ವಿಷಯಕ್ಕೆ ಹೋಗು

ಫಿನೇಸ್ ಪಿ. ಗೇಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆದುಳಿನ-ಗಾಯದಿಂದ ಬದುಕುಳಿದ ಫಿನೇಸ್ ಪಿ. ಗೇಜ್ (1823-1860) ಅವರ ಛಾಯಾಚಿತ್ರವು- ಸ್ಫೋಟ ಮಾಡುವ- ಟ್ಯಾಂಪಿಂಗ್ ಕಬ್ಬಿಣದ ರಾಡನ್ನು ಹಿಡಿದುಕೊಂಡಿರುವ ಅದು ಅವನನ್ನು ಗಾಯಗೊಳಿಸಿತು. ಈ ಕಲಾಕೃತಿಯಲ್ಲಿ ಕಂಡುಬರುವ ಚಿತ್ರವು ಪಾರ್ಶ್ವವಾಗಿ (ಎಡ-ಬಲ) ವ್ಯತಿರಿಕ್ತವಾಗಿದೆ; ಆದ್ದರಿಂದ ಈ ಚಿತ್ರವನ್ನು ತಯಾರಿಸಲು ಎರಡನೆಯ, ಸರಿದೂಗಿಸುವ ಹಿಮ್ಮುಖವನ್ನು ಅನ್ವಯಿಸಲಾಗಿದೆ,
ತೂತು ಬಿದ್ದ ಬುರುಡೆಯ ನೋಟ

ಫಿನೇಸ್ ಪಿ. ಗೇಜ್ (1823–1860) ಒಬ್ಬ ಅಮೇರಿಕನ್ ರೈಲು ರಸ್ತೆ ನಿರ್ಮಾಣದ ಫೋರ್‌ಮ್ಯಾನ್ ಆಗಿದ್ದ. ಸಂಭವಿಸಲು ಅಸಾದ್ಯವೆನ್ನುವಂತಿರುವ- ಸಂದರ್ಭದಲ್ಲಿ ಅಪಘಾತದಲ್ಲಿ ಹಾರೆಯಂತಿರುವ ಒಂದು ದಪ್ಪ ಕಬ್ಬಿಣದ ಸರಳು ಬಂಡೆಯನ್ನು ಕೊರೆದು ಸ್ಪೋಟಿಸುವಾಗ ಸಮಯಕ್ಕೆ ಮೊದಲೇ ಸಿಡಿಮದ್ದಿನಿಂದ ಸಿಡಿದು, ಅದಕ್ಕೆ ಉಪಯೋಗಿಸಿದ ಕಬ್ಬಿಣದ ಹಾರೆ ಸಂಪೂರ್ಣವಾಗಿ ಅವನ ಎಡ ದವಡೆಯಿಂದ ತಲೆಯ ಮೂಲಕ ತೂರಿ ಹಾರಿಹೋಯಿತು. ಅವನ ಮೆದುಳಿನ ಎಡ ಮುಂಭಾಗದ ಹಾಲೆ- ಮೆದುಳಿನ ಸಣ್ಣ ಮುದ್ದೆ ಅದರ ಜೊತೆ ಹಾರಿ ನಾಶವಾಯಿತು, ತಲೆಯ, ದವಡೆಯ ಎಲುಬು ಕೆಲವು ಭಾಗ ಪುಡಿಯಾಯಿತು. ಬದುಕಿ ಉಳಿದ ಅವನ ಜೀವನದ ಉಳಿದ ವರ್ಷಗಳಲ್ಲಿ ಅವನ ಸಹಜ ವ್ಯಕ್ತಿತ್ವ ಮತ್ತು ನಡವಳಿಕೆಯ ಮೇಲೆ ಆ ಗಾಯದ ಪರಿಣಾಮಗಳು ಅಲ್ಪವಾಗಿದ್ದವು; ಸ್ನೇಹಿತರು ಅವನನ್ನು "ಇನ್ನು ಮುಂದೆ ಇವನು ಗೇಜ್" ಅಲ್ಲ” ಎಂಬ ಆಳವಾದ ಭಾವನೆಯಿಂದ ನೋಡಿದ್ದು (ಒಂದು ಸಮಯದವರೆಗೆ) ಅವನ ಮೇಲೆ ಪರಿಣಾಮ ಬೀರಿತ್ತು.

ಅಮೇರಿಕನ್ ಕ್ರೌಬಾರ್ ಕೇಸ್

[ಬದಲಾಯಿಸಿ]
  • ಇದು "ಅಮೇರಿಕನ್ ಕ್ರೌಬಾರ್ ಕೇಸ್" ಎಂದು ದೀರ್ಘಕಾಲದಿಂದ ಕರೆಯಲ್ಪಡುವ " ಜನರ ಆಶ್ಚರ್ಯವನ್ನು ಪ್ರಚೋದಿಸಿದ, ನಮ್ಮ ಅರಿವಿನ ಮೌಲ್ಯವನ್ನು ದುರ್ಬಲಗೊಳಿಸಿದ ಮತ್ತು ನಮ್ಮ ಶಾರೀರಿಕ ಸಿದ್ಧಾಂತಗಳನ್ನು ಬುಡಮೇಲು ಮಾಡಿದ ಘಟನೆ ಎಂದು ತಿಳಿಯಲಾಗಿದೆ. ಫಿನೇಸ್ ಗೇಜ್ ನ ಘಟನೆಯು ಮನಸ್ಸು ಮತ್ತು ಮೆದುಳಿನ ಬಗ್ಗೆ 19 ನೇ ಶತಮಾನದ ಚರ್ಚೆಯನ್ನು ಪ್ರಭಾವಿತಗೊಳಿಸಿದೆ. ವಿಶೇಷವಾಗಿ ಸೆರೆಬ್ರಲ್ ಸ್ಥಳೀಕರಣದ ಚರ್ಚೆ, ಮತ್ತು ವ್ಯಕ್ತಿತ್ವವನ್ನು ನಿರ್ಧರಿಸುವಲ್ಲಿ ಮೆದುಳಿನ ಪಾತ್ರವನ್ನು ಸೂಚಿಸುವ ಮೊದಲ ಪ್ರಕರಣ ಮತ್ತು ನಿರ್ದಿಷ್ಟ ಭಾಗಗಳಿಗೆ ಹಾನಿ ಮೆದುಳು ನಿರ್ದಿಷ್ಟ ಮಾನಸಿಕ ಬದಲಾವಣೆಗಳನ್ನು ಉಂಟುಮಾಡಬಹುದು ಎಂಬ ಚರ್ಚೆಯನ್ನು ಪ್ರಭಾವಿತಗೊಳಿಸಿತು.
  • ಗೇಜ್, ಮನೋವಿಜ್ಞಾನ ಮತ್ತು ನರವಿಜ್ಞಾನದ ಪಠ್ಯಕ್ರಮದ ಒಂದು ಸವಾಲು ಆಗಿದ್ದಾನೆ" ಸಾರ್ವಕಾಲಿಕ ಶ್ರೇಷ್ಠ ವೈದ್ಯಕೀಯ ಕುತೂಹಲಗಳಲ್ಲಿ" ಮತ್ತು ಅವನು "ವೈದ್ಯಕೀಯ ಜಾನಪದದ ಜೀವಂತ ಭಾಗ ಆಗಾಗ್ಗೆ ಪುಸ್ತಕಗಳು ಮತ್ತು ವೈಜ್ಞಾನಿಕ ಪತ್ರಿಕೆಗಳಲ್ಲಿ ಉಲ್ಲೇಖಿಸಲಾಗಿದೆ ಅವರು ಜನಪ್ರಿಯ ಸಂಸ್ಕೃತಿಯಲ್ಲಿ “ಕಪ್ಪುಗುರುತು” ಸ್ಥಾನವನ್ನು ಸಹ ಹೊಂದಿದ್ದಾರೆ.
  • ಗೇಜ್ ಅವನ ಸಾವಿಗೆ ಸ್ವಲ್ಪ ಸಮಯದ ಮೊದಲು ಅವನ ದೈಹಿಕ ಮತ್ತು ಮಾನಸಿಕ ಸ್ಥಿತಿಯ ವರದಿಯು ಅವನ ಅತ್ಯಂತ ಗಂಭೀರವಾದ ಮಾನಸಿಕ ಬದಲಾವಣೆಗಳು ತಾತ್ಕಾಲಿಕವೆಂದು ಸೂಚಿಸುತ್ತದೆ, ಆದ್ದರಿಂದ ನಂತರದ ಜೀವನದಲ್ಲಿ ಅವನು ಹೆಚ್ಚು ಕ್ರಿಯಾತ್ಮಕ ಮತ್ತು ಸಾಮಾಜಿಕವಾಗಿ ಉತ್ತಮವಾಗಿ ಹೊಂದಿಕೊಂಡನು, ಅವರ ಅಪಘಾತದ ನಂತರದ ವರ್ಷಗಳಲ್ಲಿ. ಸಾಮಾಜಿಕ ಚೇತರಿಕೆಯಿಂದ ಚಿಲಿಯ ಸ್ಟೇಜ್‌ಕೋಚ್ ಚಾಲಕನಾಗಿ ಅವನು ಮಾಡಿದ ಕೆಲಸವು ಈ ಚೇತರಿಕೆಗೆ ಉತ್ತೇಜನ ನೀಡಿತು, ಅದು ಕಳೆದುಹೋದ ಸಾಮಾಜಿಕ ಮತ್ತು ವೈಯಕ್ತಿಕ ಕೌಶಲ್ಯಗಳನ್ನು ಮರಳಿ ಪಡೆಯಲು ಅವಕಾಶ ಮಾಡಿಕೊಟ್ಟಿತು.[][]

ಜೀವನ - ಹಿನ್ನೆಲೆ

[ಬದಲಾಯಿಸಿ]
ಬಂಡೆಯಲ್ಲಿ ನೇರವಾಗಿ ಕೆಳಗೆ ಇಳಿದಿರುವ ಸ್ಪೋಟಕರಂದ್ರ ಮತ್ತು ಸ್ಪೋಟಕಹಾರೆ; ಬಗ್ಗಿರುವುದು ಸ್ಪೋಟಕಬತ್ತಿ?/
  • ಗೇಜ್‍ನ ಆರಂಭಿಕ ಜೀವನದ ಬಗ್ಗೆ ಸ್ವಲ್ಪವೇ ತಿಳಿದಿದೆ, ಅವನು ರೈತರ ಕುಟುಂಬದಲ್ಲಿ ಜನಿಸಿದನು ಮತ್ತು ನ್ಯೂ ಹ್ಯಾಂಪ್ಶೈರ್ನಲ್ಲಿನ ರೈತ ಕುಟುಂಬದಲ್ಲಿ ಬೆಳೆದನು. ಕೆಲವು ಸಮಯ ಅವನು ರೈಲ್ವೆ ನಿರ್ಮಾಣದ ಕೆಲಸವನ್ನು ಕೈಗೆತ್ತಿಕೊಂಡನು ಮತ್ತು ರಟ್ಲ್ಯಾಂಡ್ ಮತ್ತು ಬರ್ಲಿಂಗ್ಟನ್ ರೈಲ್ರೋಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆದಾರರ ಬಳಿ ಉದ್ಯೋಗಕ್ಕೆ ಬಂದನು. ಗೇಜ್‌ನ ಕರ್ತವ್ಯಗಳಲ್ಲಿ ನೆಲವನ್ನು ನೆಲಸಮಗೊಳಿಸಲು ಬಂಡೆಗಳನ್ನು ತೆರವುಗೊಳಿಸುವುದು. ರಂಧ್ರವನ್ನು ಕೊರೆಯುವ ಮೂಲಕ ಸ್ಫೋಟಕ ಚಾರ್ಜ್‍ಅನ್ನು ಬಂಡೆಯ ಆಳಕ್ಕೆ ಇಡುವುದು, ಈ ಕಾರ್ಯದಲ್ಲಿ ಸೇರಿದೆ. ನಂತರ ರಂಧ್ರವನ್ನು ಗನ್‌ಪೌಡರ್‌ನಿಂದ ತುಂಬಿಸಲಾಗುತ್ತಿತ್ತು, ಮತ್ತು ಫ್ಯೂಸ್ ಅನ್ನು ಹೊಂದಿಸಲಾಗುತ್ತಿತ್ತು. ಸಂಪರ್ಕವನ್ನು ತಡೆಯಲು ಸ್ಫೋಟಕ ವಸ್ತುಗಳ ಮೇಲೆ ಮರಳನ್ನು ಸೇರಿಸಲಾಗುತ್ತಿತ್ತು. ನಂತರ ಟ್ಯಾಂಪಿಂಗ್ ರಾಡ್‍ಅನ್ನು (ಹಾರೆಯನ್ನು) ಸ್ಫೋಟಕಗಳನ್ನು ಬಂಡೆಗೆ ಪ್ಯಾಕ್ ಮಾಡಲು ಬಳಸಲಾಗುತ್ತಿತ್ತು.
  • ಸೆಪ್ಟೆಂಬರ್ 13, 1848 ರ ಮಧ್ಯಾಹ್ನ, ವರ್ಮೊಂಟ್ನ ಕ್ಯಾವೆಂಡಿಶ್ ಬಳಿ, ಗೇಜ್ ಮರಳನ್ನು ಸೇರಿಸದೆ ಸ್ಪೋಟಕ ಪುಡಿಯನ್ನು ಕೊರೆದ ರಂದ್ರದ ಒಳಗೆ ಕೆಳಕ್ಕೆ ಇಳಿಸಿದನು. 3.58 ಅಡಿ (ಸುಮಾರು 1 ಮೀಟರ್) ಉದ್ದ ಮತ್ತು 1.25 ಇಂಚುಗಳಷ್ಟು ದಪ್ಪ (ಸುಮಾರು 3.2 ಸೆಂ.ಮೀ. ವ್ಯಾಸವನ್ನು) ಅಳೆತೆಯ, ಮೇಲು ಭಾಗ ಸ್ವಲ್ಪ ೩ ಇಂಚಿನ ಚೂಪು ಹೊಂದಿತ್ತು. ಅವನ ಟ್ಯಾಂಪಿಂಗ್ ರಾಡ್‍ ಅಕಸ್ಮಾತ್ ರಂದ್ರದಲ್ಲಿ ಇಳಿದಾಗ ಅದು ಬಂಡೆಯ ಬದಿಗೆ ಹೊಡೆದಾಗ/ತಾಗಿದಾಗ ಕಿಡಿ ಎದ್ದು, ಅದು ಬಂಡೆಯ ರಂದ್ರದ ಬುಡದಲ್ಲಿದ್ದ ಗನ್‌ಪೌಡರ್ ಅನ್ನು ಹೊತ್ತಿಸಿತು. ರಾಡ್‍ನ (ಹಾರೆಕೋಲಿನ) ಮೇಲಿನ ಚೂಪು ಭಾಗ ದವಡೆಯಲ್ಲಿ ಹೊಕ್ಕು ಸಂಪೂರ್ಣವಾಗಿ ಗೇಜ್‌ನ ತಲೆಯ ಮೂಲಕ ಹಾದು ಹೋಗಿ, ಹಾರಿ ಅವನ ಹಿಂದೆ ಸುಮಾರು 82 ಅಡಿ (25 ಮೀಟರ್) ದೂರದಲ್ಲಿ ಬಿತ್ತು. 13.25-ಪೌಂಡ್ (6-ಕೆಜಿ) ತೂಕದ 1.25 ಇಂಚು ಗೇಜ್‍ನ- ದಪ್ಪದ, ರಾಡ್ ಅವನ ತಲೆಯ ಎಡ ಕೆನ್ನೆಯ ಮೂಳೆಯ ಕೆಳಗೆ ಪ್ರವೇಶಿಸಿ ಅವನ ತಲೆಬುರುಡೆಯ ಮೇಲ್ಭಾಗದಿಂದ ನಿರ್ಗಮಿಸಿ 82 ಅಡಿ ದೂರ ಹಾರಿ ಬಿದ್ದಿತ್ತು[]

ಅಪಘಾತದ ಆ ತಕ್ಷಣ- ಗೇಜ್

[ಬದಲಾಯಿಸಿ]
ಕಬ್ಬಿಣದ ಟ್ಯಾಂಪಿಂಗ್- ತೆಗೆದುಕೊಂಡ ಹಾದಿ "ಅನಿಶ್ಚಿತತೆಯ ಕೋನ್". ಸ್ಫೋಟದ ಕ್ಷಣದಲ್ಲಿ ಗೇಜ್‌ನ ಬಾಯಿ ತೆರೆದಿತ್ತು, ಮತ್ತು ಅವನ ತಲೆಬುರುಡೆಯ ಮುಂಭಾಗ ಮತ್ತು ಹಿಂಭಾಗವು ಕಬ್ಬಿಣವನ್ನು ಕೆಳಗಿನಿಂದ ಪ್ರವೇಶಿಸುತ್ತಿದ್ದಂತೆ ತಾತ್ಕಾಲಿಕವಾಗಿ "ಹಿಂಜ್" ಮಾಡಿತು- ಸರಿಯುವಂತೆ ಮಾಡಿತು;, ನಂತರ ಕಬ್ಬಿಣವು ಗೇಜ್‍ನ ತಲೆಯ ಮೇಲ್ಭಾಗದಿಂದ ನಿರ್ಗಮಿಸಿದ ನಂತರ ಮೃದು ಅಂಗಾಂಶಗಳ ಸ್ಥಿತಿಸ್ಥಾಪಕತ್ವದಿಂದ ಒಟ್ಟಿಗೆ ಸೇರುವಂತೆ ಎಳೆಯಲ್ಪಟ್ಟಿತು. []
  • ಆ ಕ್ಷಣದಲ್ಲಿ ಟ್ಯಾಂಪಿಂಗ್ ಕಬ್ಬಿಣದ ರಾಡು-(ಹಾರೆ ಅಥವಾ ಸರಳು) 80 ಅಡಿ (25 ಮೀ) ದೂರದಲ್ಲಿ ಬಿದ್ದಿತು, " ಅದು ರಕ್ತ ಮತ್ತು ಮೆದುಳಿನಿಂದ ಮತ್ತಿಕೊಂಡಿತ್ತು". ಕಬ್ಬಿಣದ ಸರಳು ತಲೆಯಿಂದ ಚಿಮ್ಮಿ ಹೋದ ನಂತರ ಗೇಜ್ ಅಂಗಾತ ಬೆನ್ನಿನ ಮೇಲೆ ಮಲಗಿದಂತೆ ಎಸೆಯಲ್ಪಟ್ಟಿದ್ದನು. ಅವನು, ತೋಳುಗಳ ಮತ್ತು ಕಾಲುಗಳ ಅಲ್ಪಕಾಲದ ಸಾಧಾರಣ ಸೆಳೆತಕ್ಕೆ ಒಳಗಾದನು. ಆದರೆ ಕೆಲವೇ ನಿಮಿಷಗಳಲ್ಲಿ ಮಾತನಾಡಿದನು. ಸ್ವಲ್ಪ ಸಹಾಯದಿಂದ ನೆಡೆದನು ಮತ್ತು ತನ್ನ ವಸತಿಗೃಹಕ್ಕೆ ಪ್ರಯಾಣಿಸಲು ಎತ್ತಿನ ಗಾಡಿಯಲ್ಲಿ (ಆಕ್ಸ್‌ಕಾರ್ಟ್‌ನಲ್ಲಿ) 3⁄4-ಮೈಲಿ (1.2 ಕಿಮೀ) ನೇರವಾಗಿ ಕುಳಿತುಕೊಂಡನು.
  • ವೈದ್ಯ ಎಡ್ವರ್ಡ್ ಎಚ್. ವಿಲಿಯಮ್ಸ್, ಅಲ್ಲಿಗೆ ಬಂದು ವಾಹನದಲ್ಲಿದ್ದು ಮಾತನಾಡಿಸಿದಾಗ: ವೈದ್ಯರ ಹೇಳಿಕೆ:
“ನಾನು ಬಂದಾಗ ಅವನು, "ಡಾಕ್ಟರ್, ಇಲ್ಲಿ ನಿಮಗೆ ಸಾಕಷ್ಟು ಕೆಲಸವಿದೆ" ಎಂದು ಹೇಳಿದನು. ನಾನು ನನ್ನ ಗಾಡಿಯಿಂದ ಕೆಳಗಿಳಿಯುವ ಮೊದಲು ತಲೆಯ ಮೇಲಿನ ಗಾಯವನ್ನು ನಾನು ಮೊದಲು ಗಮನಿಸಿದೆ, ಮೆದುಳಿನ ಬಡಿತಗಳು ತುಂಬಾ ವಿಭಿನ್ನವಾಗಿದ್ದವು. ತಲೆಯ ಮೇಲ್ಭಾಗವು ಸ್ವಲ್ಪಮಟ್ಟಿಗೆ ತಲೆಕೆಳಗಾದ ಕೊಳವೆಯಂತೆ (ತೂತದಂತೆ) ಕಾಣಿಸಿತು. ಕೆಲವು ಬೆಣೆ ಆಕಾರದ ವಸ್ತುವು ಕೆಳಗಿನಿಂದ ಮೇಲಕ್ಕೆ ಹಾದುಹೋದಂತೆ ಇತ್ತು . ನಾನು ಈ ಗಾಯವನ್ನು ಪರೀಕ್ಷಿಸುವ ಸಮಯದಲ್ಲಿ, ಅವನು (“ಶ್ರೀ ಗೇಜ್”) ನೋಡುಗರಿಗೆ ಗಾಯಗೊಂಡ ವಿಧಾನವನ್ನು ವಿವರಿಸುತ್ತಿದ್ದನು. ಆ ಸಮಯದಲ್ಲಿ “ಶ್ರೀ ಗೇಜ್ಅವರ ಹೇಳಿಕೆಯನ್ನು ನಾನು ನಂಬಲಿಲ್ಲ. ಆದರೆ ಅವನು ಮೋಸ ಹೋಗಿದ್ದಾನೆಂದು ಭಾವಿಸಿದೆ. ಆದರೆ ಮಿಸ್ಟರ್ ಗೇಜ್, ಜನರಿಗೆ ಬಾರ್/ ಕಬ್ಬಿಣದ ಸರಳು ತನ್ನ ತಲೆಯ ಮೂಲಕ ಹೋಯಿತು ಎಂದು ಹೇಳುವ ವಿಚಾರದಲ್ಲಿ ಮುಂದುವರೆದನು. ಶ್ರೀ ಗೇಜ್. ಎದ್ದು ವಾಂತಿ ಮಾಡಿದನು; ವಾಂತಿಯ ಪ್ರಯತ್ನದಲ್ಲಿ ಅರ್ಧ ಚಹಾಕಪ್ಪಿನಷ್ಟು ಮೆದುಳಿನ ಭಾಗ, ತಲೆಬುರುಡೆಯ ಮೇಲ್ಭಾಗದಲ್ಲಿರುವ ನಿರ್ಗಮನ ರಂಧ್ರದ ಮೂಲಕ ಒತ್ತಿಕೊಂಡು ಹೊರಬಂದು- ಅದು ನೆಲದ ಮೇಲೆ ಬಿದ್ದಿತು.
  • ಸಂಜೆ 6 ಗಂಟೆ ಸುಮಾರಿಗೆ ಡಾ. ಹಾರ್ಲೋ ಈ ಪ್ರಕರಣದ ಉಸ್ತುವಾರಿ ವಹಿಸಿಕೊಂಡರು .
  • ಇಲ್ಲಿ ಮರುಪ್ರಸ್ತಾಪ ಮಾಡುವುದನ್ನು ನೀವು ನನ್ನನ್ನು ಕ್ಷಮಿಸುತ್ತೀರಿ ಎಂದು ಭಾವಿಸುತ್ತೇನೆ. ಪ್ರಸ್ತುತಪಡಿಸಿದ ಚಿತ್ರವು/ಪರಿಸ್ಥಿತಿ ಮಿಲಿಟರಿ ಶಸ್ತ್ರಚಿಕಿತ್ಸೆಗೆ ತಕ್ಕುದಾಗಿದೆ, ನಿಜವಾಗಿಯೂ ಭಯಂಕರವಾಗಿದೆ; ಆದರೆ ರೋಗಿಯು ತನ್ನ ಕಷ್ಟಗಳನ್ನು ಅತ್ಯಂತ ವೀರೋಚಿತ ದೃಡತೆಯಿಂದ ಸಹಿಸಿಕೊಂಡನು. ಅವನು ನನ್ನನ್ನು ಒಮ್ಮೆಗೇ ಗುರುತಿಸಿದನು, ಮತ್ತು ಅವನು ಹೆಚ್ಚು ನೋಯವುದಿಲ್ಲ ಎಂದು ಭಾವಿಸಿದನು. ಅವನು ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದನು, ಆದರೆ ರಕ್ತಸ್ರಾವದಿಂದ ದಣಿದಿದ್ದನು. ಆ ವ್ಯಕ್ತಿ, ಮತ್ತು ಅವನನ್ನು ಹಾಕಿದ ಹಾಸಿಗೆ ಅಕ್ಷರಶಃ ಒಂದು ರಕ್ತದ ಮಡುವು ಆಗಿತ್ತು. []

ಚಿಕಿತ್ಸೆ ಮತ್ತು ಚೇತರಿಕೆ

[ಬದಲಾಯಿಸಿ]
ಒಂದು- ನೈಟ್‌ಕ್ಯಾಪ್- ಟೋಪಿಯನ್ನು ಬ್ಯಾಂಡೇಜ್ ಆಗಿ ಬಳಸಲಾಯಿತು
  • ವಿಲಿಯಮ್ಸ್‍ನ ಸಹಾಯದಿಂದ ಡಾ.ಹಾರ್ಲೋ ಟ್ಯಾಂಪಿಂಗ್ ಕಬ್ಬಿಣದ ನಿರ್ಗಮನದ ಪ್ರದೇಶದ ನೆತ್ತಿಯನ್ನು ಕತ್ತರಿಸಿದನು, ನಂತರ ಹೆಪ್ಪುಗಟ್ಟಿದ ರಕ್ತ, ಸಣ್ಣ ಮೂಳೆ ತುಣುಕುಗಳು ಮತ್ತು ಚಾಚಿಕೊಂಡಿರುವ ಮೆದುಳಿನ "ಔನ್ಸ್ ಅಥವಾ ಹೆಚ್ಚಿನ" ಮೆದುಳು- ಮಜ್ಜೆಗಳನ್ನು ತೆಗೆದುಹಾಕಿದನು. ದೇಹಕ್ಕೆ ಸೇರದ ವಿದೇಶಿ ವಸ್ತುಗಳನ್ನು ಪರೀಕ್ಷಿಸಿದ ನಂತರ ಮತ್ತು ಬೇರ್ಪಟ್ಟ ಎರಡು ದೊಡ್ಡ ಮೂಳೆಗಳನ್ನು ಬದಲಿಸಿದ ನಂತರ, ಹಾರ್ಲೋ ಗಾಯವನ್ನು ಅಂಟಿಕೊಳ್ಳುವ ಪಟ್ಟಿಗಳಿಂದ ಮುಚ್ಚಿ, ಅದನ್ನು ಭಾಗಶಃ ಸೋರುವಿಕೆಗೆ ತೆರೆದಿಟ್ಟನು; ಅದೇ ಕಾರಣಕ್ಕಾಗಿ ಕೆನ್ನೆಯ ಪ್ರವೇಶ ಗಾಯವನ್ನು ಸಡಿಲವಾಗಿ ಬ್ಯಾಂಡೇಜ್ ಮಾಡಲಾಯಿತು. ಆರ್ದ್ರವಾದ- (ಒದ್ದೆ) ಒತ್ತುವ್ಯವಸ್ಥೆ ಇಡಲಾಯಿತು, ನಂತರ ನೈಟ್‌ಕ್ಯಾಪ್‍ ಹಾಕಿದನು; ನಂತರ ಈ ಡ್ರೆಸ್ಸಿಂಗ್‌ಗಳನ್ನು ಸುರಕ್ಷಿತವಾಗಿರಿಸಲು ಬ್ಯಾಂಡೇಜಿಂಗ್ಮಾಡಿದನು. ಹಾರ್ಲೋ ಗೇಜ್‌ನ ಕೈಗವಸು ಮತ್ತು ಮುಂದೋಳುಗಳನ್ನು ಸಹ ಧರಿಸಿದ್ದನು. (ಗಾಯ ಅವನ ಮುಖದ ಜೊತೆಗೆ "ಆಳವಾಗಿ ಸುಟ್ಟುಹೋಗಿತ್ತು") ಮತ್ತು ಗೇಜ್‌ನ ತಲೆಯನ್ನು ಎತ್ತರಕ್ಕೆ ಇಡುವಂತೆ ಆದೇಶಿಸಿದನು.
  • ಆ ಸಂಜೆಯನಂತರ ಹಾರ್ಲೋ ಗಮನಿಸಿದಂತೆ: ಗೇಜ್‍ನ "ಮನಸ್ಸು ಸ್ಪಷ್ಟವಾಗಿದೆ, ಅವನ ಕಾಲುಗಳನ್ನು ನಿರಂತರ ಆಂದೋಲನಮಾಡುತ್ತಿರಿವುದು, ಪರ್ಯಾಯವಾಗಿ ಹಿಂತೆಗೆದುಕೊಳ್ಳುವುದು ಮತ್ತು ವಿಸ್ತರಿಸುವುದು ... ಅವನು 'ತನ್ನ ಸ್ನೇಹಿತರನ್ನು ನೋಡಲು ಹೆದರುವುದಿಲ್ಲ, ಏಕೆಂದರೆ ಅವನು ಕೆಲವೇ ದಿನಗಳಲ್ಲಿ ಕೆಲಸದಲ್ಲಿರುತ್ತಾನೆ." (ಎಂದು ತೀರ್ಮಾನಿಸಿದನು)
  • ಅಪಘಾತದ 12 ದಿನಗಳ ನಂತರ, ಗೇಜ್ ಅರೆ-ಕೋಮಾಟೋಸ್ ಆಗಿದ್ದರು, "ಮಾತನಾಡದೆ ಇದ್ನು, ಕರೆದಾಗ ವಿರಳವಾಗಿ ಮಾತನಾಡುತ್ತಾನೆ, ಮತ್ತು ನಂತರ ಒಂದೆರಡು ಅಕ್ಷರಗಳಲ್ಲಿ (ಮೊನೊಸೈಲೆಬಲ್ಗಳಲ್ಲಿ) ಮಾತ್ರ ಉತ್ತರಿಸುತ್ತಾನೆ", ಮತ್ತು 13 ನೇ ದಿನ ಹಾರ್ಲೋ ಗಮನಿಸಿದಂತೆ, "ಶಕ್ತಿ ಕುಂದಿದೆ ... ಕೋಮಾ ಗಾಢವಾಯಿತು; ["ಶಿಲೀಂಧ್ರ" ಸೋಂಕಿನಿಂದ ಹದಗೆಟ್ಟ, ಅಂಗಾಂಶಗಳೊಂದಿಗೆ ಆಂತರಿಕ ಎಡಕಣ್ಣಿನಿಂದ ಮತ್ತು ಹಾಗೆಯೇ ಗಾಯಗೊಂಡ ಮೆದುಳಿನಿಂದ ವೇಗವಾಗಿ ಸೋಂಕಿತ ವಸ್ತು-ಕೀವು ಹೊರಕ್ಕೆ ತಳ್ಳಿಕೊಂಡು ತಲೆಯ ಮೇಲ್ಭಾಗದಲ್ಲಿ ಹೊರಬರುತ್ತಿತ್ತು. " 14 ನೇ ದಿನದ ಹೊತ್ತಿಗೆ, "ಬಾಯಿ ಮತ್ತು ತಲೆಯಿಂದ ಸೋಂಕಿತ ವಸ್ತು ಹೊರಹೋಗುವಿಕೆಯು ಭಯಂಕರವಾಗಿದೆ. ಅರೆಪ್ರಜ್ಞೆಯ ಸ್ಥಿತಿ (ಕೋಮಾಟೋಸ್,) ಆದರೆ ಪ್ರಚೋದಿಸಿದರೆ ಒಂದೆರಡು ಅಕ್ಷರದಲ್ಲಿ ಉತ್ತರುತ್ತಿದ್ದ,(ಮೊನೊಸೈಲೆಬಲ್ಗಳಲ್ಲಿ) ಉತ್ತರಿಸುತ್ತಿದ್ದ. ಬಲವಾಗಿ ಒತ್ತಾಯಿಸದ ಹೊರತು ಆಹಅರವನ್ನು ತೆಗೆದುಕೊಳ್ಳುವುದಿಲ್ಲ. ಸ್ನೇಹಿತರು ಮತ್ತು ಪರಿಚಾರಕರು ಅವನ ಸಾವಿನ ಗಂಟೆಯ ನಿರೀಕ್ಷೆಯಲ್ಲಿದ್ದಾರೆ, ಮತ್ತು ಅವನ ಶವಪೆಟ್ಟಿಗೆಯನ್ನು ಮತ್ತು ಬಟ್ಟೆಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಂಡಿದ್ದರು."
  • ಚಿಕಿತ್ಸೆಯ ಕ್ರಿಯೆಗೆ ನಡುಗಿ ಪ್ರತಿಕ್ರರಿಯಿಸುತ್ತಿದ್ದ; ಡಾ.ಹಾರ್ಲೋ "ಮೆದುಳಿನ ಮೇಲ್ಭಾಗದಿಂದ ಮೊಳಕೆಯೊಡೆಯುತ್ತಿದ್ದ ಶಿಲೀಂಧ್ರಗಳನ್ನು ಕತ್ತರಿಸಿ, ತೆರೆಯುವಿಕೆಯನ್ನು ತುಂಬಿಸಿ, ಮತ್ತು ಕಾಸ್ಟಿಕ್‍ಅನ್ನು ಗಾಯಕ್ಕೆ ಸಾಕಷ್ಟು ಅನ್ವಯಿಸಿದನು ಮತ್ತು ತಕ್ಷಣವೇ ಎಂಟು ಔನ್ಸ್ [250 ಮಿಲಿ] ಅನಾರೋಗ್ಯದ ಕೀವು ರಕ್ತದೊಂದಿಗೆ ಹೊರಹಾಕಲ್ಪಟ್ಟಿತ್ತು; ಅದು ವಿಪರೀತ ಕೆಟ್ಟ ವಾಸನೆಹೊಂದಿತ್ತು.
ಚಿಕಿತ್ಸೆಯ ನಂತರ- ವಿರೂಪಗೊಂಡಿದ್ದರೂ ಇನ್ನೂ ಸಹ ಸುಂದರವಾಗಿದ್ದಾನೆ ". ಟಿಪ್ಪಣಿ: ಎಡಗಣ್ಣಿನ ರೆಪ್ಪೆದುರ್ಬಲವಾಗಿದೆ ಮತ್ತು ಹಣೆಯ ಮೇಲಿನ ಗಾಯದ ಗುರುತು ಇದೆ.
  • "ಗೇಜ್ ಅವರು ಡಾ. ಹಾರ್ಲೋ ಅವರನ್ನು ಚಿಕಿತ್ಸೆಗೆ ಪಡೆವಾಗ ಅದೃಷ್ಟಶಾಲಿಯಾಗಿದ್ದರು" "ಎಂದು ಬಾರ್ಕರ್ ಬರೆಯುತ್ತಾರೆ." 1848 ರಲ್ಲಿ ಕೆಲವೇ ಕೆಲವು ವೈದ್ಯರು ಸೆರೆಬ್ರಲ್ ಬಾವುಗಳ ಅನುಭವವನ್ನು ಹೊಂದಿದ್ದರು, ಇದರೊಂದಿಗೆ ಹಾರ್ಲೋ [ಜೆಫರ್ಸನ್ ಮೆಡಿಕಲ್ ಕಾಲೇಜ್] ಅನ್ನು ತೊರೆದರು ಮತ್ತು ಇದು ಬಹುಶಃ ಗೇಜ್‌ನ ಜೀವವನ್ನು ಉಳಿಸಿತು.
  • 24 ನೇ ದಿನ, ಗೇಜ್ "ತನ್ನನ್ನು ತಾನೇ ಬಲಗೊಳಿಸುವಲ್ಲಿ ಯಶಸ್ವಿಯಾದನು ಮತ್ತು ಅವನ ಕುರ್ಚಿಯ ಕಡೆಗೆ ಒಂದು ಹೆಜ್ಜೆ ಇಟ್ಟನು". ಒಂದು ತಿಂಗಳ ನಂತರ, ಅವನು "ಮೇಲಕ್ಕೆ ಮತ್ತು ಕೆಳಕ್ಕೆ ಮೆಟ್ಟಿಲುಗಳ ಮೇಲೆ ಇಳಿದು ಹತ್ತಬಲ್ಲವನಾಗಿದ್ದ; ಮತ್ತು ಮನೆಯ ವೆರಾಂಡಾದಲ್ಲಿ ನಡೆಯುತ್ತಿದ್ದನು. ಡಾ.ಹಾರ್ಲೋ ಒಂದು ವಾರ ಗೈರುಹಾಜರಾಗಿದ್ದಾಗ ಗೇಜ್ "ಭಾನುವಾರ ಹೊರತುಪಡಿಸಿ ಪ್ರತಿದಿನ ಬೀದಿಯಲ್ಲಿದ್ದನು". ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಇರುವ ಅವನ ಕುಟುಂಬಕ್ಕೆ ಮರಳುವ ಬಯಕೆಯನ್ನು ಅವನ ಸ್ನೇಹಿತರಿಂದ ನಿಯಂತ್ರಿಸಲಾಗದಾಯಿತು. ... ಅವನು ಓವರ್‌ಕೋಟ್ ಇಲ್ಲದೆ ಮತ್ತು ತೆಳುವಾದ ಬೂಟುಗಳೊಂದಿಗೆ ಹೊರ ಹೋದನು; ಒದ್ದೆಯಾದ ಪಾದಗಳ ಕಾರಣ ಮತ್ತೆ ಚಳಿ ನಡುಕಕ್ಕೆ (ಚಿಲ್) ಸಿಕ್ಕಿದನು". ಅವನು ಶೀಘ್ರದಲ್ಲೇ ಜ್ವರವನ್ನೂ ಪಡೆದನು. ಆದರೆ ನವೆಂಬರ್ ಮಧ್ಯದ ಹೊತ್ತಿಗೆ ಅವನು "ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿದ್ದನು. ಮತ್ತೆ ಮನೆಯ ಕಡೆ ನಡೆಯಲು ಬಯಸುತ್ತಿದ್ದನು". ಈ ಸಮಯದಲ್ಲಿ ಹಾರ್ಲೋನ ಮುನ್ನರಿವು- ಮುಂಜಾಗ್ರತೆ ಏನೆಂದರೆ: ಗೇಜ್ "ತನ್ನನ್ನು ನಿಯಂತ್ರಿಸಬಹುದಾದರೆ ಚೇತರಿಸಿಕೊಳ್ಳುವ ಲಕ್ಷಣ ಕಂಡುಬರುತ್ತದೆ".ಎಂದರು.
  • ನವೆಂಬರ್ 25 ರ ಹೊತ್ತಿಗೆ (ಗಾಯಗೊಂಡ 10 ವಾರಗಳ ನಂತರ), ಗೇಜ್ ನ್ಯೂ ಹ್ಯಾಂಪ್‌ಶೈರ್‌ನ ಲೆಬನಾನ್‌ನಲ್ಲಿರುವ ತನ್ನ ಹೆತ್ತವರ ಮನೆಗೆ ಮರಳಲು ಸಾಕಷ್ಟು ಬಲಶಾಲಿಯಾಗಿದ್ದನು, ಅಲ್ಲಿ "ಮುಚ್ಚಿದ ಗಾಡಿಯಲ್ಲಿ" ಪ್ರಯಾಣಿಸಿದನು (ಹುಚ್ಚುರನ್ನು ಸಾಗಿಸಲು ಬಳಸುವ ಒಂದು ಸುತ್ತುವರಿದಗೂಡು ಗಾಡಿಯ ಸಾಗಣೆ). ತನ್ನ ಮನೆಗೆ ಆಗಮಿಸುವಾಗ "ಸಾಕಷ್ಟು ದುರ್ಬಲ ಮತ್ತು ತೆಳ್ಳಗಿನ ... ದುರ್ಬಲ ಮತ್ತು ಬಾಲಿಶ" ಆಗಿದ್ದರೂ, ಡಿಸೆಂಬರ್ ಅಂತ್ಯದ ವೇಳೆಗೆ ಅವನು "ಹೊರ ಪ್ರಯಾಣ ಮಾಡುತ್ತಿದ್ದನು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಧಾರಿಸುತ್ತಿದ್ದನು". ಫೆಬ್ರವರಿ 1849 ರ ಹೊತ್ತಿಗೆ ಅವನು "ಕುದುರೆಗಳು ಮತ್ತು ಕೊಟ್ಟಿಗೆಯ ಬಗ್ಗೆ ಸ್ವಲ್ಪ ಕೆಲಸ ಮಾಡಲು ಸಾಧ್ಯವಾಯಿತು. ದನಕರುಗಳಿಗೆ ಆಹಾರ ನೀಡುವುದು ಇತ್ಯಾದಿ. ಉಳುಮೆ ಮಾಡುವ ಸಮಯ [ಅಂದರೆ ಮೇ ಅಥವಾ ಜೂನ್ ಬಗ್ಗೆ] ಅದರ ನಂತರ ಅವನು ಅರ್ಧ ದಿನದ ಕೆಲಸವನ್ನು ಮಾಡಲು ಮತ್ತು ಶ್ರಮವನ್ನು ಚೆನ್ನಾಗಿ ಭರಿಸಲು ಸಾಧ್ಯವಾಯಿತು". ಆಗಸ್ಟಿನಲ್ಲಿ ಅವರ ತಾಯಿ ವಿಚಾರಿಸಿದ ವೈದ್ಯರಿಗೆ,' ಅವನ ಸ್ಮರಣೆಯು ಸ್ವಲ್ಪಮಟ್ಟಿಗೆ ದುರ್ಬಲಗೊಂಡಿದೆ ಎಂದು ತೋರುತ್ತದೆ, ಆದರೆ ಅಪರಿಚಿತರು ಗಮನಿಸುವುದಿಲ್ಲ,' ಎಂದಳು. []

ಚೇತರಿಕೆಯ ನಂತರ

[ಬದಲಾಯಿಸಿ]
" ನಾನು ಅವನನ್ನು ಉಪಚರಿಸಿ ಚಿಕಿತ್ಸೆ ನೀಡಿದೆ, ದೇವರು ಅವನನ್ನು ಗುಣಪಡಿಸಿದನು "ಎಂದು ಡಾ. ಜೆಎಂ ಹಾರ್ಲೋ ಬರೆದರು," ಒರಟು ಸರಳನ್ನು ಅವನ ಮೆದುಳಿನ ಮೂಲಕ ಚಿತ್ರೀಕರಿಸಲಾಯಿತು "[ಮತ್ತು ಅವನ ಮರಣದ ನಂತರ ಅಧ್ಯಯನಕ್ಕಾಗಿ ಅವನ ತಲೆಬುರುಡೆಯನ್ನು ಪಡೆದರು. ಹಾರ್ಲೋಸ್ ಗ್ರೆಜ್‌ನ ಗಾಯವು ಅವನ ನಡವಳಿಕೆಯನ್ನು ಬದಲಿಸಿದೆ ಎಂದು ಒಪ್ಪಿಕೊಳ್ಳಲು ಫ್ರೆನಾಲಜಿಯಲ್ಲಿನ ಆಸಕ್ತಿ ಅವನನ್ನು ಒತ್ತಾಯಿಸಿತು;
  • ಏಪ್ರಿಲ್ 1849 ರಲ್ಲಿ, ಗೇಜ್ ಕ್ಯಾವೆಂಡಿಶ್‌ಗೆ ಹಿಂತಿರುಗಿದನು ಮತ್ತು ಆ ಸಮಯದಲ್ಲಿ ದೃಷ್ಟಿ ನಷ್ಟ ಮತ್ತು ಎಡಗಣ್ಣಿನ ರೆಪ್ಪೆಯದುರ್ಬಲತೆ, ಹಣೆಯ ಮೇಲೆ ದೊಡ್ಡ ಗಾಯದ ಗುರುತು ಇತ್ತು. ತಲೆಯ ಮೇಲ್ಭಾಗದಲ್ಲಿ ... ಮೂಳೆಯ ಚತುರ್ಭುಜದ ತುಣುಕು ... ಬೆಳೆದ ಗಂಟು ಸಾಕಷ್ಟು ಪ್ರಮುಖವಾಗಿದೆ. ಇದರ ಹಿಂದೆ ಆಳವಾದ ತಗ್ಗು ಬಿದ್ದಿತ್ತು. ಅದು ಎರಡು ಇಂಚುಗಳು ಒಂದೂವರೆ ಇಂಚುಗಳು [51 ರಿಂದ 38 ಮಿಮೀ] ಅಗಲವಿದೆ, ಅದರ ಕೆಳಗೆ ಮೆದುಳಿನ ಬಡಿತಗಳನ್ನು ಗ್ರಹಿಸಬಹುದಿತ್ತು. ಮುಖದ ಎಡಭಾಗದ ಭಾಗಶಃ ಪಾರ್ಶ್ವವಾಯು ಇತ್ತು. ಅವನ ದೈಹಿಕ ಆರೋಗ್ಯವು ಉತ್ತಮವಾಗಿತ್ತು, ಮತ್ತು ಅವನು ಚೇತರಿಸಿಕೊಂಡಿದ್ದ. ತಲೆಯಲ್ಲಿ ಯಾವುದೇ ನೋವು ಇಲ್ಲ, ಆದರೆ ಅದು ವಿವರಿಸಲು ಸಾಧ್ಯವಾಗದ ವಿಲಕ್ಷಣ ಭಾವನೆಯನ್ನು ಹೊಂದಿದೆ ಎಂದು ತೋರುತ್ತದೆ. []

ಅಂತಿಮ ದಿನಗಳು

[ಬದಲಾಯಿಸಿ]
  • 1852 ರಲ್ಲಿ ಗೇಜ್ ಚಿಲಿಯಲ್ಲಿ ಕೆಲಸ ತೆಗೆದುಕೊಂಡನು; ಸ್ಟೇಜ್ ಕೋಚ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಸ್ಪಷ್ಟವಾಗಿ ಕೆಲವು ಸಾಮಾಜಿಕ ಕೌಶಲ್ಯಗಳನ್ನು ಮರಳಿ ಪಡೆದನು ಅಥವಾ ನಿರ್ವಹಿಸಿದನು. ಏಳು ವರ್ಷಗಳ ನಂತರ, ಆರೋಗ್ಯದ ಸ್ಥಿತಿಯು ಕೆಟ್ಟಿದ್ದರಿಂದ, ಅವನ ತಮ್ಮ, ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸಲು ಕ್ಯಾಲಿಫೋರ್ನಿಯಾಗೆ ತೆರಳಿದನು. ಅವನು ನ್ಯೂ ಹ್ಯಾಂಪ್‌ಶೈರ್‌ನಿಂದ ಅಲ್ಲಿಗೆ ತೆರಳಿದ್ದನು. ಗಾಯಗೊಂಡ ಸುಮಾರು 12 ವರ್ಷಗಳ ನಂತರ, ಗೇಜ್ ಅಪಸ್ಮಾರ ರೋಗಗ್ರಸ್ತವಾಗಿ, ಅದರಿಂದ ನಿಧನರಾದನು. ಮೇ 21, 1860 ರಂದು. ಅವನನ್ನು ಸ್ಯಾನ್ ಫ್ರಾನ್ಸಿಸ್ಕೋದ ಲೋನ್ ಮೌಂಟೇನ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಅವನ ತಲೆಬುರುಡೆ ಮತ್ತು ಕಬ್ಬಿಣದ ಟ್ಯಾಂಪಿಂಗ್ ರಾಡ್ ಅನ್ನು ಮ್ಯಾಸಚೂಸೆಟ್ಸ್ನ ಕೇಂಬ್ರಿಡ್ಜ್ನಲ್ಲಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್‍ನ ವಾರೆನ್ ಅನ್ಯಾಟಮಿಕಲ್ ಮ್ಯೂಸಿಯಂನಲ್ಲಿ ಶಾಶ್ವತ ಪ್ರದರ್ಶನಕ್ಕೆ ಇಡಲಾಯಿತು.[][]

ಉಲ್ಲೇಖ

[ಬದಲಾಯಿಸಿ]
  1. story.dotThe Phineas Gage story ; Malcolm Macmillan-School of Psychology, Deakin UniversitySchool of Psychological Sciences, University of Melbourne;Victoria. Australia.
  2. Macmillan, Malcolm B. (2000). An Odd Kind of Fame: Stories of Phineas Gage.MIT Press. ISBN 978-0-262-13363-0. (hbk, 2000) (pbk, 2002)
  3. --Phineas Gage Phineas Gage -American railroad foreman
  4. Barnes, E. J.; Lee, L. B. (2016). "Bring Me the Head of Phineas Gage". Boundless: A Science Comics Anthology. Vol. 1. ISBN 978-0-9903433-5-6
  5. [ Excerpted from Williams's and Harlow's statements in: Harlow (1848), pp. 390–3; Bigelow (1850), p. 16; Harlow (1868), pp. 7–10.]
  6. Excerpted from Williams's and Harlow's statements in: Harlow (1848), pp. 390–3 & onwards; Bigelow (1850),
  7. Excerpted from Williams's and Harlow's statements in: Harlow (1848), pp. 390–3 & onwards; Bigelow (1850),12–3
  8. Phineas Gage American railroad foreman-Phineas Gage | Biography, Injury, & Facts | Britannica
  9. Phineas Gage's Story"
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy