕ್ವಾಸ್‌ . ಜಿಯಾಲಜಿ ಟುಡೆ 18 (3), ಪುಟಗಳು 110–114. doi.org/10.1046/j.1365-2451.2002.00345.x ನಿಂದ 2004ರ ನವೆಂಬರ್‌ 24ರಂದು ಮರುಸಂಪಾದಿಸಲಾಯಿತು
  • ಪೋಗ್‌‌, J. E. (1915). ದಿ ಟರ್ಕ್ವಾಸ್‌: ಎ ಸ್ಟಡಿ ಆಫ್‌ ಇಟ್ಸ್‌ ಹಿಸ್ಟರಿ, ಮಿನರಾಲಜಿ, ಜಿಯಾಲಜಿ, ಎತ್ನಾಲಜಿ, ಆರ್ಕಿಯಾಲಜಿ, ಮೈಥಾಲಜಿ, ಫೋಕ್‌ಲೋರ್‌, ಅಂಡ್‌ ಟೆಕ್ನಾಲಜಿ . ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌, ದಿ ರಯೋ ಗ್ರಾಂಡೆ ಪ್ರೆಸ್‌, ಗ್ಲೋರಿಯೇಟಾ, ನ್ಯೂ ಮೆಕ್ಸಿಕೋ. ISBN 0-87380-056-7
  • ಸ್ಖಾಡ್ಟ್‌, H. (1996). ಗೋಲ್ಡ್‌‌ಸ್ಮಿತ್‌'ಸ್‌ ಆರ್ಟ್‌: 5000 ಇಯರ್ಸ್‌ ಆಫ್‌ ಜ್ಯುವೆಲ್ರಿ ಅಂಡ್‌ ಹಾಲೋವೇರ್‌ . ಅರ್ನಾಲ್ಡ್‌ಸ್ಕೆ ಆರ್ಟ್‌ ಪಬ್ಲಿಷರ್‌, ಸ್ಟಟ್‌ಗಾರ್ಟ್‌, ನ್ಯೂಯಾರ್ಕ್‌. ISBN 3-925369-54-6
  • ಸ್ಕುಮನ್‌, W. (2000). ಜೆಮ್‌ಸ್ಟೋನ್ಸ್‌ ಆಫ್‌ ದಿ ವರ್ಲ್ಡ್‌ , ಪರಿಷ್ಕೃತ ಆವೃತ್ತಿ. ಸ್ಟರ್ಲಿಂಗ್‌ ಪಬ್ಲಿಷಿಂಗ್‌. ISBN 0-8069-9461-4
  • USGS (2002). ಟರ್ಕ್ವಾಸ್‌ . ಆನ್‌ ಓವರ್‌ವ್ಯೂ ಆಫ್‌ ಪ್ರೊಡಕ್ಷನ್‌ ಆಫ್‌ ಸ್ಪೆಸಿಫಿಕ್‌ U.S. ಜೆಮ್‌ಸ್ಟೋನ್ಸ್‌ . U.S. ಗಣಿಗಳ ಇಲಾಖೆಯ ವಿಶೇಷ ಪ್ರಕಟಣೆ 14-19. http://minerals.usgs.gov/minerals/pubs/commodity/gemstones/sp14-95/turquoise.htmlನಿಂದ 2004ರ ನವೆಂಬರ್‌ 15ರಂದು ಮರುಸಂಪಾದಿಸಲಾಯಿತು
  • ವೆಬ್‌ಸ್ಟರ್‌, R. (2000). ಜೆಮ್ಸ್‌: ದೆರ್‌ ಸೋರ್ಸಸ್‌, ಡಿಸ್ಕ್ರಿಪ್ಷನ್ಸ್‌ ಅಂಡ್‌ ಐಡೆಂಟಿಫಿಕೇಷನ್‌ (5ನೇ ಆವೃತ್ತಿ), ಪುಟಗಳು 254–263. ಬಟರ್‌ವರ್ತ್‌-ಹೀನೆಮನ್‌, ಗ್ರೇಟ್‌ ಬ್ರಿಟನ್‌. ISBN 0-7506-1674-1
"https://kn.wikipedia.org/w/index.php?title=ವೈಡೂರ್ಯ&oldid=1062117" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy